Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

CSK ನಾಯಕತ್ವಕ್ಕೆ ಧೋನಿ ರಾಜೀನಾಮೆ: ಮಾಹಿ ನಾಯಕತ್ವದಲ್ಲಿ ಗೆದ್ದಿದ್ದೆಷ್ಟು? ಸೋತಿದ್ದೆಷ್ಟು?

MS Dhoni

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಇತಿಹಾಸದಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಸಿಎಸ್‌ಕೆ ಮಾಡಿರುವ ಸಾಧನೆ ಒಂದೆರಡಲ್ಲ. ಮಾಹಿ ಅಂದ್ರೆ ಸಿಎಸ್‌ಕೆ ಅಂದ್ರೂ ತಪ್ಪಾಗಲ್ಲ. ಹೀಗಿರುವಾಗ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕತ್ವದಿಂದ ಹಿಂದೆ ಸರಿಯುವ ಮೂಲಕ ತನ್ನೆಲ್ಲಾ ಅಭಿಮಾನಿಗಳಿಗೆ ದೊಡ್ಡ ಶಾಕ್ ನೀಡಿದ್ದಾರೆ.

ಐಪಿಎಲ್‌ನಲ್ಲಿ ಅತ್ಯಂತ ಯಶಸ್ವಿ ತಂಡಗಳಲ್ಲಿ ಒಂದಾಗಿರುವ ಸಿಎಸ್‌ಕೆಯನ್ನ ನಾಲ್ಕು ಬಾರಿ ಚಾಂಪಿಯನ್ ಪಟ್ಟಕ್ಕೇರಿರುವ ಕೀರ್ತಿ ಮಹೇಂದ್ರ ಸಿಂಗ್ ಧೋನಿಗಿದೆ. 2008ರ ಐಪಿಎಲ್ ಸೀಸನ್‌ ಆರಂಭದಿಂದಲೂ ಧೋನಿ ಚೆನ್ನೈ ಸೂಪರ್ ಕಿಂಗ್ಸ್‌ ತಂಡವನ್ನ ಮುನ್ನಡೆಸಿದ್ದು, ಫ್ರಾಂಚೈಸಿಯ ಜೀವಾಳವಾಗಿದ್ದಾರೆ.

ಜಡೇಜಾಗೆ ನಾಯಕತ್ವ ಪಟ್ಟ ಕಟ್ಟಿದ ಧೋನಿ

ಜಡೇಜಾಗೆ ನಾಯಕತ್ವ ಪಟ್ಟ ಕಟ್ಟಿದ ಧೋನಿ

ಮಹೇಂದ್ರ ಸಿಂಗ್ ಧೋನಿ ತನ್ನ ಶಿಷ್ಯ ಹಾಗೂ ಟೀಂ ಇಂಡಿಯಾ ಆಲ್‌ರೌಂಡರ್ ರವೀಂದ್ರ ಜಡೇಜಾಗೆ ನಾಯಕತ್ವ ಪಟ್ಟ ಕಟ್ಟಿದ್ದಾರೆ. 2012ರಿಂದ ಚೆನ್ನೈ ಸೂಪರ್ ಕಿಂಗ್ಸ್‌ ತಂಡದಲ್ಲಿರುವ ಜಡ್ಡು ಸಿಎಸ್‌ಕೆಯ ಅವಿಭಾಜ್ಯ ಅಂಗವಾಗಿದ್ದಾರೆ. ಇನ್ಮುಂದೆ ಜಡೇಜಾ ನೇತೃತ್ವದಲ್ಲಿ ಸಿಎಸ್‌ಕೆ ಮುನ್ನಡೆಯಲಿದ್ದು, ತಂಡವನ್ನ ಮುನ್ನಡೆಸುತ್ತಿರುವ ಮೂರನೇ ಆಟಗಾರನಾಗಿ ಹೊರಹೊಮ್ಮಿದ್ದಾರೆ.

Breaking News: ದಿಢೀರ್ ಸಿಎಸ್‌ಕೆ ನಾಯಕತ್ವ ತ್ಯಜಿಸಿದ ಎಂಎಸ್ ಧೋನಿ: ರವೀಂದ್ರ ಜಡೇಜಾ ನೂತನ ನಾಯಕ!

ಧೋನಿ ರಾಜೀನಾಮೆ ಕುರಿತಾಗಿ ಸಿಎಸ್‌ಕೆ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ಸುದ್ದಿ ಪ್ರಕಟಿಸಿದ್ದು, ಅಭಿಮಾನಿಗಳಿಗೆ ದೊಡ್ಡ ಶಾಕ್ ಆಗಿದೆ.

ಮೊದಲೇ ಭವಿಷ್ಯ ನುಡಿದಿದ್ದ ಸುನಿಲ್ ಗವಾಸ್ಕರ್

ಮೊದಲೇ ಭವಿಷ್ಯ ನುಡಿದಿದ್ದ ಸುನಿಲ್ ಗವಾಸ್ಕರ್

ಟೀಂ ಇಂಡಿಯಾ ಮಾಜಿ ನಾಯಕ ಸುನಿಲ್ ಗವಾಸ್ಕರ್ ರವೀಂದ್ರ ಜಡೇಜಾಗೆ ನಾಯಕತ್ವ ಸಿಗಬಹುದು ಎಂದು ಮೊದಲೇ ಭವಿಷ್ಯ ನುಡಿದಿದ್ದರು. ಮುಂಬರುವ ಐಪಿಎಲ್‌ನಲ್ಲಿ ಎಂಎಸ್ ಧೋನಿ ಒಂದು ಅಥವಾ ಎರಡು ಪಂದ್ಯಗಳ ಮಾತ್ರ ಸಿಎಸ್‌ಕೆಯನ್ನ ಮುನ್ನಡೆಸಲು ನಿರ್ಧರಿಸಿದರೆ, ರವೀಂದ್ರ ಜಡೇಜಾ ಸಿಎಸ್‌ಕೆ ನಾಯಕತ್ವವನ್ನು ವಹಿಸಿಕೊಳ್ಳಲು ಸಿದ್ಧರಾಗುತ್ತಾರೆ ಎಂದು ಭಾರತದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಹೇಳಿದ್ದರು. ಆದ್ರೆ ಸಿಎಸ್‌ಕೆ ಮೊದಲ ಪಂದ್ಯವನ್ನಾಡಲು ಇನ್ನೊಂದು ದಿನ ಬಾಕಿ ಇರುವಂತೆ ನಾಯಕತ್ವ ಬದಲಾವಣೆಯಾಗಿದೆ.

ಧೋನಿ ಸಿಎಸ್‌ಕೆ ನಾಯಕತ್ವದ ದಾಖಲೆ

ಧೋನಿ ಸಿಎಸ್‌ಕೆ ನಾಯಕತ್ವದ ದಾಖಲೆ

ಮಹೇಂದ್ರ ಸಿಂಗ್ ಧೋನಿ 204 ಐಪಿಎಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕತ್ವ ವಹಿಸಿದ್ದಾರೆ. ಇದರಲ್ಲಿ ಚೆನ್ನೈ 121 ಪಂದ್ಯಗಳನ್ನ ಗೆದ್ದಿದ್ದು, 82 ಪಂದ್ಯಗಳನ್ನಷ್ಟೇ ಸೋತಿದೆ. 1 ಪಂದ್ಯ ಯಾವುದೇ ಫಲಿತಾಂಶ ಬಂದಿಲ್ಲ. ಸಿಎಸ್‌ಕೆ ಗೆಲುವಿನ ಸರಾಸರಿ ಶೇಕಡಾ 59.60 ರಷ್ಟಿದೆ.

ಇಷ್ಟಲ್ಲದೆ ಧೋನಿ ನಾಲ್ಕು ಬಾರಿ ತಂಡವನ್ನ ಚಾಂಪಿಯನ್ ಪಟ್ಟಕ್ಕೇರಿಸಿದ್ದು, ಎರಡು ಬಾರಿ ಚಾಂಪಿಯನ್ಸ್‌ ಲೀಗ್‌ನಲ್ಲಿ ಸಿಎಸ್‌ಕೆಗೆ ಟ್ರೋಫಿ ಗೆದ್ದುಕೊಟ್ಟಿದ್ದಾರೆ.

Story first published: Thursday, March 24, 2022, 15:57 [IST]
Other articles published on Mar 24, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+