Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2022: ಹೊಸ ಜೆರ್ಸಿ ಅನಾವರಣಗೊಳಿಸಿದ ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್‌

Mumbai and delhi

ಐದು ಬಾರಿಯ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಚೊಚ್ಚಲ ಟ್ರೋಫಿಗಾಗಿ ಎದುರು ನೋಡುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್ ಐಪಿಎಲ್ 15ನೇ ಸೀಸನ್‌ಗಾಗಿ ಹೊಸ ಜೆರ್ಸಿಯನ್ನ ಬಿಡುಗಡೆ ಮಾಡಿದೆ.

ಇಂದು ಮೊದಲಿಗೆ ಮುಂಬೈ ಇಂಡಿಯನ್ಸ್‌ ತನ್ನ ಹೊಸ ಜೆರ್ಸಿ ಬಿಡುಗಡೆ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಜೆರ್ಸಿ ಕುರಿತಾಗಿ ಟ್ವೀಟ್‌ಗಳು ವೈರಲ್ ಆಗಿವೆ. ಮುಂಬೈ ಇಂಡಿಯನ್ಸ್ ತನ್ನ ಹೊಸ ಜೆರ್ಸಿಯಲ್ಲಿ ನೀಲಿ ಬಣ್ಣವನ್ನು ಉಳಿಸಿಕೊಂಡಿದೆ.

ಮುಂಬೈ ಇಂಡಿಯನ್ಸ್ ಮಾರ್ಚ್ 27ರಂದು ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಮೊದಲ ಪಂದ್ಯವನ್ನಾಡಲಿದ್ದು, ಬ್ರಬೋನ್ ಸ್ಟೇಡಿಯಂನಲ್ಲಿ ಪಂದ್ಯ ನಡೆಯಲಿದೆ.

ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಬೆನ್ನಲ್ಲೇ, ಡೆಲ್ಲಿ ಕ್ಯಾಪಿಟಲ್ಸ್ ಕೂಡ ಶನಿವಾರ ಜೆರ್ಸಿಯನ್ನು ಅನಾವರಣಗೊಳಿಸಿದೆ. ತಮ್ಮ ಅಧಿಕೃತ ವೆಬ್‌ಸೈಟ್‌ನಲ್ಲಿನ ಹೇಳಿಕೆಯ ಪ್ರಕಾರ, ಫ್ರಾಂಚೈಸಿಯು ಜೆರ್ಸಿ ಬಿಡುಗಡೆಗೆ ನಿಗದಿತ ಸಂಖ್ಯೆಯ ಅಭಿಮಾನಿಗಳನ್ನು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣಕ್ಕೆ ಆಹ್ವಾನಿಸಿ, ತವರು ಮೈದಾನ ಮತ್ತು ಅಭಿಮಾನಿಗಳ ಎದುರು ಜೆರ್ಸಿಯನ್ನ ಬಿಡುಗಡೆ ಮಾಡಿದೆ.

ಡೆಲ್ಲಿ ಕ್ಯಾಪಿಟಲ್ಸ್ ತನ್ನ ಜೆರ್ಸಿಯಲ್ಲಿ ಕೆಂಪು ಮತ್ತು ನೀಲಿ ಬಣ್ಣಗಳ ಸಂಯೋಜನೆಯನ್ನ ಉಳಿಸಿಕೊಂಡಿದ್ದು, ಈ ಕುರಿತಾಗಿ ಟ್ವಿಟ್ಟರ್‌ನಲ್ಲಿ ತಿಳಿಸಿದೆ.

"ಕೆಂಪು ಬಣ್ಣವು ತಂಡದ ಆನ್-ಫೀಲ್ಡ್ ಧೈರ್ಯವನ್ನು ಸಂಕೇತಿಸುತ್ತದೆ, ನೀಲಿ ಬಣ್ಣವು ಸಮತೋಲನ ಮತ್ತು ಶಾಂತತೆಯನ್ನು ಸೂಚಿಸುತ್ತದೆ. ಡಿಸಿ ಲಾಂಛನದ ಭಾಗವಾದ ಹುಲಿ ದೊಡ್ಡದಾಗಿದೆ ಮತ್ತು ಧೈರ್ಯಶಾಲಿಯಾಗಿದೆ, ತಂಡವು ಮತ್ತೊಮ್ಮೆ ಘರ್ಜಿಸಲು ಸಜ್ಜಾಗಿದೆ'' ಎಂದು ಡೆಲ್ಲಿ ಕ್ಯಾಪಿಟಲ್ಸ್‌ ಟ್ವೀಟ್ ಮಾಡಿದೆ.

ಹಿಂದಿನ ಐಪಿಎಲ್ ಮೆಗಾ ಹರಾಜಿನಲ್ಲಿ, ಡೆಲ್ಲಿ ಕ್ಯಾಪಿಟಲ್ಸ್ ಹರಾಜಿನಲ್ಲಿ 20 ಆಟಗಾರರನ್ನು ಆಯ್ಕೆ ಮಾಡಿತು, ಆದ್ರೆ ಈ ಬಾರಿ 24 ಆಟಗಾರರ ತಂಡವನ್ನು ರಚಿಸಿದೆ.

Story first published: Saturday, March 12, 2022, 15:10 [IST]
Other articles published on Mar 12, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+