2011ರಿಂದ ಅತಿ ಹೆಚ್ಚು ಟೆಸ್ಟ್ ವಿಕೆಟ್ ಪಡೆದ ಬೌಲರ್ಸ್: ಅಶ್ವಿನ್ ನಂ 1 ಸ್ಪಿನ್ನರ್

ವಿಶ್ವ ಕ್ರಿಕೆಟ್ ವಲಯದಲ್ಲಿ ಸದ್ಯ ಟಿ20ಯದ್ದೇ ಪಾರುಪತ್ಯವಾದ್ರೂ, ದೀರ್ಘಸ್ವರೂಪದ ಫಾರ್ಮೆಟ್ ಟೆಸ್ಟ್ ಕ್ರಿಕೆಟ್ ಮೇಲಿನ ಆಸಕ್ತಿ ಮತ್ತು ಪ್ರೀತಿ ಕ್ರಿಕೆಟ್ ಪ್ರಿಯರಲ್ಲಿ ಕಡಿಮೆಯಾಗಿಲ್ಲ. ಅನೇಕ ಟಿ20 ಲೀಗ್‌ಗಳು ಹುಟ್ಟಿಕೊಂಡಿದ್ದರೂ ಸಹ, ಟಿ10ನಂತಹ ಹೊಸ ಲೀಗ್ ಶುರುವಾಗಿದ್ದರೂ, ಯುವ ಆಟಗಾರರು ಒಮ್ಮೆಯಾದ್ರೂ ವೈಟ್ ಜರ್ಸಿಯಲ್ಲಿ ತಮ್ಮ ದೇಶದ ಪರ ಆಡ್ಬೇಕು ಎಂದು ಗುರಿಯನ್ನಿಟ್ಟುಕೊಂಡಿದ್ದಾರೆ.
ಹೀಗಾಗಿಯೇ ಟೆಸ್ಟ್ ಕ್ರಿಕೆಟ್ ಅನ್ನುವುದು ಈಗಲೂ ಸಹ ಅತ್ಯಂತ ಪ್ರೀತಿಯ ಫಾರ್ಮೆಟ್ ಆಗಿದೆ. ಯಾವುದೇ ತಂಡದ ಕ್ಯಾಪ್ಟನ್ ಟೆಸ್ಟ್‌ನಲ್ಲಿ ತನ್ನ ಬೌಲರ್ಸ್‌ಗಳಿಂದ 20 ವಿಕೆಟ್‌ಗಳನ್ನ ಪಡೆಯಲು ಬಯಸುತ್ತಾನೆ. ಇದೇ ರೀತಿಯಲ್ಲಿ ಇಂಗ್ಲೆಂಡ್ ತಂಡದ ಈ ಇಬ್ಬರು ಬೌಲರ್‌ಗಳು ಕಳೆದ ಹತ್ತು ವರ್ಷಗಳಿಂದ ಅತ್ಯುತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದಾರೆ.
ಆ ಇಬ್ಬರು ಬೌಲರ್‌ಗಳು ಯಾರೆಂದು ಇಡೀ ಕ್ರಿಕೆಟ್ ಲೋಕಕ್ಕೆ ತಿಳಿದಿದೆ. ಟೆಸ್ಟ್ ಕ್ರಿಕೆಟ್‌ನ ಮಾರಕ ಬೌಲಿಂಗ್ ಜೋಡಿಯಾದ ಜೇಮ್ಸ್ ಆ್ಯಂಡರ್ಸನ್ ಮತ್ತು ಸ್ಟುವರ್ಟ್ ಬ್ರಾಡ್ ಇಂಗ್ಲೆಂಡ್ ಪರ ಅದ್ಭುತ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಜೇಮ್ಸ್ ಆ್ಯಂಡರ್ಸನ್ 2011ರಿಂದ 427 ಟೆಸ್ಟ್ ವಿಕೆಟ್ ಪಡೆದ್ರೆ, ಸ್ಟುವರ್ಟ್ ಬ್ರಾಡ್ ಬರೋಬ್ಬರಿ 425 ಟೆಸ್ಟ್ ವಿಕೆಟ್‌ಗಳನ್ನ ತಮ್ಮ ಅಕೌಂಟ್‌ಗೆ ಹಾಕಿಕೊಂಡಿದ್ದಾರೆ.
ಈ ಜೋಡಿಯು ಯಾವಾಗಲೂ ವಿಶೇಷವಾಗಿ ತವರಿನ ಪಿಚ್‌ಗಳಲ್ಲಿ ಸ್ಥಿರ ಪ್ರದರ್ಶನ ನೀಡುತ್ತಾ ಬಂದಿದ್ದರೆ, ವಿದೇಶಿ ಪಿಚ್‌ಗಳಲ್ಲಿ ಅತ್ಯಮೋಘ ಪ್ರದರ್ಶನ ಏನು ತೋರಿಲ್ಲ. ಆದ್ರೂ ಈ ಜೋಡಿಯು ದೀರ್ಘಕಾಲದಿಂದ ಟೆಸ್ಟ್ ಕ್ರಿಕೆಟ್‌ನಲ್ಲಿ ಪ್ರಾಬಲ್ಯ ಸಾಧಿಸಿದೆ.

400ಕ್ಕೂ ಹೆಚ್ಚು ವಿಕೆಟ್ ಪಡೆದ ಬೌಲರ್ಸ್
ಇಂಗ್ಲೆಂಡ್ ಜಿಮ್ಮ ಮತ್ತು ಬ್ರಾಡ್ ರೀತಿಯಲ್ಲಿ ನ್ಯೂಜಿಲೆಂಡ್‌ನ ಟಿಮ್ ಸೌಥಿ ಮತ್ತು ಟ್ರೆಂಟ್ ಬೌಲ್ಟ್, ದಕ್ಷಿಣ ಆಫ್ರಿಕಾದ ಡೇಲ್ ಸ್ಟೇಯ್ನ್ ಮತ್ತು ಮೊರ್ನೆ ಮೊರ್ಕೆಲ್ ಅವರೊಂದಿಗೆ ಅತ್ಯುತ್ತಮ ಜೋಡಿಯಾಗಿದೆ. 2011ರಿಂದ ಆಂಡರ್ಸನ್ ಮತ್ತು ಬ್ರಾಡ್ ಈ ಅವಧಿಯಲ್ಲಿ 400 ವಿಕೆಟ್‌ಗಳನ್ನು ಪಡೆದ ಮೂವರು ಬೌಲರ್‌ಗಳಲ್ಲಿ ಇಬ್ಬರಾಗಿದ್ದಾರೆ. ಆಂಡರ್ಸನ್ ಜೊತೆಗೆ ನಂತರದಲ್ಲೇ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಭಾರತದ ಆರ್ ಅಶ್ವಿನ್ ಆಕ್ರಮಿಸಿಕೊಂಡಿದ್ದಾರೆ. ಅವರು ಕೂಡ ತಮ್ಮ ಹೆಸರಿಗೆ 427 ವಿಕೆಟ್‌ಗಳನ್ನ ಹೊಂದಿದ್ದಾರೆ.
ಐಪಿಎಲ್ 2022: ಮೆಗಾ ಆಕ್ಷನ್ ದಿನಾಂಕ, ಸಮಯ, ಆಟಗಾರರ ಪಟ್ಟಿ ಹಾಗೂ ಇತ್ತೀಚಿನ ಮಾಹಿತಿಗಳು

ಟಾಪ್ 5ರಲ್ಲಿ ಮೂವರು ಸ್ಪಿನ್ನರ್ಸ್
2011ರಿಂದ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳಲ್ಲಿ ಮೊದಲ ಐದು ಸ್ಥಾನಗಳಲ್ಲಿ ಮೂವರು ಸ್ಪಿನ್ನರ್ಸ್ ಸ್ಥಾನ ಪಡೆದಿದ್ದಾರೆ. ಎರಡನೇ ಸ್ಥಾನದಲ್ಲಿ ಆರ್ ಅಶ್ವಿನ್ ಸ್ಥಾನ ಪಡೆದಿದ್ದರೆ, ನಾಲ್ಕನೇ ಮತ್ತು ಐದನೇ ಹೆಸರುಗಳು ಮತ್ತೆ ಸ್ಪಿನ್ನರ್‌ಗಳಾಗಿದ್ದು ನಾಥನ್ ಲಿಯಾನ್ (403) ಮತ್ತು ಈಗಾಗಲೇ ನಿವೃತ್ತಿ ಪಡೆದಿರುವ ರಂಗನಾ ಹೆರಾತ್ 355 ವಿಕೆಟ್‌ಗಳನ್ನು ಸಾಧಿಸಿದ್ದಾರೆ. ಸದಾ ವಿಶ್ವಾಸಾರ್ಹ ಕಿವೀಸ್ ಜೋಡಿ ಟಿಮ್ ಸೌಥಿ ಮತ್ತು ಟ್ರೆಂಟ್ ಬೌಲ್ಟ್ ಆರನೇ ಮತ್ತು ಏಳನೇ ಸ್ಥಾನದಲ್ಲಿದ್ದಾರೆ.

ಆಸ್ಟ್ರೇಲಿಯಾ ಮಿಚೆಲ್ ಸ್ಟಾರ್ಕ್‌ಗೆ 7ನೇ ಸ್ಥಾನ
ಆಸ್ಟ್ರೇಲಿಯಾದ ಪ್ರಮುಖ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಕಳೆದ ಒಂದು ದಶಕದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳಲ್ಲಿ 8ನೇ ಸ್ಥಾನದಲ್ಲಿದ್ದಾರೆ. ಕಾಂಗರೂ ದಾಳಿಯನ್ನ ಮುನ್ನಡೆಸುವ ಮಿಚೆಲ್ ಸ್ಟಾರ್ಕ್ ಈ 10 ವರ್ಷಗಳಲ್ಲಿ 258 ವಿಕೆಟ್‌ಗಳನ್ನು ಸಂಗ್ರಹಿಸಿದ್ದಾರೆ. ಇವರ ನಂತರದಲ್ಲಿ ಪಾಕಿಸ್ತಾನದ ಸ್ಪಿನ್ನರ್ ಯಾಸಿರ್ ಶಾ ಒಂಬತ್ತನೇ ಸ್ಥಾನ ಪಡೆದಿದ್ದಾರೆ.

2011ರಿಂದ ಅತಿ ಹೆಚ್ಚು ವಿಕೆಟ್ ಪಡೆದ ಟಾಪ್ 10 ಬೌಲರ್ಸ್
ಜೇಮ್ಸ್ ಆ್ಯಂಡರ್ಸನ್ 427 (110 ಪಂದ್ಯಗಳು)
ಆರ್. ಅಶ್ವಿನ್ 427 (81 ಪಂದ್ಯಗಳು)
ಸ್ಟುವರ್ಟ್ ಬ್ರಾಡ್ 425 (115 ಪಂದ್ಯಗಳು)
ನಥಾನ್ ಲ್ಯಾನ್ 403 (101 ಪಂದ್ಯಗಳು)
ರಂಗನಾ ಹೆರಾಥ್ 355 (69 ಪಂದ್ಯಗಳು)
ಟಿಮ್ ಸೌಥಿ 293 (70 ಪಂದ್ಯಗಳು)
ಟ್ರೆಂಟ್ ಬೌಲ್ಟ್ 292 (73 ಪಂದ್ಯಗಳು)
ಮಿಚೆಲ್ ಸ್ಟಾರ್ಕ್ 258 (62 ಪಂದ್ಯಗಳು)
ಯಾಸಿರ್ ಶಾ 235 (46 ಪಂದ್ಯಗಳು)
ರವೀಂದ್ರ ಜಡೇಜಾ 232 (57 ಪಂದ್ಯಗಳು)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications