Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPLನಲ್ಲಿ ರಾಹುಲ್ ದ್ರಾವಿಡ್ ರೆಕಾರ್ಡ್ ಮುರಿದ ಮಹೇಂದ್ರ ಸಿಂಗ್ ಧೋನಿ

MSD
Dhoni ಆಟ ನೋಡಿ ಕುಣಿದು ಕುಪ್ಪಳಿಸಿದ ಅಭಿಮಾನಿಗಳು | Oneindia Kannada

ಐಪಿಎಲ್ 2022ರ ಆರಂಭಿಕ ಪಂದ್ಯದಲ್ಲೇ ಸಿಎಸ್‌ಕೆ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ ಹೊಸ ದಾಖಲೆ ಸೃಷ್ಟಿಸಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಮೂರು ವರ್ಷದ ಬಳಿಕ ಅರ್ಧಶತಕ ದಾಖಲಿಸಿದ ಧೋನಿ , ಮಾಜಿ ಐಪಿಎಲ್ ಆಟಗಾರ , ಪ್ರಸ್ತುತ ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ದಾಖಲೆ ಮುರಿದಿದ್ದಾರೆ.

ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದ ಮಹೇಂದ್ರ ಸಿಂಗ್ ಧೋನಿ, ಹೊಸ ನಾಯಕ ರವೀಂದ್ರ ಜಡೇಜಾ ಜೊತೆಗೂಡಿ ಏಳನೇ ವಿಕೆಟ್‌ಗೆ ಉತ್ತಮ ಜೊತೆಯಾಟ ಕಲೆಹಾಕಿದರು. 38 ಎಸೆತಗಳಲ್ಲಿ ಅಜೇಯ 50 ರನ್ ಕಲೆಹಾಕಿದ ಧೋನಿ ಇನ್ನಿಂಗ್ಸ್‌ನಲ್ಲಿ ಏಳು ಬೌಂಡರಿ ಮತ್ತು 1 ಅಮೋಘ ಸಿಕ್ಸರ್‌ ಕಾಣಬಹುದು.

ಈ ಅರ್ಧಶತಕ ದಾಖಲಿಸುವ ಮೂಲಕ ಧೋನಿ ಐಪಿಎಲ್‌ನಲ್ಲಿ ಅರ್ಧಶತಕ ಬಾರಿಸಿದ ಅತ್ಯಂತ ಹಳೆಯ ಭಾರತೀಯ ಬ್ಯಾಟ್ಸ್‌ಮನ್ ಎಂಬ ಸಾಧನೆ ಮಾಡುವ ಮೂಲಕ ರಾಹುಲ್ ದ್ರಾವಿಡ್ ರೆಕಾರ್ಡ್ ಮುರಿದಿದ್ದಾರೆ.

ಧೋನಿಗೆ ಅರ್ಧಶತಕ ಸಿಡಿಸಿದ ಮಾರ್ಚ್ 26 ರಂದು ಅವರ ವಯಸ್ಸು 40 ವರ್ಷ ಮತ್ತು 262 ದಿನಗಳು ಆಗಿದ್ದು, ದ್ರಾವಿಡ್ ಅವರು ಕೊನೆಯ ಬಾರಿಗೆ ಐಪಿಎಲ್‌ನಲ್ಲಿ ಅರ್ಧಶತಕ ಗಳಿಸಿದಾಗ ಅವರ ವಯಸ್ಸು 40 ವರ್ಷ ಮತ್ತು 116 ದಿನಗಳು.

ಧೋನಿ ಮತ್ತು ಸಿಎಸ್‌ಕೆ ನಾಯಕ ರವೀಂದ್ರ ಜಡೇಜಾ ಕೊನೆಯ 10 ಓವರ್‌ಗಳಲ್ಲಿ ಅಜೇಯ 70 ರನ್‌ಗಳ ಜೊತೆಯಾಟವನ್ನು ಮಾಡಿದರು. ಈ ಮೂಲಕ 61 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಸಿಎಸ್‌ಕೆ 20 ಓವರ್‌ಗಳಲ್ಲಿ 131 ರನ್ ಗಳಿಸಿತು.

Story first published: Saturday, March 26, 2022, 22:20 [IST]
Other articles published on Mar 26, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+