Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮಹೇಂದ್ರ ಸಿಂಗ್ ಧೋನಿ ತಂದೆಯಾಗಲಿದ್ದಾರೆ

ನವದೆಹಲಿ, ನ.12: ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಸದ್ಯದಲ್ಲೇ ತಂದೆಯಾಗಲಿದ್ದಾರೆ. ಧೋನಿ ಮತ್ತು ಅವರ ಹೆಂಡತಿ ಸಾಕ್ಷಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ವರದಿಗಳು ಹೇಳಿವೆ.

ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಏಕದಿನ ಸರಣಿಗೆ ಧೋನಿ ವಿಶ್ರಾಂತಿ ಪಡೆದುಕೊಂಡಿದ್ದಾರೆ. ವಿರಾಟ್ ಕೊಹ್ಲಿ ತಂಡವನ್ನು ನಡೆಸುತ್ತಿದ್ದು ಮುಂಬರುವ ಆಸ್ಟ್ರೇಲಿಯಾ ಟೆಸ್ಟ್ ಸರಣಿಗೂ ನಾಯಕರಾಗಿ ಮುಂದುವರಿಯಲಿದ್ದಾರೆ.[ಐಸಿಸಿ ಏಕದಿನ ತಂಡಕ್ಕೆ ಎಂಎಸ್ ಧೋನಿ ನಾಯಕ]

dhoni

33 ವರ್ಷದ ಮಹೇಂದ್ರ ಸಿಂಗ್ ಧೋನಿ ಜುಲೈ 4, 2010 ರಲ್ಲಿ ಬಾಲ್ಯದ ಗೆಳತಿ ಸಾಕ್ಷಿ ಅವರನ್ನು ವಿವಾಹವಾಗಿದ್ದರು. ಸಾಕ್ಷಿ ಈಗ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದಾಳೆ ಎಂದು ವರದಿಗಳು ಹೇಳಿವೆ.

ಭಾರತದ ನಾಯಕರಾಗಿ ಧೋನಿ ಟಿ-20 ಮತ್ತು ಏಕದಿನ ವಿಶ್ವಕಪ್ ಗೆದ್ದು ಕೊಟ್ಟಿದ್ದಾರೆ. ಕಳೆದ ಬಾರಿ ಭಾರತ ವಿಶ್ವಕಪ್ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಧೋನಿ ನಾಯಕತ್ವವೂ ಮುಖ್ಯವಾಗಿತ್ತು.[ಫುಟ್ಬಾಲ್ ನಂತರ ಹಾಕಿ ತಂಡಕ್ಕೆ ಧೋನಿ ಒಡೆಯ]

ಚೆನ್ನೈ ಸೂಪರ್ ಕಿಂಗ್ಸ್ ನಾಯಕರಾಗಿಯೂ ಸಾಧನೆ ಮಾಡಿರುವ ಧೋನಿ ತಂಡ ಐಪಿಎಲ್ ಮತ್ತು ಚಾಂಪಿಯನ್ಸ್ ಲೀಗ್ ಪಟ್ಟ ಅಲಂಕರಿಸುವಂತೆಯೂ ನೋಡಿಕೊಂಡಿದ್ದಾರೆ.

Story first published: Wednesday, January 3, 2018, 10:12 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+