ಗೌತಮ್ ಗಂಭೀರ್ ವಿರುದ್ಧ ತಿರುಗಿಬಿದ್ದ ಧೋನಿ ಫ್ಯಾನ್ಸ್: ಹೊಸ ಪಟ್ಟವನ್ನೇ ಕಟ್ಟಿ ಬಿಟ್ರು!
ಟೀಮ್ ಇಂಡಿಯಾ ಮಾಜಿ ಆಟಗಾರ ಹಾಗೂ ಬಿಜೆಪಿ ಸಂಸದ ಗೌತಮ್ ಗಂಭೀರ್ ಮತ್ತು ಟೀಮ್ ಇಂಡಿಯಾ ಮಾಜಿ ನಾಯಕ ಎಂ.ಎಸ್. ಧೋನಿ ನಡುವಿನ ಸಂಬಂಧ ಅಷ್ಟಕಷ್ಟೇ ಅನ್ನೋದು ಎಲ್ಲರಿಗೂ ಗೊತ್ತು. ಧೋನಿ ಕುರಿತು ಯಾವಾಗಲೂ ಉರಿದು ಬೀಳುವ ಗೌತಮ್ ಯಾವತ್ತೂ ಗಂಭೀರವಾಗಿ ಉತ್ತರಿಸಿದ್ದೇ ನೋಡಿಲ್ಲ.
ಧೋನಿಯನ್ನ ಬೆನ್ನು ಬಿಡದೆ ಕಾಡುವ ಗೌತಮ್ ಎಲ್ಲೆಂದರಲ್ಲಿ ತಮಗೆ ಅನ್ನಿಸಿದ ಅಭಿಪ್ರಾಯವನ್ನ ಮಂಡಿಸಿ ಬಿಡುವ ಜಾಯಮಾನ ಹೊಂದಿರುವ ವ್ಯಕ್ತಿ. ಇತ್ತೀಚೆಗಷ್ಟೇ ಮತ್ತೊಮ್ಮೆ ಧೋನಿಯನ್ನು ಗುರಿಯಾಗಿಸಿ ಮಾತಿನ ದಾಳಿ ನಡೆಸಿರುವ ಗೌತಿ ವಿರುದ್ಧ ಧೋನಿ ಅಭಿಮಾನಿಗಳು ಮುಗಿಬಿದ್ದಿದ್ದಾರೆ.
ಧೋನಿ ಕಂಡರೆ ಗಂಭೀರ್‌ಗೆ ಹೊಟ್ಟೆಕಿಚ್ಚಾ?
ಹೀಗಂತ ಕೇಳ್ತಿರೋದು ನಾವಲ್ಲ.. ಬದಲಿಗೆ ಧೋನಿ ಅಭಿಮಾನಿಗಳು ಗೌತಮ್ ಗಂಭೀರ್ ಟ್ವೀಟ್‌ಗೆ ಕಮೆಂಟ್ ಮೂಲಕ ಪ್ರಶ್ನಿಸಿದ್ದಾರೆ. ಜೊತೆಗೆ ಗಂಭೀರ್ ಹೊಟ್ಟೆಕಿಚ್ಚಿನ ರಾಯಭಾರಿಯಂತೆ ಬಿಂಬಿತವಾಗ್ತಿದ್ದೀರ ಎಂದು ಮಾಹಿ ಅಭಿಮಾನಿಗಳು ಕಾಲೆಳೆಯುತ್ತಿದ್ದಾರೆ.
ಸೂಪರ್ ಓವರ್‌ನಲ್ಲಿ ABD ಜೊತೆಗೆ ಕೊಹ್ಲಿ ಬ್ಯಾಟಿಂಗ್‌ಗೆ ಬಂದಿದ್ದೇಕೆ?
ಧೋನಿ ಆಡಲಿ, ಬಿಡಲಿ ಗಂಭೀರ್ ಮಾತ್ರ ಸುಮ್ಮನಿರಲ್ಲ!
ಧೋನಿ ಕಳಪೆ ಆಟವಾಡ್ಲೀ, ಅದ್ಭುತ ಆಟವಾಡ್ಲೀ, ಗಂಭೀರ್ ಧೋನಿಯ ಬೆನ್ನು ಬಿಡದಂತೆ ಕಾಡುತ್ತಾರೆ. ಧೋನಿ ವಿಚಾರದಲ್ಲಿ ಎಲ್ಲಂದರಲ್ಲಿ ತಮ್ಮ ಅಭಿಪ್ರಾಯವನ್ನ ನೀಡ್ತಿರ್ತಾರೆ. ಧೋನಿ ವಿಚಾರದಲ್ಲಿ ಪ್ರತೀ ಬಾರಿ ಮೂಗು ತೂರಿಸುವ ಗೌತಮ್ ಗಂಭೀರ್‌ಗೆ ಧೋನಿ ಅಭಿಮಾನಿಗಳು ಹೊಟ್ಟೆಕಿಚ್ಚು ಪಡುವ ರಾಯಭಾರಿ ಎಂದು ಮುಗಿಬಿದ್ದಿದ್ದಾರೆ.
ಸಂಜು ಸ್ಯಾಮ್ಸನ್‌ಗೆ ಮುಂದಿನ ಧೋನಿ ಎಂದಿದ್ದ ಶಶಿ ತರೂರ್
ಕಿಂಗ್ಸ್ ಇಲೆವೆನ್ ಪಂಜಾಬ್ ಎದುರು ರಾಜಸ್ತಾನ್ ರಾಯಲ್ಸ್ ಪ್ಲೇಯರ್ ಸಂಜು ಆಟವನ್ನ ನೋಡಿ ಹೊಗಳಿದ್ದ ಕಾಂಗ್ರೆಸ್ ಸಂಸದ ಶಶಿ ತರೂರ್, ''ಅವನು 14 ವರ್ಷದವನಿದ್ದಾಗ ಅವನಿಗೆ ಒಂದು ದಿನ ಮುಂದಿನ ಎಂಎಸ್ ಧೋನಿ ಆಗುವೆ ಎಂದು ಹೇಳಿದ್ದೆ. ಈಗ ಆ ದಿನ ಬಂದಿದೆ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಟ್ವೀಟ್ ಮಾಡಿದ್ದರು.
ಸೂಪರ್ ಓವರ್‌ನಲ್ಲಿ ಬ್ಯಾಟಿಂಗ್‌ಗೆ ಇಳಿಯದ ಇಶಾನ್ ಕಿಶನ್: ಕಾರಣ ತಿಳಿಸಿದ ರೋಹಿತ್ ಶರ್ಮಾ
ಸಂಜು ಸ್ಯಾಮ್ಸನ್ ಧೋನಿ ಆಗಬೇಕಿಲ್ಲ ಎಂದಿದ್ದ ಗಂಭೀರ್
ಶಶಿ ತರೂರ್ ಹೇಳಿಕೆಯನ್ನ ನೋಡಿ ಸುಮ್ಮನಾಗದ ಗಂಭೀರ್, 'ಸಂಜು ಸ್ಯಾಮ್ಸನ್ ಇನ್ಯಾರೋ ಆಗಬೇಕಾದ ಅವಶ್ಯಕತೆ ಇಲ್ಲ. ಅವನು ಭಾರತ ಕ್ರಿಕೆಟ್ನ 'ದಿ' ಸಂಜು ಸ್ಯಾಮ್ಸನ್ (ಒಬ್ಬನೇ ಸಂಜು ಸ್ಯಾಮ್ಸನ್) ಆಗ್ತಾನೆ' ಅಂತ ಟಾಂಗ್ ನೀಡಿದ್ರು. ಗಂಭೀರ್ ಈ ಹೇಳಿಕೆಗೆ ಕೋಪಗೊಂಡ ಧೋನಿ ಫ್ಯಾನ್ಸ್ ಮುಗಿಬಿದ್ದಿದ್ದು, ಪ್ರತಿಬಾರಿಯು ಧೋನಿ ಮೇಲೆಕೆ ಎಗರಿ ಬೀಳ್ತೀರಾ ಎಂದು ಟೀಕೆ ಮಾಡಿದ್ದಾರೆ. ಇನ್ನಾದರೂ ಧೋನಿ ವಿರುದ್ಧ ಮಾತನಾಡೋದನ್ನು ನಿಲ್ಲಿಸ್ತಾರ ಅಥವಾ ಹೊಟ್ಟೆಕಿಚ್ಚಿನ ರಾಯಭಾರಿಯಾಗಿ ಮುಂದುವರೆಯುತ್ತಾರಾ ನೋಡ್ಬೇಕು ಎಂಬುದು ಧೋನಿ ಅಭಿಮಾನಿಗಳ ನಿರೀಕ್ಷೆಯಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications