ಆತನಿಗೆ ಅವಕಾಶ ನೀಡಿದರೆ ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾ ಗೆಲ್ಲುವುದು ಖಚಿತ: ಗುಂಡಪ್ಪ ವಿಶ್ವನಾಥ್

ಜೂನ್ 18-22ರವರೆಗೆ ಇಂಗ್ಲೆಂಡ್‌ನ ಸೌತಾಂಪ್ಟನ್ ಕ್ರೀಡಾಂಗಣದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ಪ್ರತಿಷ್ಠಿತ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯ ನಡೆಯಲಿದ್ದು ಟೀಮ್ ಇಂಡಿಯಾ ತಂಡ ಈಗಾಗಲೇ ಸೌತಂಪ್ಟನ್ ತಲುಪಿ ಕ್ವಾರಂಟೈನ್ ನಿಯಮವನ್ನು ಅನುಸರಿಸುತ್ತಿದ್ದು, ಈ ಹಿಂದೆಯೇ ಇಂಗ್ಲೆಂಡ್ ತಲುಪಿರುವ ನ್ಯೂಜಿಲೆಂಡ್ ತಂಡ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯಕ್ಕೂ ಮುನ್ನ ಇಂಗ್ಲೆಂಡ್ ವಿರುದ್ಧ 2 ಟೆಸ್ಟ್ ಪಂದ್ಯಗಳನ್ನು ಆಡುತ್ತಿದೆ.
ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಟೂರ್ನಿ ಬಳಿಕ ನಿವೃತ್ತಿ ಹೊಂದಬಹುದಾದ 5 ಭಾರತೀಯ ಆಟಗಾರರು!
ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯದ ಕುರಿತು ದೊಡ್ಡ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿದ್ದು ಮಾಜಿ ಕ್ರಿಕೆಟಿಗ ಗುಂಡಪ್ಪ ವಿಶ್ವನಾಥ್ ಕೂಡ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯದ ಕುರಿತು ಮಾತನಾಡಿರುವ ಗುಂಡಪ್ಪ ವಿಶ್ವನಾಥ್ ಟೀಮ್ ಇಂಡಿಯಾದಲ್ಲಿ ಯುವ ಬೌಲರ್ ಮೊಹಮ್ಮದ್ ಸಿರಾಜ್‌ಗೆ ಅವಕಾಶ ನೀಡಬೇಕು ಎಂದಿದ್ದಾರೆ.
ನ್ಯೂಜಿಲೆಂಡ್‌ನ ಈ ಬೌಲರ್‌ಗೆ ಕೊಹ್ಲಿ ಹೆದರುತ್ತಾರೆ; ರಹಸ್ಯ ಬಿಚ್ಚಿಟ್ಟ ವಿರಾಟ್ ಕೊಹ್ಲಿಯ ಬಾಲ್ಯದ ಕೋಚ್!
'ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯ ಭಾರತದ ಬೌಲರ್‌ಗಳು ಮತ್ತು ನ್ಯೂಜಿಲೆಂಡ್ ತಂಡದ ಬ್ಯಾಟ್ಸ್‌ಮನ್‌ಗಳ ನಡುವಿನ ಹಣಾಹಣಿಯಾಗಿರಲಿದೆ. ಭಾರತ ತಂಡದ ಬೌಲಿಂಗ್ ವಿಭಾಗ ಅತ್ಯಂತ ಬಲಿಷ್ಠವಾಗಿದ್ದು ಮೊಹಮ್ಮದ್ ಶಮಿ, ಜಸ್ ಪ್ರೀತ್ ಬೂಮ್ರಾ, ಮೊಹಮ್ಮದ್ ಸಿರಾಜ್ ಹಾಗೂ ಇಶಾಂತ್ ಶರ್ಮಾರಂತಹ ಅತ್ಯುತ್ತಮ ವೇಗಿಗಳಿಂದ ಕೂಡಿದೆ. ಮೊಹಮ್ಮದ್ ಸಿರಾಜ್ ಕಳೆದ ಆಸ್ಟ್ರೇಲಿಯಾ ಸರಣಿಯಲ್ಲಿ ಅತ್ಯದ್ಭುತ ಪ್ರದರ್ಶನವನ್ನು ನೀಡಿದ್ದರು. ಹೀಗಾಗಿ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್‌ಗೆ ಅವಕಾಶ ನೀಡಿದರೆ ಉತ್ತಮ ಪ್ರದರ್ಶನ ನೀಡುವುದಂತೂ ಖಚಿತ' ಎಂದು ಗುಂಡಪ್ಪ ವಿಶ್ವನಾಥ್ ಹೇಳಿದ್ದಾರೆ.

ಇಶಾಂತ್ ಶರ್ಮ ಬದಲು ಮೊಹಮ್ಮದ್ ಸಿರಾಜ್
ಇನ್ನು ಇತ್ತೀಚೆಗೆ ಹರಿದಾಡುತ್ತಿರುವ ಸುದ್ದಿಯ ಪ್ರಕಾರ ನ್ಯೂಜಿಲೆಂಡ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯದಲ್ಲಿ ಇಶಾಂತ್ ಶರ್ಮಾ ಬದಲು ಮೊಹಮ್ಮದ್ ಸಿರಾಜ್ ಆಡಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

ಸಿರಾಜ್‌ಗೆ ಅವಕಾಶ ನೀಡಲು ವಿರಾಟ್ ಕೊಹ್ಲಿ ಚಿಂತನೆ
ಅಷ್ಟು ಮಾತ್ರವಲ್ಲದೆ ಭಾರತದ ನಾಯಕ ವಿರಾಟ್ ಕೊಹ್ಲಿ ಕೂಡ ಮೊಹಮ್ಮದ್ ಸಿರಾಜ್‌ಗೆ ಅವಕಾಶ ನೀಡಬೇಕೆಂಬ ಚಿಂತನೆ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ. ಈ ಹಿಂದಿನಿಂದಲೂ ಮೊಹಮ್ಮದ್ ಸಿರಾಜ್‌ಗೆ ಅವಕಾಶ ನೀಡುತ್ತಾ ಬಂದಿರುವ ವಿರಾಟ್ ಕೊಹ್ಲಿ ಈ ಬಾರಿಯೂ ಸಹ ಅವಕಾಶ ನೀಡಲಿದ್ದಾರೆ ಎನ್ನಲಾಗುತ್ತಿದೆ.

ಇಂಗ್ಲೆಂಡ್ ಪ್ರವಾಸಕ್ಕೆ ಸಿದ್ಧನಾಗು ಎಂದು ಹೇಳಿದ್ದ ವಿರಾಟ್ ಕೊಹ್ಲಿ
ಐಪಿಎಲ್ ಟೂರ್ನಿಯ ವೇಳೆ ಮೊಹಮ್ಮದ್ ಸಿರಾಜ್ ಬಳಿ ಬಂದಿದ್ದ ವಿರಾಟ್ ಕೊಹ್ಲಿ ಮುಂಬರುವ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲು ಸಿದ್ಧನಾಗು ಎಂದು ಮೊಹಮ್ಮದ್ ಸಿರಾಜ್ ಬಳಿ ಹೇಳಿದ್ದರಂತೆ. ಈ ವಿಷಯವನ್ನು ಸ್ವತಃ ಮೊಹಮ್ಮದ್ ಸಿರಾಜ್ ಇತ್ತೀಚೆಗೆ ಹಂಚಿಕೊಂಡಿದ್ದಾರೆ. ಆದರೆ ಐಪಿಎಲ್ ಸಮಯದಲ್ಲಿಯೇ ಮೊಹಮ್ಮದ್ ಸಿರಾಜ್‌ನ್ನು ಇಂಗ್ಲೆಂಡ್ ಪ್ರವಾಸಕ್ಕೆ ಆಯ್ಕೆ ಮಾಡಬೇಕು ಎಂದು ವಿರಾಟ್ ಕೊಹ್ಲಿ ತೀರ್ಮಾನಿಸಿಬಿಟ್ಟಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications