ಒಂದೇ ವರ್ಷದಲ್ಲಿ 2000 T20 ರನ್ ಸಿಡಿಸಿ, ವಿಶ್ವದಾಖಲೆ ನಿರ್ಮಿಸಿದ ಮೊಹಮ್ಮದ್ ರಿಜ್ವಾನ್

ಪಾಕಿಸ್ತಾನದ ಆರಂಭಿಕ ಆಟಗಾರ ಮೊಹಮ್ಮದ್ ರಿಜ್ವಾನ್ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ವಿಶ್ವದಾಖಲೆ ನಿರ್ಮಿಸಿದ್ದಾರೆ. ಕ್ಯಾಲೆಂಡರ್ ವರ್ಷದಲ್ಲಿ 2000 ಟಿ20 ರನ್‌ಗಳಿಸಿದ ವಿಶ್ವದ ಮೊದಲ ಆಟಗಾರ ಎಂಬ ಸಾಧನೆ ಮಾಡಿದ್ದಾರೆ.
ಕರಾಚಿಯ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಅಂತಿಮ ಟಿ20 ಪಂದ್ಯದಲ್ಲಿ ವಿಂಡೀಸ್ ನೀಡಿದ 208ರನ್‌ಗಳ ಬೃಹತ್ ಮೊತ್ತವನ್ನ ಪಾಕಿಸ್ತಾನ ಚೇಸ್ ಮಾಡಿತು. ಪಂದ್ಯದಲ್ಲಿ ಅಬ್ಬರಿಸಿದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಜ್ವಾನ್ 18ನೇ ಟಿ20 ಅರ್ಧಶತಕದೊಂದಿಗೆ ಈ ವರ್ಷ 2000 ಟಿ20 ರನ್ ದಾಖಲಿಸಿದ್ರು.
ವಿಂಡೀಸ್ ವಿರುದ್ಧ 45 ಎಸೆತಗಳಲ್ಲಿ 86 ರನ್ ಸಿಡಿಸಿದ ಮೊಹಮ್ಮದ್ ರಿಜ್ವಾನ್ ಬಾಬರ್ ಅಜಮ್ ಜೊತೆಗೂಡಿ ಶತಕದ ಜೊತೆಯಾಟವಾಡಿದ್ರು. ಜೊತೆಗೆ ಕ್ಯಾಲೆಂಡರ್ ಇಯರ್‌ನಲ್ಲಿ ಅತಿ ಹೆಚ್ಚು T20 ರನ್ ದಾಖಲಿಸಿದ ಕ್ರಿಸ್‌ಗೇಲ್ ದಾಖಲೆಯನ್ನ ನುಚ್ಚು ನೂರು ಮಾಡಿದರು.
2021ರಲ್ಲಿ ಮೊಹಮ್ಮದ್ ರಿಜ್ವಾನ್ ಒಂದು ಶತಕ ಸೇರಿದಂತೆ 18 ಅರ್ಧಶತಕಗಳೊಂದಿಗೆ 2,036ರನ್ ಕಲೆಹಾಕಿದ್ದಾರೆ. ಪಾಕಿಸ್ತಾನ ತಂಡದ ಪರ 1,326ರನ್ ಗಳಿಸಿದ್ದು, ಉಳಿದ ರನ್‌ಗಳು ಲೀಗ್‌ನಿಂದ ಬಂದಿದೆ.
ಈ ಮೊದಲ ವಿಂಡೀಸ್ ದೈತ್ಯ ಕ್ರಿಸ್‌ಗೇಲ್ ಕ್ಯಾಲೆಂಡರ್ ಇಯರ್‌ನಲ್ಲಿ 1665ರನ್ ಗಳಿಸಿದ್ದರು. ಆದ್ರೀಗ ಒಂದು ಕ್ಯಾಲೆಂಡರ್ ವರ್ಷದಲ್ಲಿ 2000 ರನ್ ಗಳ ಗಡಿಯನ್ನು ದಾಟಿದ ಮೊದಲ ಬ್ಯಾಟರ್ ಆಗುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.
ರಾಹುಲ್-ರೋಹಿತ್ ದಾಖಲೆ ಮುರಿದ ಪಾಕಿಸ್ತಾನದ ಆರಂಭಿಕ ಜೋಡಿ
ಮೊಹಮ್ಮದ್ ರಿಜ್ವಾನ್ ಮತ್ತು ನಾಯಕ ಬಾಬರ್ ಅಜಮ್ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾದ ಕೆ.ಎಲ್ ರಾಹುಲ್ ಮತ್ತು ರೋಹಿತ್ ಶರ್ಮಾ ಜೋಡಿಯ ದಾಖಲೆಯನ್ನ ಮುರಿದಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ 208ರನ್ ಚೇಸ್ ಮಾಡಿದ ಪಾಕ್ ಜೋಡಿ ಮೊದಲ ವಿಕೆಟ್‌ಗೆ ಆರನೇ ಬಾರಿಗೆ ಶತಕದ ಜೊತೆಯಾಟ ನೀಡಿತು.
ಕೆ.ಎಲ್ ರಾಹುಲ್ ಮತ್ತು ರೋಹಿತ್ ಶರ್ಮಾ ಟಿ20 ಕ್ರಿಕೆಟ್‌ನಲ್ಲಿ ಐದು ಬಾರಿ ಶತಕದ ಜೊತೆಯಾಟವಾಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications