ಯೋ ಯೋ ಟೆಸ್ಟ್ ಪಾಸಾದ ಶಮಿ, ಇಂಗ್ಲೆಂಡ್ ಪ್ರವಾಸ ತಂಡಕ್ಕೆ ಆಯ್ಕೆ?


ನವದೆಹಲಿ, ಜು. 9: ಯೋ ಯೋ ಟೆಸ್ಟ್ ನಿಂದ ಫೇಲಾದ ಕಾರಣಕ್ಕೆ ಅಫ್ಘಾನಿಸ್ತಾನ ವಿರುದ್ಧದ ಟೆಸ್ಟ್ ನಿಂದ ಕೈ ಬಿಡಲಾಗಿದ್ದ ಭಾರತದ ವೇಗಿ ಮೊಹಮ್ಮದ್ ಶಮಿ ಅವರು ಸದ್ಯ ಯೋ ಯೋ ಟೆಸ್ಟ್ ಪಾಸಾಗಿದ್ದಾರೆ. ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ನಡೆದ ಯೋ ಯೋ ಟೆಸ್ಟ್ ನಲ್ಲಿ ಶಮಿ ತಮ್ಮ ಫಿಟ್ನೆಸ್ ಸಾಬೀತು ಪಡಿಸಿದ್ದಾರೆ.
ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಇನ್ನೇನು ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಐದು ಪಂದ್ಯಗಳ ಟೆಸ್ಟ್ ಕ್ರಿಕೆಟ್ ಗಾಗಿ ಭಾರತ ತಂಡವನ್ನು ಪ್ರಕಟಿಸಲಿದ್ದು, ಆಯ್ಕೆಗೆ ಅರ್ಹರಿರುವ ಆಟಗಾರರ ಸಾಲಿನಲ್ಲಿ ಶಮಿಯೂ ಇರಲಿದ್ದಾರೆ.
ಶಮಿಯ ಲಭ್ಯತೆ ಭಾರತ ತಂಡಕ್ಕೆ ಬಲ ತುಂಬಲಿದೆ. ಯಾಕೆಂದರೆ ಅತ್ತ ವೇಗಿ ಜಸ್ ಪ್ರೀತ್ ಬುಮ್ರಾ ಅವರು ಇಂಗ್ಲೆಂಡ್ ಟೆಸ್ಟ್ ತಂಡಕ್ಕೆ ದೊರೆಯುವುದು ಅನುಮಾನ. ಬುಮ್ರಾ ಕೈ ಬೆರಳಿಗೆ ಗಾಯ ಮಾಡಿಕೊಂಡಿರುವುದರಿಂದ ಈಗಾಗಲೇ ಇಂಗ್ಲೆಂಡ್ ವಿರುದ್ಧದ ಟಿ20 ಮತ್ತು ಏಕದಿನ ತಂಡದಿಂದಲೂ ಹೊರಗಿಡಲಾಗಿದೆ. ಹೀಗಾಗಿ ಟೆಸ್ಟ್ ತಂಡದಲ್ಲಿ ಶಮಿ ಸ್ಥಾನ ಗಿಟ್ಟಿಸಿಕೊಳ್ಳವ ನಿರೀಕ್ಷೆ ಬಲವಾಗಿದೆ.
ಶಮಿ ನಿಜಕ್ಕೂ ಟೀಮ್ ಇಂಡಿಯಾದ ಭಾಗವಾಗೇ ಇದ್ದರು. ಆದರೆ ಆಯ್ಕೆ ಮಂಡಳಿ ಯೋ ಯೋ ಟೆಸ್ಟ್ ಕಡ್ಡಾಯ ಮಾಡಿದ್ದರಿಂದ ಟೆಸ್ಟ್ ಫೇಲಾಗಿದ್ದ ಶಮಿಯನ್ನು ತಂಡದಿಂದ ಹೊರಗಿಡಲಾಗಿತ್ತು. ಶಮಿ ಬದಲಿಗೆ ಅಫ್ಘಾನಿಸ್ತಾನ ಟೆಸ್ಟ್ ಗೆ ನವದೀಪ್ ಸೈನಿ ಅವರನ್ನು ಆಯ್ಕೆ ಮಾಡಲಾಗಿತ್ತು. ಇದೀಗ ಶಮಿ ಮತ್ತೆ ಟೀಮ್ ಇಂಡಿಯಾ ಸೇರಿಕೊಳ್ಳುವುದರಲ್ಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications