Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

2021ರ ಐಪಿಎಲ್‌ನಲ್ಲಿ ಆಡುವುದನ್ನ ಖಚಿತಪಡಿಸಿದ ಧೋನಿ

MS Dhoni Confirms Playing In The IPL Next Year

ಐಪಿಎಲ್ 13ನೇ ಆವೃತ್ತಿಯಲ್ಲಿ ತನ್ನ ಪ್ಲೇ ಆಫ್ ಕನಸನ್ನು ಕೈ ಬಿಟ್ಟು ಕೊನೆಯ ಲೀಗ್ ಪಂದ್ಯವನ್ನಾಡುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 2021ರ ಐಪಿಎಲ್‌ ಸೀಸನ್‌ನಲ್ಲೂ ಮುನ್ನೆಡೆಸುವುದಾಗಿ ನಾಯಕ ಎಂ.ಎಸ್ ಧೋನಿ ಖಚಿತಪಡಿಸಿದ್ದಾರೆ.

ಧೋನಿ ನಾಯಕತ್ವದ ಸಿಎಸ್‌ಕೆಗೆ ಈ ಐಪಿಎಲ್ ಆವೃತ್ತಿಯಲ್ಲಿ ತೀವ್ರ ಹಿನ್ನಡೆ ಬಳಿಕ ಪ್ರಸ್ತುತ 39ರ ಹರೆಯದ ಧೋನಿಗೆ ಇದೇ ಕೊನೆಯ ಐಪಿಎಲ್ ಆಗಬಹುದು ಎಂದು ಹಲವರು ನಂಬಿದ್ದರು. ಜೊತೆಗೆ ಧೋನಿ ಕೂಡ ರನ್‌ಗಳಿಸಲು ಹೆಣಗಾಡುತ್ತಿದ್ದು, ಮುಂದಿನ ಸೀಸನ್‌ನಲ್ಲಿ ಆಡುವುದು ಅನುಮಾನ ಎನ್ನಲಾಗಿತ್ತು. ಇದೀಗ ಧೋನಿ ಕೂಡ ಈ ಕುರಿತು ತಮ್ಮ ನಿರ್ಧಾರ ತಿಳಿಸಿದ್ದಾರೆ.

ಆದರೆ, ಮುಂದಿನ ಐಪಿಎಲ್ ಋತುವಿನಲ್ಲೂ ತಾನು ಆಡಲಿದ್ದೇನೆ ಎಂದು ಸಿಎಸ್‌ಕೆ ನಾಯಕ ಸ್ವತಃ ಸ್ಪಷ್ಟಪಡಿಸಿದ್ದಾರೆ. ಕಿಂಗ್ಸ್‌ ಇಲೆವೆನ್ ಪಂಜಾಬ್ ವಿರುದ್ಧ ಪಂದ್ಯದ ಟಾಸ್‌ ಸಮಯದಲ್ಲಿ ಧೋನಿ ಈ ವಿಷಯವನ್ನು ಸ್ಪಷ್ಟಪಡಿಸಿದರು, ಡ್ಯಾನಿ ಮಾರಿಸನ್ ಅವರೊಂದಿಗೆ ಮಾತನಾಡುವಾಗ ಅವರು ಹಳದಿ ಜರ್ಸಿಯಲ್ಲಿ ತಮ್ಮ ಕೊನೆಯ ಪಂದ್ಯವನ್ನು ಆಡುತ್ತೀರಾ ಎಂದು ಕೇಳಿದರು. ಇದಕ್ಕೆ ಉತ್ತರಿಸಿದ ಧೋನಿ ''ಖಂಡಿತವಾಗಿಯೂ ಇಲ್ಲ'' ಎಂದು ಬಹಳ ಆತ್ಮವಿಶ್ವಾಸದಿಂದ ಹೇಳಿದ್ದಾರೆ.

ಧೋನಿಗೂ ಮೊದಲು ಸಿಎಸ್‌ಕೆ ಫ್ರಾಂಚೈಸಿ ಸಿಇಒ ಕಾಶಿ ವಿಶ್ವನಾಥನ್ ಸ್ವತಃ ಸಾಧ್ಯತೆಗಳನ್ನು ತಳ್ಳಿಹಾಕಿದ್ದರು. ಜೊತೆಗೆ ನಾಯಕನನ್ನು ಬದಲಾಯಿಸುವ ಯಾವುದೇ ವದಂತಿಗಳನ್ನು ಅವರು ಒಪ್ಪಲಿಲ್ಲ.

"ಹೌದು, ಖಂಡಿತವಾಗಿ 2021 ರಲ್ಲಿ ಧೋನಿ ಸಿಎಸ್‌ಕೆ ಮುನ್ನಡೆಸಲಿದ್ದಾರೆ ಎಂಬ ನಂಬಿಕೆ ನನಗಿದೆ. ಐಪಿಎಲ್‌ನಲ್ಲಿ ಅವರು ನಮಗೆ ಮೂರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ನಾವು ಪ್ಲೇಆಫ್‌ಗೆ ಅರ್ಹತೆ ಪಡೆಯದ ಮೊದಲ ವರ್ಷ ಇದಾಗಿದೆ. ಆದರೆ ಬೇರೆ ಯಾವ ತಂಡವೂ ಈ ಸಾಧನೆ ಮಾಡಿಲ್ಲ. ಒಂದು ಕೆಟ್ಟ ವರ್ಷ ಎಂದರೆ ನಾವು ಎಲ್ಲವನ್ನೂ ಬದಲಾಯಿಸಬೇಕಾಗುತ್ತದೆ ಎಂದಲ್ಲ "ಎಂದು ವಿಶ್ವನಾಥನ್ ತಿಳಿಸಿದರು.

Story first published: Sunday, November 1, 2020, 16:29 [IST]
Other articles published on Nov 1, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+