ಪ್ರಥಮ ಐಪಿಎಲ್ ಪಂದ್ಯವಾಡಿದ ಸಂದೀಪ್ ಗೆ ಕ್ಲಾರ್ಕ್ ಶುಭಹಾರೈಕೆ

ನವದೆಹಲಿ, ಮೇ 13: ನೇಪಾಳದ ಆಟಗಾರ ಸಂದೀಪ್ ಲಮಿಚ್ಚಾನೆ ಅವರು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಆಡುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) ವಿರುದ್ಧ ಡೆಲ್ಲಿ ಡೇರ್ ಡೆವಿಲ್ಸ್ ಪರ ತಮ್ಮ ಪ್ರಥಮ ಪಂದ್ಯವನ್ನಾಡಿದ್ದಾರೆ.
ಡೆಲ್ಲಿ vs ಆರ್ ಸಿಬಿ ಸ್ಕೋರ್ ಕಾರ್ಡ್
ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಎಂಎಸ್ ಧೋನಿ, ಮೈಕಲ್ ಕ್ಲಾರ್ಕ್ ಅವರನ್ನು ಗುರುವಾಗಿ ಪರಿಗಣಿಸುವ ನೇಪಾಳಿ ಗೂಗ್ಲಿ ಬೌಲರ್ ಅವರು ಐಪಿಎಲ್ ಆಡಲು ಆಯ್ಕೆಯಾದ ಮೊದಲ ನೇಪಾಳಿ ಕ್ರಿಕೆಟರ್ ಎನಿಸಿಕೊಂಡಿದ್ದಾರೆ.
17ವರ್ಷ ವಯಸ್ಸಿನ ಸಂದೀಪ್ ಅವರು ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಆಡುತ್ತಿರುವುದನ್ನು ನೋಡುತ್ತಿದ್ದಂತೆ, ಖುಷಿಯಿಂದ ಸಂದೀಪ್ ಅವರ ಗುರು ಆಸ್ಟ್ರೇಲಿಯಾದ ಮಾಜಿ ನಾಯಕ ಮೈಕಲ್ ಕ್ಲಾರ್ಕ್ ಅವರು ಟ್ವೀಟ್ ಮಾಡಿ ಶುಭಹಾರೈಸಿದರು.
20 ಲಕ್ಷ ರುಗಳಿಗೆ ಸಂದೀಪ್ ಖರೀದಿಸಿದ ಡೆಲ್ಲಿ ಡೇರ್ ಡೆವಿಲ್ಸ್ ಪರ ಆಡಿದ ಸಂದೀಪ್ 4 ಓವರ್ ಎಸೆದು 25ರನ್ನಿತ್ತು 1 ವಿಕೆಟ್ ಪಡೆದರು.
ಸಂದೀಪ್ ಅವರ ತಂದೆ ಭಾರತೀಯ ರೈಲ್ವೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರಿಂದ ಸಂದೀಪ್ ಗೆ ಇಲ್ಲಿನ ವಾತಾವರಣ ಚಿರಪರಿಚಿತವಾಗಿದೆ. ನಾಲ್ಕನೇ ತರಗತಿ ತನಕ ಭಾರತದಲ್ಲೇ ವಿದ್ಯಾಭ್ಯಾಸ ಮಾಡಿದ್ದಾರೆ.
ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್ ಹಾಗೂ ಎಂಎಸ್ ಧೋನಿ ಅವರನ್ನು ಗುರುವಾಗಿ ಪರಿಗಣಿಸಿದ್ದಾರೆ. ಆಸ್ಟ್ರೇಲಿಯಾದ ದಿಗ್ಗಜ ಶೇನ್ ವಾರ್ನ್ ಅವರ ಬೌಲಿಂಗ್ ಶೈಲಿಗೆ ಮಾರು ಹೋಗಿ ಗೂಗ್ಲಿ ಬೌಲರ್ ಆಗಿ ರೂಪುಗೊಳ್ಳುತ್ತಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications