IPL 2023: ಮುಂಬೈ ಇಂಡಿಯನ್ಸ್ ತಂಡಕ್ಕೆ ಮುಖ್ಯ ಕೋಚ್ ಆಗಿ ಮಾರ್ಕ್ ಬೌಚರ್ ನೇಮಕ
ಮುಂಬೈ ಇಂಡಿಯನ್ಸ್ ತನ್ನ ಫ್ರಾಂಚೈಸಿಯ ಮುಖ್ಯ ಕೋಚ್ ಆಗಿ ಮಾರ್ಕ್ ಬೌಚರ್ ಅವರನ್ನು ಹೆಸರಿಸಿದೆ. ಮೆಗಾ ಹರಾಜಿನ ನಂತರ, ಮುಂಬೈ ಇಂಡಿಯನ್ಸ್ ತಮ್ಮ ತಂಡವನ್ನು ಕೂಲಂಕಷವಾಗಿ ಪರಿಶೀಲಿಸಲು ಆಯ್ಕೆ ಮಾಡಿಕೊಂಡಿತು ಮತ್ತು ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ ಮತ್ತು ಇತರರನ್ನು ಕೈಬಿಟ್ಟಿದ್ದರಿಂದ ಕಿರಿಯ ಆಟಗಾರರನ್ನು ಆಯ್ಕೆ ಮಾಡಿಕೊಂಡಿತು.
ಮಹೇಲಾ ಜಯವರ್ಧನೆ ಮತ್ತು ಜಹೀರ್ ಖಾನ್ ಎಂಐ ಫ್ರಾಂಚೈಸಿಯ ಜಾಗತಿಕ ಮುಖ್ಯಸ್ಥರಾಗಿ ನೇಮಕಗೊಂಡ ನಂತರ, ಮುಂಬೈ ಇಂಡಿಯನ್ಸ್ ತಂಡದ ಮುಖ್ಯ ಕೋಚ್ ಹುದ್ದೆ ಖಾಲಿಯಾಗಿತ್ತು.
ಮಾರ್ಕ್ ಬೌಚರ್ ದಕ್ಷಿಣ ಆಫ್ರಿಕಾದ ತಂಡದೊಂದಿಗೆ ಅವರ ಮುಖ್ಯ ತರಬೇತುದಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2022ರ ಟಿ20 ವಿಶ್ವಕಪ್ ನಂತರ ಅವರ ಅವಧಿ ಮುಕ್ತಾಯವಾಗಲಿದ್ದು, ನಂತರ ಮುಂಬೈ ತಂಡದ ಮುಖ್ಯ ಕೋಚ್ ಆಗಿ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.
ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ ವಿರುದ್ಧ ದಕ್ಷಿಣ ಆಫ್ರಿಕಾದ ಹೀನಾಯ ಸೋಲಿನ ನಂತರ ಮುಖ್ಯ ಕೋಚ್ ಮಾರ್ಕ್ ಬೌಚರ್ ತಕ್ಷಣವೇ ಕೆಳಗಿಳಿಯುವ ಬಯಕೆಯನ್ನು ವ್ಯಕ್ತಪಡಿಸಿದರು. ಈ ನಿರ್ಧಾರವು ಅವರು ಐಪಿಎಲ್‌ಗೆ ಸೇರಲು ಬಯಸುತ್ತಿರುವ ಬಗ್ಗೆ ಎಂದು ಟೀಕೆ ವ್ಯಕ್ತವಾಯಿತು.

ಎಂಐ ಕೇಪ್ ಟೌನ್ ತಂಡಕ್ಕೆ ತರಬೇತಿ ನೀಡಲು ಆಸಕ್ತಿ
ಬೌಚರ್ ಅವರ ಹಠಾತ್ ನಿರ್ಧಾರದ ನಂತರ ಮುಂಬೈ ತಂಡವು ಮುಖ್ಯ ಕೋಚ್ ಆಗಿ ನೇಮಿಸಿಕೊಳ್ಳಲು ಆಸಕ್ತಿ ವಹಿಸಿತ್ತು. ದಕ್ಷಿಣ ಆಫ್ರಿಕಾದ ಮಾಜಿ ವಿಕೆಟ್‌ಕೀಪರ್ , ಅವರು ಮುಂಬರುವ ಐಪಿಎಲ್ ಋತುವಿನಲ್ಲಿ ಮುಂಬೈ ಇಂಡಿಯನ್ಸ್‌ಗೆ ಮುಖ್ಯ ಕೋಚ್ ಪಾತ್ರವನ್ನು ವಹಿಸಿಕೊಳ್ಳಲಿದ್ದಾರೆ ಎಂದು ಈಗ ಖಚಿತಪಡಿಸಲಾಗಿದೆ.
ಸೌತ್ ಆಫ್ರಿಕಾ ಟಿ20 ಲೀಗ್‌ನ ತಂಡವಾದ ಎಂಐ ಕೇಪ್ ಟೌನ್‌ಗೆ ತರಬೇತಿ ನೀಡಲು ಮಾರ್ಕ್ ಬೌಚರ್ ತೀವ್ರ ಆಸಕ್ತಿಯನ್ನು ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಎಂಐ ಕೇಪ್‌ಟೌನ್ ತಂಡಕ್ಕೆ ಸೈಮನ್ ಕ್ಯಾಟಿಚ್ ಮುಖ್ಯ ಕೋಚ್ ಆಗಿ ನೇಮಕವಾಗಿದ್ದಾರೆ.
ಟಿ20 ವಿಶ್ವಕಪ್: ಮೊಹಮ್ಮದ್ ನಬಿ ನೇತೃತ್ವದ ಬಲಿಷ್ಠ ಅಫ್ಘಾನಿಸ್ತಾನ ತಂಡ ಪ್ರಕಟ

ಮಾರ್ಕ್ ಬೌಚರ್ ತರಬೇತಿಯಲ್ಲಿ ಯಶಸ್ಸು
ದಕ್ಷಿಣ ಆಫ್ರಿಕಾ ತಂಡದ ಯಶಸ್ವಿ ವಿಕೆಟ್ ಕೀಪರ್ ಬ್ಯಾಟರ್ ಆಗಿ ಬೌಚರ್ ಪ್ರಸಿದ್ಧರಾಗಿದ್ದರು. ಟೆಸ್ಟ್ ಪಂದ್ಯಗಳಲ್ಲಿ ವಿಕೆಟ್ ಕೀಪರ್ ಆಗಿ ಅತಿ ಹೆಚ್ಚು ಆಟಗಾರರನ್ನು ಔಟ್ ಮಾಡಿದ ದಾಖಲೆ ಈಗಲೂ ಬೌಚರ್ ಹೆಸರಿನಲ್ಲಿದೆ. ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನಕ್ಕೆ ವಿದಾಯ ಹೇಳಿದ ನಂತರ ಮಾರ್ಕ್ ಬೌಚರ್, ಟೈಟಾನ್ಸ್‌ಗೆ ಮುಖ್ಯ ತರಬೇತುದಾರರಾಗಿ ನೇಮಕವಾದರು. ಸೌತ್ ಆಫ್ರಿಕಾ ಲೀಗ್‌ನಲ್ಲಿ ಟೈಟಾನ್ಸ್ ಇದುವರೆಗೆ 5 ಬಾರಿ ಚಾಂಪಿಯನ್ ಆಗಿದೆ. ಇದರಲ್ಲಿ ಬೌಚರ್ ಪಾತ್ರ ಮುಖ್ಯವಾಗಿದೆ.
ದಕ್ಷಿಣ ಆಫ್ರಿಕಾ ದೇಶದ ಮುಖ್ಯ ಕೋಚ್ ಆಗಿ ನೇಮಕವಾದ ಬೌಚರ್, ಸೌತ್ ಆಫ್ರಿಕಾ ತಂಡ 11 ಟೆಸ್ಟ್ ಗೆಲುವುಗಳು, 12 ಏಕದಿನ ಪಂದ್ಯಗಳಲ್ಲಿ ಗೆಲುವುಗಳು ಮತ್ತು 23 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಗೆಲವು ಸಾಧಿಸಿದೆ.

ಹೊಸ ಕೋಚ್ ಸ್ವಾಗತಿಸಿದ ಆಕಾಶ್ ಅಂಬಾನಿ
ಹೊಸ ಕೋಚ್ ಮಾರ್ಕ್ ಬೌಚರ್ ಅವರನ್ನು ಆಕಾಶ್ ಅಂಬಾನಿ ಸ್ವಾಗತಿಸಿದ್ದಾರೆ. ಹೊಸ ಕೋಚ್ ನೇಮಕವಾದ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರು ಆಕಾಶ್ ಅಂಬಾನಿ, "ಮುಂಬೈ ಇಂಡಿಯನ್ಸ್‌ಗೆ ಮಾರ್ಕ್ ಬೌಚರ್ ಸ್ವಾಗತಿಸಲು ಸಂತೋಷವಾಗಿದೆ. ಆಟಗಾರನಾಗಿ ಮತ್ತು ತರಬೇತುದಾರರಾಗಿ ಮಾರ್ಕ್ ಬೌಚರ್ ಅಪಾರ ಯಶಸ್ಸು ಕಂಡಿದ್ದಾರೆ. ಮುಂಬೈ ಇಂಡಿಯನ್ಸ್ ತಂಡಕ್ಕೆ ಅವರ ಸೇರ್ಪಡೆಯಿಂದ ಮತ್ತಷ್ಟು ಬಲ ಬಂದಿದೆ. ಮಾರ್ಕ್ ಬೌಚರ್ ಮುಂಬೈ ಇಂಡಿಯನ್ಸ್ ತಂಡಕ್ಕೆ ಅಪಾರ ಮೌಲ್ಯವನ್ನು ಸೇರಿಸುತ್ತಾರೆ ಮತ್ತು ಅದರ ಪರಂಪರೆಯನ್ನು ಮುನ್ನಡೆಸುತ್ತಾರೆ." ಎಂದು ಹೇಳಿದ್ದಾರೆ.

ಹೊಸ ಜವಾಬ್ದಾರಿ ವಹಿಸಿಕೊಳ್ಳಲು ಸಂತೋಷವಾಗಿದೆ
ಮುಂಬೈ ಇಂಡಿಯನ್ಸ್‌ನ ಮುಖ್ಯ ತರಬೇತುದಾರರಾಗಿ ನೇಮಕಗೊಂಡಿರುವುದು ಗೌರವ ದೊರೆತಿದೆ ಎಂದು ಮಾರ್ಕ್ ಬೌಚರ್ ಹೇಳಿದ್ದಾರೆ. ನಾನು ಸವಾಲನ್ನು ಎದುರು ನೋಡುತ್ತಿದ್ದೇನೆ ಮತ್ತು ಫಲಿತಾಂಶಗಳ ಅಗತ್ಯವನ್ನು ಗೌರವಿಸುತ್ತೇನೆ. ಇದು ಉತ್ತಮ ನಾಯಕತ್ವ ಮತ್ತು ಆಟಗಾರರನ್ನು ಹೊಂದಿರುವ ಪ್ರಬಲ ತಂಡವಾಗಿದೆ. ಈ ಡೈನಾಮಿಕ್ ತಂಡಕ್ಕೆ ಮೌಲ್ಯವನ್ನು ಸೇರಿಸಲು ನಾನು ಎದುರು ನೋಡುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.
ಮುಂಬೈ ಕಳೆದ ವರ್ಷ ಸಾಕಷ್ಟು ನೀರಸ ಪ್ರದರ್ಶನ ನೀಡಿತ್ತು ಮತ್ತು ಪಾಯಿಂಟ್ಸ್ ಪಟ್ಟಿಯಲ್ಲಿ ಕೊನೆಯ ತಂಡವಾಗಿತ್ತು. ಬೌಚರ್ ಮುಖ್ಯ ಕೋಚ್ ಆಗಿ ನೇಮಕಗೊಳ್ಳುವುದರೊಂದಿಗೆ, ಮುಂಬೈ ಈಗ ಅವರು ತಮ್ಮ ಅದೃಷ್ಟವನ್ನು ತಿರುಗಿಸಬಹುದು ಮತ್ತು ಆರನೇ ಚಾಂಪಿಯನ್‌ಶಿಪ್ ಟ್ರೋಫಿಯನ್ನು ಗೆಲ್ಲಲು ಎದುರುನೋಡುತ್ತಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications