ಮುಂಬೈ ಸೆಲೆಬ್ರೇಷನ್ : ಕೋಲ್ಕತ್ತಾದಿಂದ ವಾಂಖೆಡೆಗೆ ಶಿಫ್ಟ್
ಮುಂಬೈ, ಮೇ.25: ಕೋಲ್ಕತ್ತಾದ ಈಡನ್ ಗಾರ್ಡನ್ಸ್ ನಲ್ಲಿ ನಡೆದ ಐಪಿಎಲ್ 2015 ಅಂತಿಮ ಹಣಾಹಣಿಯಲ್ಲಿ ಧೋನಿ ನೇತೃತ್ವದ ಪಡೆಯನ್ನು 41 ರನ್ ಗಳ ಅಂತರದಿಂದ ರೋಹಿತ್ ಶರ್ಮ ಅವರ ಪಡೆ ಚಾಂಪಿಯನ್ ಆಗಿ ಸಂಭ್ರಮಿಸಿದೆ. ಅದರೆ, ಈ ಸಂಭ್ರಮ ಅಲ್ಲಿಗೆ ನಿಂತಿಲ್ಲ, ಸೆಲೆಬ್ರೇಷನ್ ಈಗ ವಾಂಖೆಡೆ ಸ್ಟೇಡಿಯಂಗೆ ಶಿಫ್ಟ್ ಆಗಿದೆ.
ನಮ್ಮ ತವರುನೆಲ ವಾಂಖೆಡೆ ಸ್ಟೇಡಿಯಂನಲ್ಲಿ ಎಲ್ಲರೂ ಒಟ್ಟಿಗೆ ಸಂಭ್ರಮಿಸೋಣ, ಇಡೀ ತಂಡ, ಸಹಾಯಕ ಸಿಬ್ಬಂದಿ, ಮುಂಬೈ ಇಂಡಿಯನ್ಸ್ ಅಭಿಮಾನಿಗಳಿಗೆ ಹಬ್ಬದ ಸಂಭ್ರಮ ಮೇ.25ರ ರಾತ್ರಿ 8ಕ್ಕೆ ಎಂದು ಮುಂಬೈ ಇಂಡಿಯನ್ಸ್ ಕರೆ ನೀಡಿದೆ.
ಕ್ರಿಕೆಟ್ ಕ್ಷೇತ್ರದ ದಿಗ್ಗಜರಾದ ಸಚಿನ್ ತೆಂಡೂಲ್ಕರ್, ಅನಿಲ್ ಕುಂಬ್ಳೆ, ರಿಕಿ ಪಾಂಟಿಂಗ್ ಅಲ್ಲದೆ, ರಾಬಿನ್ ಸಿಂಗ್, ಶೇನ್ ಬಾಂಡ್ ಮುಂತಾದ ಆಟಗಾರರಿಗೆ ತಂಡದ ಒಡತಿ ನೀತೂ ಅಂಬಾನಿ ಪ್ರತ್ಯೇಕ ಉಡುಗೊರೆ ನೀಡುವ ಸಾಧ್ಯತೆಯಿದೆ.
ವಾಂಖೆಡೆ ಸ್ಟೇಡಿಯಂ ಪೂರ್ತಿ ನೀಲಿಮಯವಾಗಲಿದ್ದು, ರಿಲಯನ್ಸ್ ಆರಂಭಿಸಿರುವ ಶಿಕ್ಷಣ ಅಭಿಯಾನಕ್ಕೆ ಇನ್ನಷ್ಟು ಜನರ ಸಹಕಾರವನ್ನು ಕೋರಲಿದ್ದಾರೆ. ಬಾಲಿವುಡ್ ಸೆಲೆಬ್ರಿಟಿಗಳು ಕೂಡಾ ಈ ಕಾರ್ಯಕ್ರಮದ ರಂಗೇರಿಸಲಿದ್ದಾರೆ.

ಮುಂಬೈ ಇಂಡಿಯನ್ಸ್ ಮಾಲೀಕರು ಫುಲ್ ಖುಷ್
ನೀತಾ ಅಂಬಾನಿ ಹಾಗೂ ಅವರ ಪುತ್ರರಾದ ಆಕಾಶ್ ಹಾಗೂ ಅನಂತ್ ಅವರು ಪಂದ್ಯದ ಪ್ರತಿ ಎಸೆತವನ್ನು ಆನಂದಿಸಿದ್ದಲ್ಲದೆ, ತಂಡವನ್ನು ಹುರಿದುಂಭಿಸಿದರು. ಕೋಲ್ಕತ್ತಾದಲ್ಲಿ ಕಂಡ ಸಂಭ್ರಮವನ್ನು ವಾಂಖೆಡೆಗೆ ಶಿಫ್ಟ್ ಮಾಡೋಣ ಎಂದು ನೀತಾ ಕರೆ ನೀಡಿದರು.

ಯಸ್ ವೀ ಡಿಡ್ ಇಟ್ ಎಂದ ದಿಗ್ಗಜರು
ಆಟಗಾರರರಾಗಿ ಐಪಿಎಲ್ ಕಪ್ ಎತ್ತಿದ್ದ ಸಚಿನ್ ತೆಂಡೂಲ್ಕರ್ ಹಾಗೂ ರಿಕಿ ಪಾಂಟಿಂಗ್ ಅವರು ಈ ಬಾರಿ ತಂಡದ ಮೆಂಟರ್, ಕೋಚ್ ಆಗಿ ತಂಡವನ್ನು ಗೆಲ್ಲಿಸಿದರು.

ಐಪಿಎಲ್ ಕಪ್ ನೊಂದಿಗೆ
ಐಪಿಎಲ್ ಕಪ್ ನೊಂದಿಗೆ ರಿಕಿ ಪಾಂಟಿಂಗ್, ಪುತ್ರರೊಂದಿಗೆ ನೀತಾ ಅಂಬಾನಿ, ಸಚಿನ್ ತೆಂಡೂಲ್ಕರ್ ಹಾಗೂ ಹರ್ಭಜನ್ ಸಿಂಗ್.

ಮೂವರು ದಿಗ್ಗಜರ ಸಮಾಗಮ
ಹರ್ಭಜನ್ ಸಿಂಗ್ ಜೊತೆ ರಿಕಿ ಪಾಂಟಿಂಗ್ ಹಾಗೂ ಸಚಿನ್ ತೆಂಡೂಲ್ಕರ್ ಸಂತಸದ ಕ್ಷಣವನ್ನು ಹಂಚಿಕೊಳ್ಳುತ್ತಿದ್ದಾರೆ. ಸಚಿನ್ ರಿಂದಾಗಿ ಹರ್ಭಜನ್ ಹಾಗೂ ರಿಕಿ ನಡುವಿನ ವೈಮನಸ್ಯ ಸಂಪೂರ್ಣ ನಾಶವಾಗಿದೆ.
ಮುಂಬೈ ಟ್ವೀಟ್ ಮಾಡಿ ಅಪ್ಡೇಟ್ಸ್
ಮುಂಬೈ ಇಂಡಿಯನ್ಸ್ ತಂಡ ಟ್ವೀಟ್ ಮಾಡಿ ಅಪ್ಡೇಟ್ಸ್ ಪಡೆಯುತ್ತಿದೆ. ವಾಂಖೆಡೆಗೆ ಉಚಿತ ಪ್ರವೇಶ ಬೇಗ ಬನ್ನಿ ಎಂದು ಕರೆ ನೀಡುತ್ತಿದೆ.

ಮೈದಾನದಲ್ಲಿ ಬಾಲಿವುಡ್ ತಾರೆಯರು
ಮೈದಾನದಲ್ಲಿ ಬಾಲಿವುಡ್ ತಾರೆಯರಾದ ಅನಿಲ್ ಕಪೂರ್, ಫರ್ಹಾನ್ ಅಖ್ತರ್, ರಣವೀರ್ ಸಿಂಗ್ ಕಾಣಿಸಿಕೊಂಡರು. ವಾಂಖೆಡೆಯಲ್ಲಿ ಇನ್ನಷ್ಟು ತಾರೆಗಳ ದಂಡು ಕಾಣಸಿಗಲಿದೆ.
ಅಪುನ್ ಕಾ ಸೂಪರ್ ಸ್ಟಾರ್ ಸೂಪರ್ ಚಿತ್ರ
ಅಪುನ್ ಕಾ ಸೂಪರ್ ಸ್ಟಾರ್ ಸೂಪರ್ ಚಿತ್ರ ಹರ್ಭಜನ್ ಹಾಗೂ ರೋಹಿತ್ ಐಪಿಎಲ್ 2015 ಟ್ರೋಫಿ ಜೊತೆಗೆ

ವಾಂಖೆಡೆಯಲ್ಲಿ ನಿಮ್ಮ ಸಂಭ್ರಮ ಶುರುವಾಗಲಿ
ಐಪಿಎಲ್ 2015 ಕಪ್ ನೊಂದಿಗೆ ಮುಂಬೈ ಇಂಡಿಯನ್ಸ್ ತಂಡ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications