
ಫಿನಿಷರ್‌ಗಳ ಬಗ್ಗೆ ಕೈಫ್ ಮಾತು
ಮುಂದಿನ ವಿಶ್ವಕಪ್‌ನಲ್ಲಿ ಭಾರತ ತಂಡ ಕೆಳ ಕ್ರಮಾಂಕದಲ್ಲಿ ಅತ್ಯುತ್ತಮ ಫಿನಿಷರ್‌ಗಳನ್ನು ಹೊಂದಿರಬೇಕಾಗುತ್ತದೆ. ಅತ್ಯುತ್ತಮ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟಿಂಗ್ ನಡೆಸುವ ಸಾಮರ್ಥ್ಯ ಹೊಂದಿರುವ ಆಟಗಾರರು ಈ ಹಂತದಲ್ಲಿ ಭಾರತ ತಂಡಕ್ಕೆ ನೆರವಾಗಲಿದ್ದಾರೆ ಎಂದಿದ್ದಾರೆ ಮೊಹಮ್ಮದ್ ಕೈಫ್. ಹಾಗಾದಲ್ಲಿ ಮಾತ್ರವೇ ಭಾರತ ತಂಡ ಮುಂದಿನ ಟಿ20 ವಿಶ್ವಕಪ್‌ನಲ್ಲಿ ಅತ್ಯುತ್ತಮ ಪ್ರದರ್ಶನದೊಂದಿಗೆ ಗೆಲುವು ಸಾಧಿಸಲಿದೆ ಎಂಬ ಅಭಿಪ್ರಾಯಪಟ್ಟಿದ್ದಾರೆ ಮೊಹಮ್ಮದ್ ಕೈಫ್.

ಪಾಂಡ್ಯ ಹಾಗೂ ಡಿಕೆ ಇರಲೇಬೇಕು ಎಂದ ಕೈಫ್
ಮುಂದಿನ ವಿಶ್ವಕಪ್ ತಂಡದಲ್ಲಿ ಇರಲೇಬೇಕಾದ ಇಬ್ಬರು ಆಟಗಾರರು ಎಂದು ಮೊಹಮ್ಮದ್ ಕೈಫ್ ಗುರುತಿಸಿದ್ದು ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಹಾಗೂ ದಿನೇಶ್ ಕಾರ್ತಿಕ್ ಅವರನ್ನು. ಈ ಇಬ್ಬರು ಆಟಗಾರರು ಅಂತಿಮ ಹಂತದಲ್ಲಿ ಅತ್ಯುತ್ತಮ ಸ್ಟ್ರೈಕ್‌ರೇಟ್‌ನೊಂದಿಗೆ ಬ್ಯಾಟಿಂಗ್ ನಡೆಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಇದು ಮುಂದಿನ ವಿಶ್ವಕಪ್‌ನಲ್ಲಿ ನಿರ್ಣಾಯಕ ಪಾತ್ರವಹಿಸಲಿದೆ ಎಂದಿದ್ದಾರೆ ಮೊಹಮ್ಮದ್ ಕೈಫ್.
ಇಂಜ್ಯುರಿ ಹಿನ್ನಲೆ, ಚಿಕಿತ್ಸೆಗಾಗಿ ಜರ್ಮನಿ ತಲುಪಿದ ಕೆ.ಎಲ್ ರಾಹುಲ್: ಇಂಗ್ಲೆಂಡ್ ಪ್ರವಾಸಕ್ಕೆ ಅಲಭ್ಯ

ಅಗ್ರ ಕ್ರಮಾಂಕದಲ್ಲಿ ಪ್ರಮುಖ ಆಟಗಾರರಿದ್ದಾರೆ
ಮುಂದುವರಿದು ಮಾತನಾಡಿದ ಮೊಹಮ್ಮದ್ ಕೈಫ್ ಅಗ್ರ ಕ್ರಮಾಂಕದಲ್ಲಿ ಪ್ರಮುಖ ಆಟಗಾರರಿದ್ದಾರೆ ಎಂದಿದ್ದಾರೆ. "ನೀವು ಅಗ್ರ ಕ್ರಮಾಂಕವನ್ನು ನೋಡಿದರೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಕೆಎಲ್ ರಾಹುಲ್, ಇಶಾನ್ ಕಿಶನ್, ಶ್ರೇಯಸ್ ಐಯ್ಯರ್ ಅವರಂತಾ ಆಟಗಾರರು ಇದ್ದಾರೆ. ಆದರೆ ಪಂದ್ಯವನ್ನು ಫಿನಿಷ್ ಮಾಡಲು ಹಾರ್ದಿಕ್ ಪಾಂಡ್ಯ ಹಾಗೂ ದಿನೇಶ್ ಕಾರ್ತಿಕ್ ಅವರಂತಾ ಆಟಗಾರರ ಅಗತ್ಯ ಬಹಳಷ್ಟಿದೆ. ಇವರು ಅಂತಿಮ ಹಂತದಲ್ಲಿ ಸ್ಟ್ರೈಕ್‌ರೇಟ್‌ಅನ್ನು ಹೆಚ್ಚಿಸಲಿದ್ದಾರೆ" ಎಂದು ಮೊಹಮ್ಮದ್ ಕೈಪ್ ವಿವರಿಸಿದ್ದಾರೆ.

ಐರ್ಲೆಂಡ್ ವಿರುದ್ಧ ಟಿ20 ಸರಣಿಯನ್ನಾಡಲಿದೆ ಭಾರತ
ಐರ್ಲೆಂಡ್ ವಿರುದ್ಧ ಭಾರತ ಎರಡು ಪಂದ್ಯಗಳ ಟಿ20 ಸರಣಿಯನ್ನು ಆಡಲಿದ್ದು ಹಾರ್ದಿಕ್ ಪಾಂಡ್ಯ ಈ ಸರಣಿಯಲ್ಲಿ ಭಾರತ ತಂಡದ ನಾಯಕತ್ವ ವಹಿಸಲಿದ್ದಾರೆ. ಐಪಿಎಲ್‌ನಲ್ಲಿ ಹಾರ್ದಿಕ್ ಪಾಂಡ್ಯ ಗುಜರಾತ್ ಟೈಟನ್ಸ್ ನಾಯಕನಾಗಿ ಹಾಗೂ ಆಟಗಾರನಾಗಿ ಅದ್ಭುತ ಫಾರ್ಮ್ ಪ್ರದರ್ಶಿಸಿದ್ದು ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿಯೂ ಮಿಂಚಿದ್ದಾರೆ. ಇನ್ನು ಅನುಭವಿ ಆಟಗಾರ ದಿನೇಶ್ ಕಾರ್ತಿಕ್ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡದ ಪರವಾಗಿ ನೀಡಿದ ಅಮೋಘ ಫಾರ್ಮ್‌ಅನ್ನು ರಾಷ್ಟ್ರೀಯ ತಂಡದ ಪರವಾಗಿಯೂ ನೀಡುವ ಮೂಲಕ ಮಿಂಚಿದ್ದಾರೆ. ಹೀಗಾಘಿ ಮುಂದಿನ ವಿಶ್ವಕಪ್‌ನ ತಂಡದಲ್ಲಿ ಸ್ಥಾನ ಪಡೆಯುವ ರೇಸ್‌ನಲ್ಲಿ ಡಿಕೆ ಮುಂದಿದ್ದಾರೆ.


Click it and Unblock the Notifications












