ಅಂತಾರಾಷ್ಟ್ರೀಯ ಟಿ20: ಮತ್ತೊಂದು ಅನಗತ್ಯ ವಿಶ್ವದಾಖಲೆ ಬರೆದ ಮಾಲಿ!

ಕಿಗಾಲಿ, ಜೂನ್ 20: ಅಂತಾರಾಷ್ಟ್ರೀಯ ಟಿ20ಯಲ್ಲಿ ಮಾಲಿ ಮಹಿಳಾ ಕ್ರಿಕೆಟ್ ತಂಡ ಗುರುವಾರ (ಜೂನ್ 20) ಮತ್ತೊಂದು ಅನಗತ್ಯ ವಿಶ್ವದಾಖಲೆ ಬರೆದಿದೆ. ಉಗಾಂಡಾ ವಿರುದ್ಧ ಪಂದ್ಯವನ್ನಾಡಿದ್ದ ಮಾಲಿ ಮಹಿಳೆಯರು ಬರೋಬ್ಬರಿ 300+ ರನ್‌ನಿಂದ ಸೋಲೊಪ್ಪಿಕೊಳ್ಳುವ ಮೂಲಕ ವಿಶ್ವದಾಖಲೆ ಸೃಷ್ಠಿಸಿದ್ದಾರೆ.
ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ
ರುವಾಂಡಾದ ಗಹಂಗಾ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಕ್ವಿಬುಕಾ ಮಹಿಳಾ ಟಿ20 ಟೂರ್ನಿಯಲ್ಲಿ ಉಗಾಂಡ ವಿರುದ್ಧ ಮಾಲಿ ಮೈದಾನಕ್ಕಿಳಿದಿತ್ತು. ಉಗಾಂಡಾ ಆರಂಭಿಕ ಆಟಗಾರ್ತಿ ಪ್ರೋಸ್ಕೊವಿಯಾ ಅಲಾಕೊ 71 ಎಸೆತಗಳಿಗೆ 116 ರನ್ ಬಾರಿಸಿದರು. ಇದರಲ್ಲಿ 15 ಬೌಂಡರಿಗಳೂ ಸೇರಿದ್ದವು.
ಉಗಾಂಡಾ ನಾಯಕಿ ರೀಟಾ ಮುಸಾಮಾಲಿ ಕೂಡ 61 ಎಸೆತಗಳಿಗೆ ಅಜೇಯ 103 ರನ್ ಸಿಡಿಸಿದ್ದರಿಂದ ಉಗಾಂಡಾ 20 ಓವರ್‌ಗೆ 1 ವಿಕೆಟ್ ನಷ್ಟದಲ್ಲಿ 314 ರನ್ ಬಾರಿಸಿತು. ಮತ್ತೊಂದು ಗಮ್ಮತ್ತಿನ ಸಂಗತಿಯೆಂದರೆ ಉಗಾಂಡಾ ಇನ್ನಿಂಗ್ಸ್ ವೇಳೆ ಮಾಲಿ 28 ವೈಡ್, 30 ನೋ ಬಾಲ್ ಸೇರಿ ಒಟ್ಟಿಗೆ 61 ಹೆಚ್ಚುವರಿ ರನ್‌ಗಳನ್ನು ಎದುರಾಳಿಗೆ ನೀಡಿತ್ತು.
315 ರನ್ ಗುರಿ ಬೆನ್ನತ್ತಿದ ಮಾಲಿ 11.1 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 10 ರನ್ ಬಾರಿಸಿ ಶರಣಾಯ್ತು. ಅಲ್ಲಿಗೆ ಮಾಲಿ ಭರ್ಜರಿ 304 ರನ್‌ಗೆ ಸೋತಂತಾಯಿತು. ಇದು ಅಂತಾರಾಷ್ಟ್ರೀಯ ಟಿ20ಯಲ್ಲಿ ಅತೀ ದೊಡ್ಡ ಸೋಲಾಗಿ ಗುರುತಿಸಿಕೊಂಡಿದೆ. ಇದಕ್ಕೂ ಮುನ್ನ ಮಾಲಿ ತಂಡ ಇದೇ ಟೂರ್ನಿಯಲ್ಲಿ ರುವಾಂಡ ಎದುರು ಕೇವಲ 6 ರನ್‌ಗೆ ಆಲ್ ಔಟ್ ಆಗಿ ದಾಖಲೆ ನಿರ್ಮಿಸಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications