ಇಂಜ್ಯುರಿ ಹಿನ್ನಲೆ, ಚಿಕಿತ್ಸೆಗಾಗಿ ಜರ್ಮನಿ ತಲುಪಿದ ಕೆ.ಎಲ್ ರಾಹುಲ್‌: ಇಂಗ್ಲೆಂಡ್ ಪ್ರವಾಸಕ್ಕೆ ಅಲಭ್ಯ

ಭಾರತ ಕ್ರಿಕೆಟ್ ತಂಡದ ಉಪನಾಯಕ ಕೆ.ಎಲ್ ರಾಹುಲ್ ಜರ್ಮನಿಯಲ್ಲಿ ಕಾಣಿಸಿಕೊಂಡಿದ್ದಾರೆ. ಗಾಯದಿಂದಾಗಿ ದೀರ್ಘಕಾಲ ವಿಶ್ರಾಂತಿ ಪಡೆದಿರುವ ಕೆ.ಎಲ್ ರಾಹುಲ್ ದಕ್ಷಿಣ ಆಫ್ರಿಕಾ ವಿರುದ್ಧ ಐದು ಪಂದ್ಯಗಳ ಟಿ20 ಸರಣಿಯನ್ನು ಮಿಸ್ ಮಾಡಿಕೊಂಡಿದ್ದರು. ಇದರ ಜೊತೆಗೆ ಇಂಗ್ಲೆಂಡ್ ಪ್ರವಾಸದಿಂದಲೂ ಹೊರಗುಳಿದಿರುವ ಕೆ.ಎಲ್‌ ರಾಹುಲ್‌ ಚೇತರಿಕೆಗೆ ಜರ್ಮನಿಗೆ ಹೋಗಿದ್ದಾರೆ.

ಮುಂಬರುವ ಐರ್ಲೆಂಡ್‌ ವಿರುದ್ಧದ ಎರಡು ಟಿ20 ಪಂದ್ಯಗಳಿಗೆ ಹಾರ್ದಿಕ್ ಪಾಂಡ್ಯ ನಾಯಕನಾಗಿದ್ದು, ಭುವನೇಶ್ವರ್ ಕುಮಾರ್ ಉಪನಾಯಕಾಗಿದ್ದಾರೆ. ಕೆ.ಎಲ್ ರಾಹುಲ್ ಈ ಎರಡರಲ್ಲೂ ಸದಸ್ಯರಲ್ಲ. ಇದಕ್ಕೆ ಕಾರಣ ಅವರು ತೊಡೆಸಂದು ಗಾಯದಿಂದ ಬಳಲುತ್ತಿದ್ದಾರೆ. ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಫಿಟ್ನೆಸ್ ಪರೀಕ್ಷೆ ಮುಗಿಸಿ ಜರ್ಮನಿಗೆ ತೆರಳಿದ್ದು, ಬರ್ಲಿನ್‌ ತಲುಪಿದ್ದಾರೆ. ಕೆಎಲ್ ರಾಹುಲ್ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ.

ಇಂಗ್ಲೆಂಡ್, ಐರ್ಲೆಂಡ್ ಬಳಿಕ ವೆಸ್ಟ್ ಇಂಡೀಸ್ ಪ್ರವಾಸ

ಇಂಗ್ಲೆಂಡ್, ಐರ್ಲೆಂಡ್ ಬಳಿಕ ವೆಸ್ಟ್ ಇಂಡೀಸ್ ಪ್ರವಾಸ

ಇಂಗ್ಲೆಂಡ್ ವಿರುದ್ಧದ ಒಂದು ಟೆಸ್ಟ್, ಮೂರು ಟಿ20 ಮತ್ತು ಎರಡು ಏಕದಿನ ಪಂದ್ಯಗಳನ್ನು ಮುಗಿಸಿದ ಭಾರತ ತಂಡ ಶೀಘ್ರದಲ್ಲೇ ವೆಸ್ಟ್ ಇಂಡೀಸ್‌ಗೆ ತೆರಳಲಿದೆ. ಈ ಪ್ರವಾಸದ ವೇಳೆಗೆ ಕೆಎಲ್ ರಾಹುಲ್ ಗಾಯದಿಂದ ಚೇತರಿಸಿಕೊಳ್ಳುತ್ತಾರೆ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನಿರೀಕ್ಷಿಸಿದೆ. ಅದಕ್ಕಾಗಿಯೇ ಅವರನ್ನು ಉತ್ತಮ ಚಿಕಿತ್ಸೆಗಾಗಿ ಜರ್ಮನಿಗೆ ಕಳುಹಿಸಲಾಗಿದೆ. ಇನ್ನು ಸುಮಾರು ಒಂದು ತಿಂಗಳ ಕಾಲ ಕೆ.ಎಲ್ ರಾಹುಲ್ ಜರ್ಮನಿಯಲ್ಲಿ ಚಿಕಿತ್ಸೆ ಪಡೆಯಬೇಕಾಗಿದೆ.

ಐಪಿಎಲ್‌ನಲ್ಲಿ ಗಾಯಗೊಂಡಿದ್ದ ಕೆ.ಎಲ್ ರಾಹುಲ್

ಐಪಿಎಲ್‌ನಲ್ಲಿ ಗಾಯಗೊಂಡಿದ್ದ ಕೆ.ಎಲ್ ರಾಹುಲ್

ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಾವಳಿಯ ಸಂದರ್ಭದಲ್ಲಿ ಅವರು ತೊಡೆಸಂದು ಗಾಯಕ್ಕೆ ಒಳಗಾಗಿದ್ದರು ಮತ್ತು ಆ ಸಮಯದಲ್ಲಿ ಅದು ಅಪಾಯಕಾರಿ ಅಲ್ಲದ ಕಾರಣ ಋತುವನ್ನು ಮುಂದುವರೆಸಿದರು ಎಂದು ನಿಕಟ ಮೂಲಗಳು ಹೇಳುತ್ತವೆ. ದಕ್ಷಿಣ ಆಫ್ರಿಕಾ ಸರಣಿ ಮುಂದುವರೆದಂತೆ ಅದು ಇನ್ನಷ್ಟು ಹದಗೆಟ್ಟಿತು. ಹೀಗಾಗಿ ಜರ್ಮನಿಯಲ್ಲಿ ಚಿಕಿತ್ಸೆ ಪಡೆದು ತೊಡೆಸಂದು ಗಾಯವನ್ನು ಸಂಪೂರ್ಣವಾಗಿ ಗುಣಮುಖರಾಗಲು ತೆರಲಿದ್ದಾರೆ.

ಮೊದಲ 15 ಟಿ20 ಪಂದ್ಯಗಳಲ್ಲಿ ಅತಿಹೆಚ್ಚು ಪಂದ್ಯ ಗೆಲ್ಲಿಸಿದ ನಾಯಕರ ಪಟ್ಟಿ; ಭಾರತದ ಪರ ಓರ್ವ ನಾಯಕ

ಕೆ.ಎಲ್ ರಾಹುಲ್ ಗಾಯದ ಪರದಾಟ ಇದೇ ಮೊದಲೇನಲ್ಲ!

ಕೆ.ಎಲ್ ರಾಹುಲ್ ಗಾಯದ ಪರದಾಟ ಇದೇ ಮೊದಲೇನಲ್ಲ!

ಕೆ.ಎಲ್ ರಾಹುಲ್ ಗೆ ಗಾಯಗಳು ಹೊಸದೇನಲ್ಲ. ಸ್ನಾಯು ನೋವಿನಿಂದಾಗಿ ಅವರು ಇದುವರೆಗೆ ನ್ಯೂಜಿಲೆಂಡ್, ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿ ಮತ್ತು ಶ್ರೀಲಂಕಾ ವಿರುದ್ಧದ ಟೆಸ್ಟ್ ಮತ್ತು ಟಿ20 ಸರಣಿಯನ್ನು ಕಳೆದುಕೊಂಡಿದ್ದಾರೆ. ಮಣಿಕಟ್ಟು ಗಾಯದ ಕಾರಣ ಆಸ್ಟ್ರೇಲಿಯಾ ವಿರುದ್ಧದ ಸರಣಿಯನ್ನೂ ಕಳೆದುಕೊಂಡಿದ್ದರು. ಇತ್ತೀಚೆಗಷ್ಟೇ ದಕ್ಷಿಣ ಆಫ್ರಿಕಾ ಟಿ20, ಇಂಗ್ಲೆಂಡ್ ಹಾಗೂ ಐರ್ಲೆಂಡ್ ಸರಣಿಯಿಂದ ಹಿಂದೆ ಸರಿಯಬೇಕಾಯಿತು. ವೆಸ್ಟ್ ಇಂಡೀಸ್ ಸರಣಿಗೆ ಲಭ್ಯವಾಗಲಿದೆಯೇ? ಅಥವಾ ಇಲ್ಲವೇ? ಅವನ ಚಿಕಿತ್ಸೆಯನ್ನು ಆಧರಿಸಿದೆ.

Rishab Pant ದಕ್ಷಿಣ ಆಫ್ರಿಕಾ ವಿರುದ್ಧ ಅಷ್ಟೂ ಪಂದ್ಯದಲ್ಲಿ ಟಾಸ್ ಸೋತಿದ್ದಾರೆ | Oneindia Kannada
ಇಂಜ್ಯುರಿ ಟೈಮ್‌ಲೈನ್

ಇಂಜ್ಯುರಿ ಟೈಮ್‌ಲೈನ್

* ನವೆಂಬರ್ 2021 - ತೊಡೆಯ ಸೆಳೆತ: ಎಡ ತೊಡೆಯ ಸೆಳೆತದಿಂದಾಗಿ ಕೆ.ಎಲ್ ರಾಹುಲ್ ನವೆಂಬರ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯಿಂದ ಹೊರಗುಳಿಯಲ್ಪಟ್ಟರು.

* ಫೆಬ್ರವರಿ 2021 - ಮಂಡಿರಜ್ಜು: ಕೆ.ಎಲ್ ರಾಹುಲ್ ಎಡ ಮಂಡಿರಜ್ಜು ಗಾಯದ ನಂತರ ವೆಸ್ಟ್ ಇಂಡೀಸ್ ವಿರುದ್ಧದ T20 ಸರಣಿಯನ್ನು ಕಳೆದುಕೊಂಡರು.

* ಫೆಬ್ರವರಿ 2021 - ಮಂಡಿರಜ್ಜು: ಅವರು ಸಮಯಕ್ಕೆ ಸರಿಯಾಗಿ ಚೇತರಿಸಿಕೊಳ್ಳಲು ವಿಫಲರಾದರು ಮತ್ತು ಶ್ರೀಲಂಕಾ ವಿರುದ್ಧದ T20 ತಪ್ಪಿಸಿಕೊಂಡರು.

* ಮಾರ್ಚ್ 2021 - ಮಂಡಿರಜ್ಜು: ಮಂಡಿರಜ್ಜು ಗಾಯವು ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಅವರನ್ನು ಹೊರಗಿಟ್ಟಿತು.

* ಜನವರಿ 2021 - ಮಣಿಕಟ್ಟು: ಅಭ್ಯಾಸದ ಸಮಯದಲ್ಲಿ ಮಣಿಕಟ್ಟಿನ ಗಾಯಕ್ಕೆ ಒಳಗಾದ ನಂತರ ಕೆಎಲ್ ರಾಹುಲ್ ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಸರಣಿಯನ್ನು ಕಳೆದುಕೊಂಡರು.

* ಜೂನ್ 2022 - ತೊಡೆಸಂದು: ಕೆ. ಎಲ್ ರಾಹುಲ್ ನಿರಂತರ ತೊಡೆಸಂದು ಗಾಯದಿಂದ ದಕ್ಷಿಣ ಆಫ್ರಿಕಾ ಸರಣಿ ಮತ್ತು ಇಂಗ್ಲೆಂಡ್ ಪ್ರವಾಸವನ್ನು ಕಳೆದುಕೊಂಡರು.

For Quick Alerts
ALLOW NOTIFICATIONS
For Daily Alerts
Story first published: Tuesday, June 21, 2022, 15:50 [IST]
Other articles published on Jun 21, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X