Mohammad Rizwan: 57 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ 2000 ರನ್; ಸರ್ಫರಾಜ್ ಅಹ್ಮದ್ ಹಿಂದಿಕ್ಕಿದ ರಿಜ್ವಾನ್
ಸರ್ಫರಾಜ್ ಅತಿವೇಗವಾಗಿ 2000 ಟೆಸ್ಟ್ ರನ್ ಪೂರೈಸಿದ ಪಾಕಿಸ್ತಾನದ ವಿಕೆಟ್ ಕೀಪರ್ ಆಗಿದ್ದರು. ಇದೀಗ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್‌ನ ಎರಡನೇ ದಿನದಂದು ರಿಜ್ವಾನ್ ಈ ಸಾಧನೆ ಮಾಡಿದ್ದಾರೆ. ಅವರು 57 ಇನ್ನಿಂಗ್ಸ್‌ಗಳಲ್ಲಿ 2000 ಟೆಸ್ಟ್ ರನ್‌ಗಳ ಗಡಿಯನ್ನು ಮುಟ್ಟಿದ್ದಾರೆ. ಸರ್ಫರಾಜ್ 2000 ರನ್ ಗಳಿಸಲು 59 ಇನ್ನಿಂಗ್ಸ್‌ಗಳನ್ನು ತೆಗೆದುಕೊಂಡಿದ್ದರು.
ಪ್ರಸ್ತುತ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ರಿಜ್ವಾನ್ ಕಳಪೆ ಫಾರ್ಮ್ ಸಮಸ್ಯೆ ಎದುರಿಸುತ್ತಿದ್ದಾರೆ. ಹೀಗಾಗಿ ಮೂರನೇ ಪಂದ್ಯಕ್ಕೂ ಮುನ್ನ 2000 ಟೆಸ್ಟ್ ರನ್ ಪೂರೈಸಲು ರಿಜ್ವಾನ್ 16 ರನ್‌ಗಳಿಂದ ಹಿಂದೆ ಉಳಿದಿದ್ದರು. ಈಗ ಅವರು 16 ರನ್ ಹೊಡೆಯುವ ಮೂಲಕ ಸರ್ಫರಾಜ್ ಅಹ್ಮದ್ ದಾಖಲೆಯನ್ನು ಮುರಿದಿದ್ದಾರೆ.

ಫಾರ್ಮ್ ಸಮಸ್ಯೆ
ಇಂಗ್ಲೆಂಡ್‌ನ ಶೋಯೆಬ್ ಬಶೀರ್ ಎಸೆತದಲ್ಲಿ ಪಾಕ್ ನಾಯಕ ಶಾನ್ ಮಸೂದ್ ಔಟಾದ ನಂತರ ಕ್ರೀಸ್‌ಗೆ ಬಂದ ರಿಜ್ವಾನ್ ಉತ್ತಮ ಲಯದಲ್ಲಿ ಕಾಣಿಸಿಕೊಂಡರು. ತಾಳ್ಮೆಯುವ ಆಟವಾಡಿದ ರಿಜ್ವಾನ್ ಟೆಸ್ಟ್ ಕ್ರಿಕೆಟ್‌ನಲ್ಲಿ 2000 ರನ್ ಪೂರೈಸಿದರು. ನಂತರ ಜಾಕ್ ಲೀಚ್ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ ತಮ್ಮ ಆಕ್ರಮಣಕಾರಿ ಆಟಕ್ಕೆ ಮುಂದಾದರು. ಆದರೆ, ಅವರು ತಮ್ಮ ಉತ್ತಮ ಫಾರ್ಮ್‌ಅನ್ನು ಮುಂದುವರೆಸಲು ಸಾಧ್ಯವಾಗಲಿಲ್ಲ. 46 ಎಸೆತಗಳನ್ನು ಎದುರಿಸಿದ ಅವರು ಒಂದು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 25 ರನ್ ಗಳಿಸಿ ಔಟಾದರು.
ಇಂಗ್ಲೆಂಡ್ ವಿರುದ್ಧದ ಸರಣಿಗೂ ಮುನ್ನ ರಿಜ್ವಾನ್ ಬಾಂಗ್ಲಾದೇಶ ವಿರುದ್ಧ ಶತಕ ಬಾರಿಸಿದ್ದರು. ಈ ಸರಣಿಯಲ್ಲಿ ರಿಜ್ವಾನ್ ಅಜೇಯ 171 ಮತ್ತು 51 ರನ್ ಗಳಿಸಿದರು. ರಾವಲ್ಪಿಂಡಿಯಲ್ಲಿ ಬಾಂಗ್ಲಾದೇಶದ ವಿರುದ್ಧ ಆಡಿದ ಮೊದಲ ಟೆಸ್ಟ್‌ನಲ್ಲಿ ರಿಜ್ವಾನ್ ಅವರ ಕೊನೆಯ ಟೆಸ್ಟ್ ಶತಕವಾಗಿದೆ. ಕೊನೆಯ ನಾಲ್ಕು ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ ಒಂದೇ ಒಂದು ಅರ್ಧಶತಕವನ್ನು ಗಳಿಸಲು ಸಾಧ್ಯವಾಗಿಲ್ಲ. ಇಂಗ್ಲೆಂಡ್ ವಿರುದ್ಧದ ಮೊದಲ ಎರಡು ಟೆಸ್ಟ್ ಪಂದ್ಯಗಳಲ್ಲಿ ಹೇಳಿಕೊಳ್ಳುವಂತ ಪ್ರದರ್ಶನ ನೀಡಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications