ಬ್ರಿಟನ್ ನಾಗರೀಕತ್ವ ಪಡೆಯಲು ಪ್ರಯತ್ನಿಸುತ್ತಿರುವ ಪಾಕ್ ಕ್ರಿಕೆಟಿಗ!

ಇಸ್ಮಾಮಬಾದ್, ಜುಲೈ 28: ಇತ್ತೀಚೆಗಷ್ಟೇ ಟೆಸ್ಟ್ ಕ್ರಿಕೆಟ್‌ಗೆ ಹಠಾತ್ ನಿವೃತ್ತಿ ಘೋಷಿಸಿ ಎಲ್ಲರಿಗೆ ಅಚ್ಚರಿ ಮೂಡಿಸಿದ್ದ ಪಾಕಿಸ್ತಾನ ತಂಡ ವೇಗದ ಬೌಲರ್ ಮೊಹಮ್ಮದ್ ಆಮಿರ್, ಇದೀಗ ಇಂಗ್ಲೆಂಡ್‌ನಲ್ಲಿ ನೆಲೆಸುವ ಉದ್ದೇಶದಿಂದ ಬ್ರಿಟನ್‌ನ ನಾಗರೀಕತ್ವ ಪಡೆಯಲು ಪ್ರಯತ್ನಿಸುವ ಮೂಲಕ ಸುದ್ದಿಯಾಗಿದ್ದಾರೆ.
27 ವರ್ಷದ ಎಡಗೈ ವೇಗದ ಬೌಲರ್ ಮೊಹಮ್ಮದ್ ಆಮಿರ್, ಬ್ರಿಟನ್‌ನ ನಾಗರೀಕತ್ವ ಹೊಂದಿರುವ ನರ್ಗಿಸ್ ಮಲಿಕ್ ಅವರನ್ನು ಮದುವೆಯಾಗಿದ್ದಾರೆ. ಈ ನಿಟ್ಟಿನಲ್ಲಿ ಈಗಾಗಲೇ 'ಸ್ಪೌಸ್ ವೀಸಾ' ಪಡೆದಿರುವ ಅವರು 30 ತಿಂಗಳು ಕಾಲ ಇಂಗ್ಲೆಂಡ್‌ನಲ್ಲಿ ನೆಲೆಸಬಹುದಾಗಿದೆ. ಆದರೆ, ಖಾಯಂ ನಾಗರೀಕತ್ವ ಪಡೆಯುವ ಕಡೆಗೆ ಅವರು ಪ್ರಯತ್ನಿಸುತ್ತಿದ್ದಾರೆ ಎಂದು ವರದಿಯಾಗಿದೆ.
ವಿಂಡೀಸ್ ವಿರುದ್ಧದ ಟಿ20 ಸರಣಿಗೆ ಟೀಮ್ ಇಂಡಿಯಾದ ಸಂಭಾವ್ಯ 11
ಇಷ್ಟೇ ಅಲ್ಲದ ಎಲಂಡನ್‌ನಲ್ಲಿ ಮನೆ ಖರೀದಿಸಲು ಮೊಹಮ್ಮದ್ ಆಮಿರ್ ಪ್ರಯತ್ನಿಸುತ್ತಿದ್ದಾರೆ ಎಂದು ಕ್ರಿಕೆಟ್ ಪಾಕಿಸ್ತಾನ್ ಡಾಟ್ ಕಾಮ್ ವರದಿ ಮಾಡಿದೆ. ಆದರೆ, ಆಮಿರ್‌ಗೆ ಬ್ರಿಟನ್‌ನ ಖಾಯಂ ನಾಗರೀಕತ್ವ ಸಿಗುವುದು ಕೊಂಚ ಕಷ್ಟವಾಗಲಿದೆ. ಏಕೆಂದರೆ ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಸಿಕ್ಕಿಬಿದ್ದು ಅವರು ಇಂಗ್ಲೆಂಡ್‌ನಲ್ಲಿ ಜೈಲು ಸೇರುವ ಮೂಲಕ ಕಂಬಿ ಎಣಿಸಿದ್ದರು.
ಸ್ಪಾಟ್ ಫಿಕ್ಸಿಂಗ್ ಹರಣದಲ್ಲಿ ಸಿಕ್ಕಿಬಿದ್ದು ಹಲವು ವರ್ಷಗಳ ಕಾಲ ನಿಷೇಧ ಶಿಕ್ಷೆ ಎದುರಿಸಿದ್ದ ಆಮಿರ್, ಮರಳಿ ಪಾಕಿಸ್ತಾನ ತಂಡದಲ್ಲಿ ಸ್ಥಾನ ಪಡೆದ ನಂತರ ಹಲವು ಬಾರಿ ಪಾಕ್ ತಂಡದೊಂದಿಗೆ ಇಂಗ್ಲೆಂಡ್‌ಗೆ ತೆರಳಿದ್ದಾರೆ. ಇತ್ತೀಚೆಗಷ್ಟೇ ಇಂಗ್ಲೆಂಡ್ ಮತ್ತು ವೇಲ್ಸ್ ಆತಿಥ್ಯದಲ್ಲಿ ನಡೆದ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲೂ ಆಮಿರ್ ಪಾಕಿಸ್ತಾನ ತಂಡವನ್ನು ಪ್ರತಿನಿಧಿಸಿದ್ದರು.
ಇನ್ನು ಎರಡು ದಿನದ ಹಿಂದಷ್ಟೇ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದ ಆಮಿರ್, ಏಕದಿನ ಮತ್ತು ಟಿ20 ಮಾದರಿಯಲ್ಲಿ ಪಾಕಿಸ್ತಾನ ತಂಡದ ಪರ ತಮ್ಮ ಸೇವೆ ಮುಂದುವರಿಸುವುದಾಗಿ ಹೇಳಿದ್ದರು. ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಪ್ರಕಟಿಸಿದ ಅವರ ನಿರ್ಧಾರವನ್ನು ಪಾಕಿಸ್ತಾನ ಮಾಜಿ ಕ್ರಿಕೆಟಿಗರಾದ ವಸೀಮ್ ಅಕ್ರಮ್ ಮತ್ತು ಶೊಯೇಬ್ ಅಖ್ತರ್ ಸೇರಿದಂತೆ ಹಲವರು ಟೀಕಿಸಿದ್ದರು.

ಆಮಿರ್ ಟೆಸ್ಟ್ ಸಾಧನೆ
36 ಪಂದ್ಯ
119 ವಿಕೆಟ್
6/44 ಶ್ರೇಷ್ಠ ಸಾಧನೆ
30.47 ಸರಾಸರಿ
2.85 ಎಕಾನಮಿ
64.0 ಸ್ಟ್ರೈಕ್ ರೇಟ್
04 ಐದು ವಿಕೆಟ್ ಸಾಧನೆ

ಒಡಿಐ ಸಾಧನೆ
59 ಪಂದ್ಯ
77 ವಿಕೆಟ್
5/30 ಶ್ರೇಷ್ಠ ಸಾಧನೆ
30.24 ಸರಾಸರಿ
4.80 ಎಕಾನಮಿ
37.8 ಸ್ಟ್ರೈಕ್‌ರೇಟ್
01 ಐದು ವಿಕೆಟ್ ಸಾಧನೆ

ಅಂತಾರಾಷ್ಟ್ರೀಯ ಟಿ20 ಸಾಧನೆ
42 ಪಂದ್ಯ
55 ವಿಕೆಟ್
4/13 ಶ್ರೇಷ್ಠ ಸಾಧನೆ
19.38 ಸರಾಸರಿ
6.83 ಎಕಾನಮಿ
17.0 ಸ್ಟ್ರೈಕ್‌ರೇಟ್
01 ನಾಲ್ಕು ವಿಕೆಟ್ ಸಾಧನೆ

ಪ್ರಥಮ ದರ್ಜೆ ಸಾಧನೆ
66 ಪಂದ್ಯ
254 ವಿಕೆಟ್
7/61 ಶ್ರೇಷ್ಠ ಸಾಧನೆ
22.77 ಸರಾಸರಿ
2.84 ಎಕಾನಮಿ
13 ಐದು ವಿಕೆಟ್ ಸಾಧನೆ
02 ಹತ್ತು ವಿಕೆಟ್ ಸಾಧನೆ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications