ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಂಡೀಸ್‌ ವಿರುದ್ಧದ ಟಿ20 ಸರಣಿಗೆ ಟೀಮ್‌ ಇಂಡಿಯಾದ ಸಂಭಾವ್ಯ 11

Team Indias Possible Playing 11

ಬೆಂಗಳೂರು, ಜುಲೈ 28: ಏಕದಿನ ಕ್ರಿಕೆಟ್‌ ವಿಶ್ವಕಪ್‌ ಬಹುಬೇಗನೆ ಮರೆತು 2020ರ ಟಿ20 ವಿಶ್ವಕಪ್‌ ಕಡೆಗೆ ಸಜ್ಜಾಗುವುದನ್ನು ಎದುರು ನೋಡುತ್ತಿರುವ ಟೀಮ್‌ ಇಂಡಿಯಾ, ಇನ್ನೇನು ಕೆರಿಬಿಯನ್‌ ನಾಡಿಗೆ ಪ್ರಯಾಣ ಬೆಳೆಸಲಿದ್ದು, ಏಕದಿನ, ಟಿ20 ಹಾಗೂ ಟೆಸ್ಟ್‌ ಸರಣಿಗಳನ್ನಾಡಲಿದೆ.

ವಿಶ್ವಕಪ್‌ ವೈಫಲ್ಯದ ಬಳಿಕ ತಂಡದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ ಬಲ ಪಡಿಸುವ ಕಡೆಗೆ ಭಾರತ ತಂಡ ಮೊದಲ ಆದ್ಯತೆ ನೀಡಿದೆ. ಅಂತೆಯೇ ವಿಂಡೀಸ್‌ ಪ್ರವಾಸಕ್ಕೆ ಪ್ರಕಟಿಸಲಾದ ಭಾರತ ತಂಡದಲ್ಲಿ ಹಲವು ಯುವ ಪ್ರತಿಭೆಗಳಿಗೆ ಅವಕಾಶ ನೀಡಲಾಗಿದೆ. ಪ್ರಮುಖವಾಗಿ ನಾಲ್ಕನೇ ಕ್ರಮಾಂಕದ ಬ್ಯಾಟಿಂಗ್‌ ಗೊಂದಲ ನಿವಾರಣೆ ಕಡೆಗೆ ಗಮನ ನೀಡಲಾಗಿದೆ.

ಕಿಂಗ್‌ ಕೊಹ್ಲಿ ಕಟ್ಟಿದ ಕಬಡ್ಡಿ ತಂಡದಲ್ಲಿ ಯಾರೆಲ್ಲಾ ಇದ್ದಾರೆ ಗೊತ್ತಾ?ಕಿಂಗ್‌ ಕೊಹ್ಲಿ ಕಟ್ಟಿದ ಕಬಡ್ಡಿ ತಂಡದಲ್ಲಿ ಯಾರೆಲ್ಲಾ ಇದ್ದಾರೆ ಗೊತ್ತಾ?

ಆಗಸ್ಟ್‌ 3ರಂದು ಆರಂಭವಾಗಲಿರುವ ಟಿ20 ಸರಣಿಯಲ್ಲಿ ಭಾರತ ಮೂರು ಪಂದ್ಯಗಳನ್ನು ಆಡಲಿದ್ದು, ಬಳಿಕ ಮೂರು ಏಕದಿನ ಹಾಗೂ ಚೊಚ್ಚಲ ಆವೃತ್ತಿಯ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ನ ಭಾಗವಾಗಿ ಎರಡು ಟೆಸ್ಟ್‌ ಪಂದ್ಯಗಳನ್ನು ಆಡಲಿದೆ. ಎಲ್ಲಾ ಪಂದ್ಯಗಳು ಆಗಸ್ಟ್‌ 31ರ ಒಳಗಾಗಿ ಅಂತ್ಯಗೊಳ್ಳಲಿದೆ.

ಈ ಬಾರಿ ವೆಸ್ಟ್‌ ಇಂಡೀಸ್‌ ಪ್ರವಾಸದಲ್ಲಿನ ಎರಡು ಟಿ20 ಪಂದ್ಯಗಳನ್ನು ಅಮೆರಿಕದಲ್ಲಿ ಆಯೋಜಿಸಲಾಗಿದೆ. ಮೊದಲ ಎರಡು ಟಿ20 ಪಂದ್ಯಗಳು ಅಮೆರಿಕದ ಫ್ಲೋರಿಡಾದ ಲೌಡರ್‌ಹಿಲ್‌ ಕ್ರೀಡಾಂಗಣದಲ್ಲಿ ನಡೆಯಲಿವೆ. ಬಳಿಕ ಮೂರನೇ ಹಾಗೂ ಅಂತಿಮ ಟಿ20 ಪಂದ್ಯ ಗಯಾನದಲ್ಲಿ ನಡೆಯಲಿದೆ.

ಕರ್ನಾಟಕ ಪ್ರೀಮಿಯರ್‌ ಲೀಗ್‌ 2019: ಎಲ್ಲಾ ತಂಡಗಳ ಸಂಪೂರ್ಣ ವಿವರ ಇಲ್ಲಿದೆ

ಇನ್ನು ಟಿ20 ತಂಡದಲ್ಲಿ ಟೀಮ್‌ ಇಂಡಿಯಾದ ಆಯ್ಕೆ ಸಮಿತಿಯು ಯುವ ಪ್ರತಿಭೆಗಳಿಗೆ ಮಣೆ ಹಾಕಿದ್ದು, ದೀಪಕ್‌ ಮತ್ತು ರಾಹುಲ್‌ ಚಹರ್‌ ಸೋದರರು ಸ್ಥಾನ ಗಿಟ್ಟಿಸಿದ್ದಾರೆ. ಹೀಗಿರುವಾಗ ಟೀಮ್‌ ಇಂಡಿಯಾದ ಪ್ಲೇಯಿಂಗ್‌ 11ನಲ್ಲಿ ಸ್ಥಾನ ಗಿಟ್ಟಿಸಬಲ್ಲ ಆಟಗಾರರು ಯಾರೆಂದು ಸಹಜವಾಗಿಯೇ ಕುತೂಹಲ ಕೆರಳುತ್ತದೆ. ಈ ನಿಟ್ಟಿನಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧದ ಟಿ20 ಸರಣಿಗೆ ಭಾರತದ ಸಂಭಾವ್ಯ ಪ್ಲೇಯಿಂಗ್‌ 11 ಆಟಗಾರರನ್ನು ಮೈಖೇಲ್‌ ಕನ್ನಡ ಹೆಸರಿಸಿದೆ.

ವಿಂಡೀಸ್‌ ವಿರುದ್ಧ ಟಿ20 ಸರಣಿಗೆ ಭಾರತದ ಸಂಭಾವ್ಯ 11

ವಿಂಡೀಸ್‌ ವಿರುದ್ಧ ಟಿ20 ಸರಣಿಗೆ ಭಾರತದ ಸಂಭಾವ್ಯ 11

ರೋಹಿತ್‌ ಶರ್ಮಾ (ಓಪನರ್‌), ಶಿಖರ್‌ ಧವನ್‌ (ಓಪನರ್‌), ವಿರಾಟ್‌ ಕೊಹ್ಲಿ (ನಂ.3, ನಾಯಕ), ಕೆ.ಎಲ್‌ ರಾಹುಲ್‌ (ನಂ.4, ಬ್ಯಾಟ್ಸ್‌ಮನ್‌), ಶ್ರೇಯಸ್‌ ಅಯ್ಯರ್‌ ಅಥವಾ ಮನೀಶ್‌ ಪಾಂಡೆ (ನಂ.5, ಬ್ಯಾಟ್ಸ್‌ಮನ್‌), ರಿಷಭ್‌ ಪಂತ್‌ (ನಂ.6, ವಿಕೆಟ್‌ಕೀಪರ್‌), ಕೃಣಾಲ್‌ ಪಾಂಡ್ಯ (ನಂ.7, ಆಲ್‌ರೌಂಡರ್‌), ವಾಷಿಂಗ್ಟನ್‌ ಸುಂದರ್‌ (ನಂ.8, ಸ್ಪಿನ್ನಿಂಗ್‌ ಆಲ್‌ರೌಂಡರ್‌), ಭುವನೇಶ್ವರ್‌ ಕುಮಾರ್‌ (ನಂ.9, ವೇಗಿ), ದೀಪಕ್‌ ಚಹರ್‌ (ನಂ.10, ವೇಗಿ), ಖಲೀಲ್‌ ಅಹ್ಮದ್‌ ಅಥವಾ ನವದೀಪ್‌ ಸೈನಿ (ನಂ.11, ವೇಗಿ).

ಮನೀಶ್‌ ಪಂಡೆಗೆ ಸ್ಥಾನ

ಮನೀಶ್‌ ಪಂಡೆಗೆ ಸ್ಥಾನ

ವೆಸ್ಟ್‌ ಇಂಡೀಸ್‌ ಪ್ರವಾಸಕ್ಕೆ ಪ್ರಕಟಿಸಲಾದ ಟೀಮ್‌ ಇಂಡಿಯಾದಲ್ಲಿ ಕರ್ನಾಟಕದ ಮೂವರು ಬ್ಯಾಟ್ಸ್‌ಮನ್‌ಗಳು ಸ್ಥಾನ ಪಡೆದಿದ್ದಾರೆ. ಟೀಮ್‌ ಇಂಡಿಯಾದ ಖಾಯಂ ಸದಸ್ಯ ಆಗಿರುವ ಆರಂಭಕಾರ ಕೆ.ಎಲ್‌ ರಾಹುಲ್‌ ಅವರಿಗೆ ಟೆಸ್ಟ್‌, ಏಕದಿನ ಮತ್ತು ಟಿ20 ಮೂರರಲ್ಲೂ ಸ್ಥಾನ ಲಭ್ಯವಾಗಿದೆ. ಮತ್ತೊಂದೆಡೆ ಆಸ್ಟ್ರೇಲಿಯಾ ಪ್ರವಾಸದ ವೇಳೆ ಭಾರತ ಟೆಸ್ಟ್‌ ತಂಡಕ್ಕೆ ಪದಾರ್ಪಣೆ ಮಾಡಿದ ಆರಂಭಿಕ ಬ್ಯಾಟರ್‌ ಮಯಾಂಕ್‌ ಅಗರ್ವಾಲ್‌ ಅವರಿಗೂ ಟೆಸ್ಟ್‌ ತಂಡದಲ್ಲಿನ ಸ್ಥಾನ ಸದ್ಯಕ್ಕೆ ಭದ್ರವಾಗಿದೆ. ಇನ್ನು ಭಾರತ 'ಎ' ತಂಡದ ಪರ ರನ್‌ ಹೊಳೆಯನ್ನೇ ಹರಿಸುತ್ತಿರುವ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಮನೀಶ್‌ ಪಾಂಡೆಗೂ ಟೀಮ್‌ ಇಂಡಿಯಾದ ಬುಲಾವ್‌ ಮರಳಿ ಸಿಕ್ಕಿದ್ದು, ಏಕದಿನ ಮತ್ತು ಟಿ20 ತಂಡಗಳಲ್ಲಿ ಸ್ಥಾನ ಸಿಕ್ಕಿದೆ.

ಭಾರತ ಟೆಸ್ಟ್‌ ತಂಡ (2 ಪಂದ್ಯ, ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌)

ಭಾರತ ಟೆಸ್ಟ್‌ ತಂಡ (2 ಪಂದ್ಯ, ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌)

ವಿರಾಟ್‌ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ (ಉಪನಾಯಕ), ಮಯಾಂಕ್‌ ಅಗರ್ವಾಲ್‌, ಕೆ.ಎಲ್‌ ರಾಹುಲ್‌, ಚೇತೇಶ್ವರ್‌ ಪೂಜಾರ, ಹನುಮ ವಿಹಾರಿ, ರೋಹಿತ್‌ ಶರ್ಮಾ, ರಿಷಭ್‌ ಪಂತ್‌ (ವಿಕೆಟ್‌-ಕೀಪರ್‌), ವೃದ್ಧಿಮಾನ್‌ ಸಹಾ (ವಿಕೆಟ್‌ಕೀಪರ್‌), ಆರ್‌. ಅಶ್ವಿನ್‌, ರವೀಂದ್ರ ಜಡೇಜಾ, ಕುಲ್ದೀಪ್‌ ಯಾದವ್‌, ಇಶಾಂತ್‌ ಶರ್ಮಾ, ಮೊಹಮ್ಮದ್‌ ಶಮಿ, ಜಸ್‌ಪ್ರೀತ್‌ ಬುಮ್ರಾ, ಉಮೇಶ್‌ ಯಾದವ್‌.

ಏಕದಿನ ಸರಣಿಗೆ ಭಾರತ ತಂಡ (ಮೂರು ಪಂದ್ಯಗಳು)

ಏಕದಿನ ಸರಣಿಗೆ ಭಾರತ ತಂಡ (ಮೂರು ಪಂದ್ಯಗಳು)

ವಿರಾಟ್ ಕೊಹ್ಲಿ (ನಾಯಕ), ರೋಹಿತ್‌ ಶರ್ಮಾ (ಉಪನಾಯಕ), ಶಿಖರ್‌ ಧವನ್‌, ಕೆ.ಎಲ್‌ ರಾಹುಲ್‌, ಶ್ರೇಯಸ್‌ ಅಯ್ಯರ್‌, ಮನೀಶ್‌ ಪಾಂಡೆ, ರಿಷಭ್‌ ಪಂತ್‌ (ವಿಕೆಟ್‌ಕೀಪರ್‌), ರವೀಂದ್ರ ಜಡೇಜಾ, ಕುಲ್ದೀಪ್‌ ಯಾದವ್‌, ಯುಜ್ವೆಂದ್ರ ಚಹಲ್‌, ಕೇದಾರ್‌ ಜಾಧವ್‌, ಮೊಹಮ್ಮದ್‌ ಶಮಿ, ಭುವನೇಶ್ವರ್‌ ಕುಮಾರ್‌, ಖಲೀಲ್‌ ಅಹ್ಮದ್‌, ನವದೀಪ್‌ ಸೈನಿ.

Story first published: Sunday, July 28, 2019, 19:43 [IST]
Other articles published on Jul 28, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X