ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಏಕದಿನ ಕ್ರಿಕೆಟ್ ನಲ್ಲಿ ಧೋನಿ ದಾಖಲೆಗಳ ಪರಾಕ್ರಮ

By Mahesh

ಹ್ಯಾಮಿಲ್ಟನ್, ಮಾ.11: ಟೀಂ ಇಂಡಿಯಾ ನಾಯಕ ಎಂಎಸ್ ಧೋನಿ ಕಣಕ್ಕಿಳಿದರೆ ಸಾಕು ರೆಕಾರ್ಡ್ ಗಳು ಧೂಳಿಪಟವಾಗುವುದನ್ನು ನೋಡಬಹುದು. ಏಕದಿನ ಕ್ರಿಕೆಟ್ ದಿಗ್ಗಜರ ಸಾಲಿನಲ್ಲಿ ಅಗ್ರಪಂಕ್ತಿಯಲ್ಲಿರುವ ಮಹೇಂದ್ರ ಸಿಂಗ್ ಧೋನಿ 2015ರ ವಿಶ್ವಕಪ್ ನಲ್ಲೂ ಅನೇಕ ದಾಖಲೆಗಳನ್ನು ಮುರಿಯುತ್ತಾ ತಂಡವನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ.

ಮಾ.10ರಂದು ಐರ್ಲೆಂಡ್ ವಿರುದ್ಧ ಟೀಂ ಇಂಡಿಯಾ 8 ವಿಕೆಟ್ ಗಳ ಸುಲಭ ಜಯ ದಾಖಲಿಸುತ್ತಿದ್ದಂತೆ ಧೋನಿ ಅವರು ಮತ್ತೊಂದು ದಾಖಲೆ ಮುರಿದರು.[ಕಪಿಲ್ ದಾಖಲೆ ಮುರಿದ ಧೋನಿ]

ಮಾ.11, 2015ಕ್ಕೆ ಅನುಗುಣವಾಗಿ ವಿಕೆಟ್ ಕೀಪರ್ ಬ್ಯಾಟ್ಸ್ ಮನ್, ಟೀಂ ಇಂಡಿಯಾ ನಾಯಕ ಎಂಎಸ್ ಧೋನಿ ಅವರು ಏಕದಿನ ಕ್ರಿಕೆಟ್ ನಲ್ಲಿ ಮಾಡಿರುವ ಸಾಧನೆ ಹಾಗೂ ದಾಖಲೆಗಳ ಸಂಗ್ರಹ ಇಲ್ಲಿದೆ:

What all has India captain MS Dhoni achieved in ODI cricket?

* ಕ್ರಿಕೆಟ್ ಇತಿಹಾಸದಲ್ಲೇ ಐಸಿಸಿ ಆಯೋಜನೆಯ ಮೂರು ಚಾಂಪಿಯನ್ ಶಿಪ್ ಗೆದ್ದಿರುವ ಏಕೈಕ ಕ್ಯಾಪ್ಟನ್(ವಿಶ್ವ ಟ್ವೆಂಟಿ20, ಚಾಂಪಿಯನ್ಸ್ ಟ್ರೋಫಿ, ವಿಶ್ವಕಪ್)
* ವಿಶ್ವಕಪ್ ನಲ್ಲಿ 9 ಸತತ ಪಂದ್ಯಗಳನ್ನು ಗೆದ್ದ ಭಾರತದ ಮೊದಲ ನಾಯಕ (ಈ ಮುಂಚೆ 8 ಪಂದ್ಯಗಳನ್ನು ಗಂಗೂಲಿ ಗೆದ್ದಿದ್ದರು)
* ಒಟ್ಟಾರೆ ವಿಶ್ವಕಪ್ ಯಶಸ್ವಿ ನಾಯಕರ ಪಟ್ಟಿಯಲ್ಲಿ ಕ್ಲೈವ್ ಲಾಯ್ಡ್ ಸಮಕ್ಕೆ ಧೋನಿ ನಿಂತಿದ್ದಾರೆ.
* ವಿಶ್ವಕಪ್ ನಲ್ಲಿ ನಾಯಕನಾಗಿ ಅತಿ ಹೆಚ್ಚು ಪಂದ್ಯ 12 ಗೆಲುವು (ಈ ಮುಂಚೆ ಕಪಿಲ್ 1983-1987 ರ ತನಕ 11 ಗೆಲುವು)
* ಆಸ್ಟ್ರೇಲಿಯಾದಲ್ಲಿ ಏಕದಿನ ಸರಣಿ ಗೆದ್ದ ಮೊದಲ ನಾಯಕ(ಕಾಮನ್ ವೆಲ್ತ್ ಬ್ಯಾಂಕ್ ಸರಣಿ, 2008)

ವಿಶ್ವಕಪ್ ಕ್ರಿಕೆಟ್ 2015</a>: </strong><a class=ಅಂಕ ಪಟ್ಟಿ | ವೇಳಾಪಟ್ಟಿ | ಫಲಿತಾಂಶ" title="ವಿಶ್ವಕಪ್ ಕ್ರಿಕೆಟ್ 2015: ಅಂಕ ಪಟ್ಟಿ | ವೇಳಾಪಟ್ಟಿ | ಫಲಿತಾಂಶ" />ವಿಶ್ವಕಪ್ ಕ್ರಿಕೆಟ್ 2015: ಅಂಕ ಪಟ್ಟಿ | ವೇಳಾಪಟ್ಟಿ | ಫಲಿತಾಂಶ

* ವಿದೇಶಿ ನೆಲದಲ್ಲಿ ಭಾರತದ ಅತ್ಯಂತ ಯಶಸ್ವಿ ನಾಯಕ -59 ಪಂದ್ಯ ಗೆಲುವು (ಈ ಮುಂಚೆ 58ಪಂದ್ಯಗಳನ್ನು ಗಂಗೂಲಿ ಗೆದ್ದಿದ್ದರು)
* ಏಕದಿನ ವಿಕೆಟ್ ಗಳಿಕೆಯಲ್ಲಿ ಯಶಸ್ವಿ ವಿಕೆಟ್ ಕೀಪರ್ (323 ವಿಕೆಟ್- ಕ್ಯಾಚ್-238, ಸ್ಟಂಪಿಂಗ್ಸ್- 85)
* ನಾಯಕನಾಗಿ ಅತಿ ಹೆಚ್ಚು ಪಂದ್ಯವಾಡಿದ ಧೋನಿ-175 (ಈ ಮುಂಚೆ ಮಹಮ್ಮದ್ ಅಜರುದ್ದೀನ್ 174 ಪಂದ್ಯ)
* ಏಕದಿನ ಕ್ರಿಕೆಟ್ ನಲ್ಲಿ ಭಾರತದ ಅತ್ಯಂತ ಯಶಸ್ವಿ ನಾಯಕ- 98 ಜಯ.
* ವಿಕೆಟ್ ಕೀಪರ್ ನಾಯಕನಾಗಿ ಅತಿ ಹೆಚ್ಚು ಪಂದ್ಯವಾಡಿದ ಧೋನಿ-175. [ಸಚಿನ್, ದ್ರಾವಿಡ್ ದಿಗ್ಗಜರ ಕ್ಲಬ್ ಸೇರಿದ ಧೋನಿ]
* ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಆಗಿ ಅತಿ ಹೆಚ್ಚು ವೈಯಕ್ತಿಕ ಸ್ಕೋರ್ 183 ನಾಟೌಟ್.

MS Dhoni achieved in ODI cricket

* ಐಸಿಸಿ ಏಕದಿನ ಕ್ರಿಕೆಟ್ ತಂಡಕ್ಕೆ ಸತತ 7 ಬಾರಿ ಒಟ್ಟಾರೆ 8 ಬಾರಿ ಆಯ್ಕೆ, 5 ಬಾರಿ ನಾಯಕ ಸ್ಥಾನಕ್ಕೇರಿದ್ದಾರೆ.
* ಒಂದು ಇನ್ನಿಂಗ್ಸ್ ನಲ್ಲಿ ಅತಿ ಹೆಚ್ಚು ಕ್ಯಾಚ್(6) ಪಡೆದ ಭಾರತದ ವಿಕೆಟ್ ಕೀಪರ್.
* 2008 ಹಾಗೂ 2009ರಲ್ಲಿ ಐಸಿಸಿ ಏಕದಿನ ಆಟಗಾರ ಪ್ರಶಸ್ತಿ ವಿಜೇತ.
* 2007-08ರಲ್ಲಿ ಭಾರತದಲ್ಲಿ ಕ್ರೀಡಾಲೋಕದ ಸಾಧನೆಗೆ ನೀಡುವ ಉನ್ನತ ಗೌರವ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಪಡೆದರು.
* ಬ್ರಿಟನ್ನಿನ ಡಿ ಮೊಂಟ್ ಫೋರ್ಟ್ ವಿವಿಯಿಂದ 2012ರಲ್ಲಿ ಗೌರವ ಡಾಕ್ಟರೇಟ್ ಲಭಿಸಿದೆ.
* 2013ರಲ್ಲಿ ಐಸಿಸಿ ಪೀಪಲ್ಸ್ ಚಾಯ್ಸ್ ಪ್ರಶಸ್ತಿ ಗೆದ್ದಿರುವ ಧೋನಿ.
* 2011ರಲ್ಲಿ ಭಾರತೀಯ ಸೇನೆಯಿಂದ ಗೌರವ ಲೆಫ್ಟಿನೆಂಟ್ ಕರ್ನಲ್ ಪದವಿ ಪ್ರದಾನ.

ಧೋನಿ ಏಕದಿನ ಕ್ರಿಕೆಟ್ ಅಂಕಿ ಅಂಶ
* ಜುಲೈ 7,1981 ಜನನ.
* 259 ಪಂದ್ಯ, 8,343 ರನ್, ಸರಾಸರಿ: 52.14, 9 ಶತಕ, 56 ಅರ್ಧಶತಕ.

ಏಕದಿನ ಮೊದಲ ಪಂದ್ಯ: vs ಬಾಂಗ್ಲಾದೇಶ, ಚಿಟ್ಟಗಾಂಗ್, ಡಿಸೆಂಬರ್ 23, 2004
ನಾಯಕನಾಗಿ ಮೊದಲ ಪಂದ್ಯ: vs ಆಸ್ಟ್ರೇಲಿಯಾ, ಬೆಂಗಳೂರು, ಸೆಪ್ಟೆಂಬರ್ 29, 2007.

ಒನ್ ಇಂಡಿಯಾ ಸುದ್ದಿ

Story first published: Wednesday, January 3, 2018, 10:02 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X