Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಶ್ವಕಪ್‌: ಪಾಕ್‌ ಪರ ಮೊದಲ ಪಂದ್ಯದಲ್ಲಿ ಈ ಬೌಲರ್‌ ಆಡುವುದು ಡೌಟ್‌!

Mohammad Amir doubtful for Pakistans WC opener

ಲಂಡನ್‌, ಮೇ 30: ಫಿಟ್ನೆಸ್‌ ಸಮಸ್ಯೆ ಕಾರಣ ಪಾಕಿಸ್ತಾನ ತಂಡದ ಅನುಭವಿ ಎಡಗೈ ವೇಗದ ಬೌಲರ್‌ ಮೊಹಮ್ಮದ್‌ ಆಮಿರ್‌, ಈ ಬಾರಿಯ ವಿಶ್ವಕಪ್‌ನಲ್ಲಿ ಪಾಕ್‌ ತಂಡದ ಮೊದಲ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ಆಡುವುದು ಅನುಮಾನವಾಗಿದೆ.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ವೇಳಾಪಟ್ಟಿ

ವರದಿಗಳ ಪ್ರಕಾರ ಮೊಹಮ್ಮದ್‌ ಆಮಿರ್‌ ಪಂದ್ಯವನ್ನಾಡಲು ಸಂಪೂರ್ಣ ಫಿಟ್‌ ಆಗಿಲ್ಲ. ಈ ವಿಚಾರವನ್ನು ಕೋಚ್ ಮಿಕಿ ಆರ್ಥರ್‌ಗೂ ತಿಳಿಸಿದ್ದಾರೆ. ಉಳಿದ ಪಂದ್ಯಗಳಲ್ಲಿ ತಮ್ಮ ಶೇ.100 ರಷ್ಟು ಪ್ರದರ್ಶನ ನೀಡಲು ಅಗತ್ಯದ ವಿರಾಮಕ್ಕಾಗಿ ಆಮಿರ್‌ ಇದೇ ವೇಳೆ ಕೋಚ್‌ ಬಳಿ ಮನವಿ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.

1
43645

ಪಾಕಿಸ್ತಾನ ತಂಡ ಶುಕ್ರವಾರ ನಾಟಿಂಗ್‌ಹ್ಯಾಮ್‌ನ ಟ್ರೆಂಟ್‌ ಬ್ರಿಡ್ಜ್‌ ಕ್ರೀಡಾಂಗಣದಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ತನ್ನ ಅಭಿಯಾನ ಆರಂಭಿಸಲಿದ್ದು, ಆಮಿರ್‌ ಅವರನ್ನು ಈ ಪಂದ್ಯದಲ್ಲಿ ಆಡಿಸದೇ ಇರಲು ತಂಡದ ಮ್ಯಾನೇಜ್ಮೆಂಟ್‌ ನಿರ್ಧರಿಸಿದೆಯಂತೆ.

{headtohead_cricket_5_8}

27 ವರ್ಷದ ಎಡಗೈ ವೇಗಿ ಮೊಹಮ್ಮದ್‌ ಆಮಿರ್‌ ಅವರನ್ನು ಪ್ರಥಮಿಕ ವಿಶ್ವಕಪ್‌ ತಂಡದಿಂದ ಹೊರಗಿಟ್ಟರೂ ಬಳಿಕ ಅಂತಿಮ ತಂಡದಲ್ಲಿ ಸೇರ್ಪಡೆ ಮಾಡಲಾಗಿತ್ತು. ಆದರೆ, ಇಂಗ್ಲೆಂಡ್‌ಗೆ ಕಾಲಿಟ್ಟ ದಿನದಿಂದಲೂ ಆಮಿರ್‌ ಫಿಟ್ನೆಸ್‌ ಸಮಸ್ಯೆ ಎದುರಿಸುತ್ತಿದ್ದಾರೆ. ಅಲ್ಲದೆ ವೈರಲ್‌ ಸೋಂಕಿನ ಕಾರಣ ಇಂಗ್ಲೆಂಡ್‌ ವಿರುದ್ಧದ ಏಕದಿನ ಸರಣಿಯಲ್ಲೂ ಆಮಿರ್‌ ಆಡಿರಲಿಲ್ಲ.

ಗೆಲ್ಲುವ ನೆಚ್ಚಿನ ತಂಡ ಯಾವುದು ಎಂದು ಪ್ರಿಡಿಕ್ಟ್‌ ಮಾಡಲು ಇಲ್ಲಿ ಕ್ಲಿಕ್‌ ಮಾಡಿ

Story first published: Thursday, May 30, 2019, 18:04 [IST]
Other articles published on May 30, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+