Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಮುಂಬೈ ಇಂಡಿಯನ್ಸ್ ಪಾರಮ್ಯ

Mumbai Indians players leading various teams in Syed Mushtaq Ali T20

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌) ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ (ಎಂಐ) ಆಟಗಾರರು ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20ಯಲ್ಲಿ ವಿಶೇಷ ಸಾಧನೆ ತೋರಿದ್ದಾರೆ. ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20ನಲ್ಲಿ ಮುಂಬೈ ಇಂಡಿಯನ್ಸ್‌ನ ಆಟಗಾರರು ಬೇರೆ ಬೇರೆ ತಂಡಗಳ ನಾಯಕತ್ವ ವಹಿಸಿಕೊಂಡು ಗಮನ ಸೆಳೆದಿದ್ದಾರೆ.

ಮುಂಬೈ ತಂಡಕ್ಕೆ ಮುಂಬೈ ಇಂಡಿಯನ್ಸ್‌ನ ಸೂರ್ಯಕುಮಾರ್ ಯಾದವ್ ನಾಯಕರಾಗಿದ್ದಾರೆ. ಝಾರ್ಖಂಡ್ ತಂಡಕ್ಕೆ ಎಂಐನ ಯುವ ಬ್ಯಾಟ್ಸ್‌ಮನ್‌ ಇಶಾನ್ ಕಿಶನ್ ಕ್ಯಾಪ್ಟನ್ ಆಗಿದ್ದಾರೆ. ಇನ್ನು ಬರೋಡಾ ತಂಡವನ್ನು ಮುಂಬೈ ಆಲ್ ರೌಂಡರ್ ಕೃನಾಲ್ ಪಾಂಡ್ಯ ಮುನ್ನಡೆಸುತ್ತಿದ್ದಾರೆ.

ಈ ಬಾರಿಯ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20ಯಲ್ಲಿ ಐಪಿಎಲ್‌ ತಂಡವೊಂದರ ಹೆಚ್ಚಿನ ಆಟಗಾರರು ಬೇರೆ ಬೇರೆ ತಂಡಗಳ ನಾಯಕತ್ವ ವಹಿಸಿಕೊಂಡಿದ್ದಾರೆ ಎಂದಾದರೆ ಅದು ಮುಂಬೈ ಇಂಡಿಯನ್ಸ್ ಆಟಗಾರರು. ಬೇರೆ ಯಾವುದೇ ಐಪಿಎಲ್ ತಂಡದ ಆಟಗಾರರು ಇಷ್ಟು ಸಂಖ್ಯೆಯಲ್ಲಿ ಕ್ಯಾಪ್ಟನ್ಸಿ ವಹಿಸಿಕೊಂಡಿಲ್ಲ.

ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡ 2020ರ ಐಪಿಎಲ್ ಫೈನಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆದ್ದು 5ನೇ ಬಾರಿಗೆ ಚಾಂಪಿಯನ್ಸ್ ದಾಖಲೆ ನಿರ್ಮಿಸಿದೆ. ಮುಂಬೈ ಬಿಟ್ಟರೆ ಎರಡನೇ ಅತೀ ಹೆಚ್ಚು ಸಾರಿ ಟ್ರೋಫಿ ಗೆದ್ದ ತಂಡವೆಂದರೆ ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ (3 ಸಾರಿ).

Story first published: Friday, January 1, 2021, 12:15 [IST]
Other articles published on Jan 1, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+