ಪಾಕ್ ಮುಖ್ಯ ಕೋಚ್, ಚೀಫ್ ಸೆಲೆಕ್ಟರ್ ಆಗಿ ಮಿಸ್ಬಾ ಉಲ್ ಹಕ್ ಆಯ್ಕೆ

ಇಸ್ಲಮಾಬಾದ್, ಸೆಪ್ಟೆಂಬರ್ 4: ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಮಿಸ್ಬಾ ಉಲ್ ಹಕ್, ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (ಪಿಸಿಬಿ) ಮುಖ್ಯ ಆಯ್ಕೆದಾರ ಮತ್ತು ಪಾಕ್ ತಂಡದ ಮುಖ್ಯ ಕೋಚ್ ಆಗಿ ಆಯ್ಕೆಯಾಗಿದ್ದಾರೆ. ಪಿಸಿಬಿ, ಪತ್ರಿಕಾ ಪ್ರಕಟಣೆ ಮೂಲಕ ಈ ವಿಚಾರವನ್ನು ಖಾತರಿಪಡಿಸಿದೆ.
ಪಾಕಿಸ್ತಾನ ತಂಡದ ಮಾಜಿ ನಾಯಕ, ಟೀಮ್ ಮ್ಯಾನೇಜರ್ ಮತ್ತು ಕೋಚ್ ಆಗಿದ್ದ ಇಂತಿಖಾಬ್ ಆಲಂ, ಮಾಜಿ ಕ್ರಿಕೆಟಿಗ, ಹೆಚ್ಚು ಗೌತವಾನ್ವಿತ ಕಾಮೆಂಟೇಟರ್ ಬಾಝಿದ್ ಖಾನ್, ಬೋರ್ಡ್ ಆಡಳಿಯ ಸಮಿತಿಯ ಸದಸ್ಯ ಅಸಾದ್ ಅಲಿ ಖಾನ್, ಪಿಸಿಬಿ ಮುಖ್ಯ ಕಾರ್ಯ ನಿರ್ವಾಹಕ ವಾಸೀಮ್ ಖಾನ್ ಮತ್ತು ಪಿಸಿಬಿ ಅಂತಾರಾಷ್ಟ್ರೀಯ ಕ್ರಿಕೆಟ್‌ನ ನಿರ್ದೇಶಕ ಝಾಕಿರ್ ಖಾನ್ ಒಳಗೊಂಡ 5 ಜನರ ಸಮಿತಿ ಮಿಸ್ಬಾ ಅವರನ್ನು ಆರಿಸಿದೆ ಎಂದು ಪಿಸಿಬಿ ಪ್ರಕಟನೆ ಹೇಳಿದೆ.
ಮಿಸ್ಬಾ ಅವರಿಗೆ ಎರಡು ಪ್ರಮುಖ ಜವಾಬ್ದಾರಿಗಳನ್ನು ಹೊರಿಸುವುದರ ಜೊತೆಗೆ ಪಿಸಿಸಿ, ಎರಡು ಬಾರಿ ಮುಖ್ಯ ಕೋಚ್ ಆಗಿದ್ದ, ಐಸಿಸಿ ಹಾಲ್ ಆಫ್ ಫೇಮ್ ಗೌರವಕ್ಕೆ ಪಾತ್ರರಾಗಿರುವ ವಾಕರ್ ಯೂನಿಸ್ ಅವರನ್ನು 3 ಮೂರು ವರ್ಷಗಳ ಅವಧಿಗೆ ಬೌಲಿಂಗ್ ಕೋಚ್ ಆಗಿ ನೇಮಿಸಿದೆ.
ಸೆಪ್ಟೆಂಬರ್ 27ರಿಂದ ಅಕ್ಟೋಬರ್ 9ರ ವರೆಗೆ ಪಾಕಿಸ್ಥಾನಕ್ಕೆ ಪ್ರವಾಸ ಕೈಗೊಳ್ಳುವ ಶ್ರೀಲಂಕಾ ವಿರುದ್ಧದ 3 ಏಕದಿನ ಪಂದ್ಯ, 3 ಟಿ20 ಪಂದ್ಯಗಳನ್ನು ನಿಭಾಯಿಸುವ ಹೊಣೆಗಾರಿಕೆ ಮಿಸ್ಬಾ-ವಾಕರ್ ಮೇಲಿದೆ. ಅದಾಗಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಷಿಪ್‌ನ ಭಾಗವಾಗಿ ಪಾಕಿಸ್ತಾನ ತಂಡ ಬ್ರಿಸ್ಬೇನ್ ವಿರುದ್ಧ ಆಸ್ಟ್ರೆಲಿಯಾದಲ್ಲಿ ನವೆಂಬರ್ 21ರಿಂದ ಮೊದಲ ಟೆಸ್ಟ್ ಪಂದ್ಯ ಆಡಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications