ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್: ಮೊಹಮ್ಮದ್ ನಬಿ ನೇತೃತ್ವದ ಬಲಿಷ್ಠ ಅಫ್ಘಾನಿಸ್ತಾನ ತಂಡ ಪ್ರಕಟ

ಅಕ್ಟೋಬರ್ 16 ರಂದು ಆಸ್ಟ್ರೇಲಿಯಾದಲ್ಲಿ ಪ್ರಾರಂಭವಾಗುವ ಐಸಿಸಿ ಪುರುಷರ ಟಿ20 ವಿಶ್ವಕಪ್ 2022 ಗಾಗಿ ಅಫ್ಘಾನಿಸ್ತಾನವು ತನ್ನ 15 ಸದಸ್ಯರ ತಂಡವನ್ನು ಹೆಸರಿಸಿದೆ. ಏಷ್ಯಾ ಕಪ್ 2022 ರಲ್ಲಿ ಅಫ್ಘಾನಿಸ್ತಾನವನ್ನು ಮುನ್ನಡೆಸಿದ್ದ ಮೊಹಮ್ಮದ್ ನಬಿ ಮತ್ತೊಮ್ಮೆ ನಾಯಕತ್ವವನ್ನು ವಹಿಸಿಕೊಂಡಿದ್ದಾರೆ.

ಏಷ್ಯಾಕಪ್ ತಂಡದ ಭಾಗವಾಗಿದ್ದ ಸಮೀವುಲ್ಲಾ ಶಿನ್ವಾರಿ, ಹಶ್ಮತುಲ್ಲಾ ಶಾಹಿದಿ, ಅಫ್ಸರ್ ಝಜೈ, ಕರೀಂ ಜನತ್ ಮತ್ತು ನೂರ್ ಅಹ್ಮದ್ ತಂಡದಿಂದ ಹೊರಗುಳಿದಿದ್ದಾರೆ. ಮಧ್ಯಮ ಕ್ರಮಾಂಕದ ಬ್ಯಾಟರ್ ದರ್ವಿಶ್ ರಸೂಲಿ, ಆಲ್ ರೌಂಡರ್ ಖೈಸ್ ಅಹ್ಮದ್ ಮತ್ತು ಬಲಗೈ ವೇಗಿ ಸಲೀಂ ಸಫಿ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.

ಟಿ20 ವಿಶ್ವಕಪ್: ಬಲಿಷ್ಠ ಆಟಗಾರರನ್ನೇ ಹೊರಗಿಟ್ಟ ವೆಸ್ಟ್ ಇಂಡೀಸ್: ಕಾರಣ ಬಹಿರಂಗ!ಟಿ20 ವಿಶ್ವಕಪ್: ಬಲಿಷ್ಠ ಆಟಗಾರರನ್ನೇ ಹೊರಗಿಟ್ಟ ವೆಸ್ಟ್ ಇಂಡೀಸ್: ಕಾರಣ ಬಹಿರಂಗ!

ಈ ವರ್ಷದ ಆರಂಭದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ 22 ವರ್ಷದ ರಸೂಲಿ, ಬೆರಳಿನ ಗಾಯದಿಂದ ಚೇತರಿಸಿಕೊಂಡ ನಂತರ ಮತ್ತು ಶಪಜೀಜಾ ಕ್ರಿಕೆಟ್ ಲೀಗ್ 2022 ರಲ್ಲಿ ಉತ್ತಮ ಪ್ರದರ್ಶನ ನೀಡಿದ ನಂತರ ತಂಡಕ್ಕೆ ಮರಳಿದ್ದಾರೆ.

2022 ರ ಮಾರ್ಚ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಕೊನೆಯ ಬಾರಿಗೆ ಟಿ20 ಪಂದ್ಯ ಆಡಿದ್ದ ಕೈಸ್ ಅಹ್ಮದ್ ತಂಡಕ್ಕೆ ವಾಪಸ್ ಆಗಿದ್ದಾರೆ, 20 ವರ್ಷದ ಬಲಗೈ ವೇಗಿ ಸಲೀಂ ಸಫಿ ತಮ್ಮ ಮೊದಲ ಅಂತರರಾಷ್ಟ್ರೀಯ ಪಂದ್ಯವನ್ನಾಡಲಿದ್ದಾರೆ.

17 ವರ್ಷಗಳ ಬಳಿಕ ಪಾಕಿಸ್ತಾನದಲ್ಲಿ ಕ್ರಿಕೆಟ್ ಆಡಲು ಆಗಮಿಸಿದ ಇಂಗ್ಲೆಂಡ್ ತಂಡ17 ವರ್ಷಗಳ ಬಳಿಕ ಪಾಕಿಸ್ತಾನದಲ್ಲಿ ಕ್ರಿಕೆಟ್ ಆಡಲು ಆಗಮಿಸಿದ ಇಂಗ್ಲೆಂಡ್ ತಂಡ

 ಪ್ರಮುಖ ಹಿರಿಯ ಆಟಗಾರರಿಗೆ ತಂಡದಲ್ಲಿ ಸ್ಥಾನ

ಪ್ರಮುಖ ಹಿರಿಯ ಆಟಗಾರರಿಗೆ ತಂಡದಲ್ಲಿ ಸ್ಥಾನ

ಅಫ್ಸರ್ ಝಜೈ, ಶರಫುದ್ದೀನ್ ಅಶ್ರಫ್, ರಹಮತ್ ಷಾ ಮತ್ತು ಗುಲ್ಬದಿನ್ ನೈಬ್ ಅವರನ್ನು ಸ್ಟ್ಯಾಂಡ್‌ ಬೈ ಆಟಗಾರರು ಎಂದು ಹೆಸರಿಸಲಾಗಿದೆ, ಉಳಿದಂತೆ ಪ್ರಮುಖ ಆಟಗಾರರು ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

"ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ವಿಶ್ವಕಪ್‌ಗೆ ತಂಡವನ್ನು ಆಯ್ಕೆ ಮಾಡಲು, ಏಷ್ಯಾ ಕಪ್ ಉತ್ತಮ ಅವಕಾಶವಾಗಿದೆ" ಎಂದು ಮುಖ್ಯ ಆಯ್ಕೆಗಾರ ನೂರ್ ಮಲಿಕ್‌ಜಾಯ್ ಹೇಳಿದ್ದಾರೆ.

 ದರ್ವಿಶ್ ರಸೂಲಿ ತಂಡಕ್ಕೆ ವಾಪಸ್

ದರ್ವಿಶ್ ರಸೂಲಿ ತಂಡಕ್ಕೆ ವಾಪಸ್

"ಅದೃಷ್ಟವಶಾತ್, ದರ್ವಿಶ್ ರಸೂಲಿ ಗಾಯದಿಂದ ಚೇತರಿಸಿಕೊಂಡಿದ್ದಾರೆ ಮತ್ತು ಅವರು ವಿಶ್ವಕಪ್‌ಗೆ ಆಯ್ಕೆಯಾಗಿರುವುದು ನಮಗೆ ಸಂತೋಷವಾಗಿದೆ, ಅವರು ಈ ಹಿಂದೆ ನಡೆದ ಶಪಜೀಜಾ ಕ್ರಿಕೆಟ್ ಲೀಗ್ 2022 ನಲ್ಲಿಉತ್ತಮ ಪ್ರದರ್ಶನ ನೀಡಿದ್ದಾರೆ. ಮಧ್ಯಮ ಕ್ರಮಾಂಕಕ್ಕೆ ಹೆಚ್ಚುವರಿ ಬ್ಯಾಟಿಂಗ್ ಆಯ್ಕೆ ಸಿಕ್ಕಂತಾಗಿದೆ" ಎಂದು ನೂರ್ ಮಲಿಕ್‌ಜಾಯ್ ಹೇಳಿದ್ದಾರೆ.

2022ರ ಆರಂಭದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಲು ಆರಂಭಿಸಿದ್ದ ರಸೂಲಿ ನಂತರ ಗಾಯದ ಸಮಸ್ಯೆಯಿಂದ ತಂಡದಿಂದ ಹೊರಗುಳಿದಿದ್ದರು.

 ತಂಡದಲ್ಲಿ ಹೆಚ್ಚುವರಿ ವೇಗದ ಬೌಲರ್

ತಂಡದಲ್ಲಿ ಹೆಚ್ಚುವರಿ ವೇಗದ ಬೌಲರ್

"ಆಸ್ಟ್ರೇಲಿಯಾದ ಪರಿಸ್ಥಿತಿಗಳು ವೇಗದ ಬೌಲರ್‌ಗಳಿಗೆ ಹೆಚ್ಚಿನ ಬೆಂಬಲ ನೀಡುವುದರಿಂದ, ನಮ್ಮ ಬೌಲಿಂಗ್ ವಿಭಾಗಕ್ಕೆ ಮತ್ತಷ್ಟು ಶಕ್ತಿ ನೀಡಲು ನಾವು ಸಲೀಂ ಸಫಿ ಎಂಬ ಎತ್ತರದ ಬಲಗೈ ವೇಗಿಯನ್ನು ಆಯ್ಕೆ ಮಾಡಿದ್ದೇವೆ. ಒಟ್ಟಾರೆಯಾಗಿ ನಾವು ಈವೆಂಟ್‌ಗೆ ಲಭ್ಯವಿರುವ ಅತ್ಯುತ್ತಮ ಆಟಗಾರರನ್ನು ಆಯ್ಕೆ ಮಾಡಿದ್ದೇವೆ ಮತ್ತು ವಿಶ್ವಕಪ್‌ ಪಂದ್ಯಾವಳಿಯಯಲ್ಲಿ ಉತ್ತಮ ಪ್ರದರ್ಶನ ನೀಡುವ ಭರವಸೆ ಹೊಂದಿದ್ದೇವೆ." ಎಂದು ಅವರು ಹೇಳಿದ್ದಾರೆ.

ಟಿ20 ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನವು 1 ನೇ ಗುಂಪಿನಲ್ಲಿ ಸೇರಿದೆ ಮತ್ತು ಅಕ್ಟೋಬರ್ 22 ರಂದು ಇಂಗ್ಲೆಂಡ್ ವಿರುದ್ಧ ಪರ್ತ್‌ನಲ್ಲಿ ತನ್ನ ಅಭಿಯಾನವನ್ನು ಪ್ರಾರಂಭಿಸುತ್ತದೆ. ಅವರು ಕಳೆದ ಋತುವಿನಲ್ಲಿ ಅಫ್ಘಾನಿಸ್ತಾನ ತಂಡ ಉತ್ತಮ ಪ್ರದರ್ಶನ ನೀಡಿದೆ. ಐದು ಪಂದ್ಯಗಳಲ್ಲಿ ಎರಡು ಗೆಲುವುಗಳೊಂದಿಗೆ ಗುಂಪು 2 ರಲ್ಲಿ ನಾಲ್ಕನೇ ಸ್ಥಾನ ಪಡೆದಿತ್ತು.

 ಟಿ20 ವಿಶ್ವಕಪ್‌ಗೆ ಅಫ್ಘಾನಿಸ್ತಾನ ತಂಡ

ಟಿ20 ವಿಶ್ವಕಪ್‌ಗೆ ಅಫ್ಘಾನಿಸ್ತಾನ ತಂಡ

ಟಿ20 ವಿಶ್ವಕಪ್ ತಂಡ: ಮೊಹಮ್ಮದ್ ನಬಿ (ಸಿ), ನಜಿಬುಲ್ಲಾ ಝದ್ರಾನ್ (ವಿಸಿ), ರಹಮಾನುಲ್ಲಾ ಗುರ್ಬಾಜ್ (ವಾಕ್), ಅಜ್ಮತುಲ್ಲಾ ಒಮರ್ಜಾಯ್, ದರ್ವಿಶ್ ರಸೂಲಿ, ಫರೀದ್ ಅಹ್ಮದ್ ಮಲಿಕ್, ಫಜಲ್ ಹಕ್ ಫಾರೂಕಿ, ಹಜರತುಲ್ಲಾ ಝಜೈ, ಇಬ್ರಾಹಿಂ ನವ್ ಝಡ್ರಾನ್, ರಹುಲ್ ಝದ್ರಾನ್ , ಖೈಸ್ ಅಹ್ಮದ್, ರಶೀದ್ ಖಾನ್, ಸಲೀಂ ಸಫಿ, ಉಸ್ಮಾನ್ ಘನಿ

ಮೀಸಲು ಆಟಗಾರರು: ಅಫ್ಸರ್ ಝಜೈ, ಶರಫುದ್ದೀನ್ ಅಶ್ರಫ್, ರಹಮತ್ ಶಾ, ಗುಲ್ಬದಿನ್ ನೈಬ್

Story first published: Thursday, September 15, 2022, 21:54 [IST]
Other articles published on Sep 15, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X