ಮುಂಬೈ ವಿಮಾನ ನಿಲ್ದಾಣದಲ್ಲಿ ಕೃನಾಲ್ ಪಾಂಡ್ಯ ವಿಚಾರಣೆ

ಯುಎಇಯಲ್ಲಿ ನಡೆದ ಐಪಿಎಲ್ 2020 ಟ್ರೋಫಿ ಗೆದ್ದ ಭಾರತಕ್ಕೆ ಮರಳಿದ ಮುಂಬೈ ಇಂಡಿಯನ್ಸ್ ಆಟಗಾರ ಕೃನಾಲ್ ಪಾಂಡ್ಯಗೆ ಆಘಾತ ಕಾದಿತ್ತು. ಮುಂಬೈ ವಿಮಾನ ನಿಲ್ದಾಣದಲ್ಲಿ ಕೃನಾಲ್ ಅವರ ಲಗ್ಗೇಜ್ ಪರಿಶೀಲಿಸಿದ ಅಧಿಕಾರಿಗಳು ಅವರನ್ನು ವಿಚಾರಣೆಗೊಳಪಡಿಸಿದ ಸುದ್ದಿ ಬಂದಿದೆ.
ಮುಂಬೈ ತಂಡದ ಆಲ್ ರೌಂಡರ್ ಕೃನಾಲ್ ಅವರು ಅಗತ್ಯಕಿಂತ ಹೆಚ್ಚು ಪ್ರಮಾಣದಲ್ಲಿ ಚಿನ್ನವನ್ನು ಹೊಂದಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದಾರೆ. ಆದಾಯ ಇಲಾಖೆಯ ಗುಪ್ತಚರ ನಿರ್ದೇಶನಾಲಯ(ಡಿ ಆರ್ ಐ) ದ ಅಧಿಕಾರಿಗಳು ಈ ಬಗ್ಗೆ ಮಾಹಿತಿ ಪಡೆದು, ಕೃನಾಲ್ ಅವರನ್ನು ತಡೆದಿದ್ದಾರೆ.
ಚಿನ್ನ, ಆಭರಣ, ದುಬಾರಿ ವಾಚು ಇನ್ನಿತರ ಬೆಲೆ ಬಾಳುವ ವಸ್ತುಗಳನ್ನು ವಶಪಡಿಸಿಕೊಂಡು ಪರಿಶೀಲಿಸಲಾಗುತ್ತಿದೆ.
ಕಾನೂನು ಏನು ಹೇಳುತ್ತದೆ?:
ಭಾರತೀಯ ಪುರುಷ ಪ್ರಯಾಣಿಕರು 50,000 ರು ಮೌಲ್ಯದ ತನಕ ತೆರಿಗೆ ರಹಿತ ಚಿನ್ನಾಭರಣವನ್ನು ತಮ್ಮ ಜೊತೆಗೆ ತರಬಹುದು. ಮಹಿಳಾ ಪ್ರಯಾಣಿಕರಿಗೆ ಇದೇ ಮಿತಿ 1 ಲಕ್ಷ ರು ಮೌಲ್ಯದ ಚಿನ್ನಾಭರಣ ಎಂಬ ಮಿತಿ ಇದೆ. ಮಿತಿ ಮೀರಿದ ಆಭರಣ ಹೊಂದಿದ್ದರೆ ಅಬಕಾರಿ ಸುಂಕ, ಆಮದು ಸುಂಕ ಸೇರಿದಂತೆ ವಿವಿಧ ಸುಂಕಗಳ ಸುಳಿಯಲ್ಲಿ ಸಿಲುಕಬೇಕಾಗುತ್ತದೆ.
ಇದೇ ಚಿನ್ನದ ಗಟ್ಟಿ, ನಾಣ್ಯಗಳಾದರೆ ಪ್ರತಿ ಪ್ರಯಾಣಿಕರಿಗೆ 1 ಕೆಜಿ ಮಿತಿ ಇದೆ. ಇದಲ್ಲದೆ ವಿದೇಶದಲ್ಲಿ ಆರು ಅಥವಾ ಅದಕ್ಕಿಂತ ಹೆಚ್ಚು ತಿಂಗಳು ನೆಲೆಸಿರದಿದ್ದರೆ ಸುಮಾರು 36.05% ಅಬಕಾರಿ ಸುಂಕವನ್ನು ತಮ್ಮ ಜೊತೆಗೆ ವಿದೇಶದಿಂದ ಭಾರತಕ್ಕೆ ತರುವ ಚಿನ್ನದ ಮೇಲೆ ತೆರಬೇಕಾಗುತ್ತದೆ. ಹೆಚ್ಚು ಅವಧಿ ವಿದೇಶದಲ್ಲಿ ನೆಲೆಸಿದ್ದರೆ ತೆರಿಗೆ ಮೊತ್ತ ಕಡಿಮೆಯಾಗುತ್ತದೆ. ಇಲ್ಲದಿದ್ದರೆ ಕಸ್ಟಮ್ ಕಾಯ್ದೆ 1962ರಂತೆ ದಂಡ, ಶಿಕ್ಷೆಗೆ ಒಳಪಡಿಸಲಾಗುತ್ತದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications