IPL 2023: ಹೊಸ ಕೋಚ್ ನೇಮಕ ಮಾಡಲು ಮುಂದಾದ ಮುಂಬೈ ಇಂಡಿಯನ್ಸ್
ಮಹೇಲಾ ಜಯವರ್ಧನೆ ಮತ್ತು ಜಹೀರ್ ಖಾನ್ ಮುಂಬೈ ಇಂಡಿಯನ್ಸ್ ತಂಡದಲ್ಲಿ ಸಾಕಷ್ಟು ವರ್ಷಗಳಿಂದ ಗುರುತಿಸಿಕೊಂಡಿದ್ದಾರೆ. ಮಹೇಲಾ ಜಯವರ್ಧನೆ 2017ರಿಂದ ಮುಂಬೈ ಇಂಡಿಯನ್ಸ್ ತಂಡದ ಭಾಗವಾಗಿದ್ದಾರೆ. ಮುಂಬೈ ಇಂಡಿಯನ್ಸ್ ಐಪಿಎಲ್ ಪ್ರಶಸ್ತಿ ಜಯಿಸುವಲ್ಲಿ ಇವರಿಬ್ಬರ ಪಾತ್ರವೂ ಅತಿ ಮುಖ್ಯವಾಗಿದೆ.
ಮುಂಬೈ ಇಂಡಿಯನ್ಸ್ ತಂಡ ಇದೀಗ ಜಾಗತಿಕ ಮಟ್ಟದಲ್ಲಿ ತನ್ನ ಕಾರ್ಯಾಚರಣೆಯನ್ನು ವಿಸ್ತರಣೆ ಮಾಡಿದೆ. ಯುಎಇಯಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಲೀಗ್ ಟಿ20, ಸೌತ್ ಆಫ್ರಿಕಾ ಟಿ20 ಲೀಗ್‌ನಲ್ಲಿ ಮುಂಬೈ ಇಂಡಿಯನ್ಸ್ ಈಗಾಗಲೇ ತಂಡಗಳನ್ನು ಖರೀದಿಸಿದೆ.
ಮುಂಬೈ ಇಂಡಿಯನ್ಸ್ ತನ್ನ ತಂಡಗಳನ್ನು ಇತರ ಕ್ರಿಕೆಟ್ ಲೀಗ್‌ಗಳಿಗೆ ವಿಸ್ತರಿಸುವುದರೊಂದಿಗೆ, ಈ ಜೋಡಿಗೆ ಹೆಚ್ಚಿನ ಜವಾಬ್ದಾರಿ ನೀಡಲಾಗಿದೆ. ಮಹೇಲಾ ಜಯವರ್ಧನೆ ಅವರನ್ನು ಜಾಗತಿಕ ಪ್ರದರ್ಶನದ ಮುಖ್ಯಸ್ಥರಾಗಿ ನೇಮಕ ಮಾಡಿದ ನಂತರ ಮುಂಬೈ ಇಂಡಿಯನ್ಸ್ ಹೊಸ ಮುಖ್ಯ ಕೋಚ್ ಅನ್ನು ಘೋಷಿಸಲಿದೆ, ಜಹೀರ್ ಖಾನ್ ಜಾಗತಿಕ ಕ್ರಿಕೆಟ್ ಬೆಳವಣಿಗೆಗಳನ್ನು ನೋಡಿಕೊಳ್ಳುವ ವಿಭಾಗದ ಮುಖ್ಯಸ್ಥರಾಗಿದ್ದಾರೆ.
ಇಬ್ಬರಿಗೂ ಹೊಸ ಜವಾಬ್ದಾರಿಗಳನ್ನು ನೀಡಿರುವುದರಿಂದ, ಮುಂಬೈ ಇಂಡಿಯನ್ಸ್ ತನ್ನ ಐಪಿಎಲ್ ಫ್ರಾಂಚೈಸಿಗೆ ಹೊಸ ಮುಖ್ಯ ಕೋಚ್ ಅನ್ನು ಘೋಷಿಸುವ ನಿರೀಕ್ಷೆಯಿದೆ. ಮೂಲಗಳ ಪ್ರಕಾರ ಶೀಘ್ರದಲ್ಲೇ ಹೊಸ ಕೋಚ್ ಯಾರು ಎಂದು ಘೋಷಣೆ ಮಾಡಲಿದೆ.

ಮತ್ತೆರಡು ಲೀಗ್‌ಗಳಲ್ಲಿ ಎಂಐ ತಂಡ
ಇಂಟರ್ ನ್ಯಾಷನಲ್ ಲೀಗ್ ಟಿ20 ಪಂದ್ಯಾವಳಿಯಲ್ಲಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಹೊಸ ತಂಡವನ್ನು ಖರೀದಿ ಮಾಡಿದೆ. ಆ ತಂಡಕ್ಕೆ ಎಂಐ ಎಮಿರೇಟ್ಸ್ (MI Emirates) ಎಂದು ಹೆಸರಿಟ್ಟಿದೆ. ನಂತರ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಸೌತ್ ಆಫ್ರಿಕಾ ಟಿ20 ಟೂರ್ನಿಯಲ್ಲಿ ಕೂಡ ಮತ್ತೊಂದು ತಂಡದ ಮಾಲಿಕತ್ವವನ್ನು ಪಡೆದುಕೋಂಡಿದೆ. ಎಂಐ ಕೇಪ್ ಟೌನ್ (MI Cape Town) ತಂಡವನ್ನು ಅದು ಹರಾಜಿನಲ್ಲಿ ಖರೀದಿ ಮಾಡಿದೆ.
ಜಾಗತಿಕವಾಗಿ ತಂಡಗಳನ್ನು ಹೊಂದಿರುವ ಮುಂಬೈ ಇಂಡಿಯನ್ಸ್ ಎಲ್ಲಾ ತಂಡಗಳನ್ನು ನಿರ್ವಹಣೆ ಮಾಡಲು ಮಹೇಲಾ ಜಯವರ್ಧನೆ ಮತ್ತು ಜಹೀರ್ ಖಾನ್ ಮೇಲೆ ಹೆಚ್ಚಿನ ಜವಾಬ್ದಾರಿ ನೀಡಿದೆ.
ಕೆಲವರು ಒಮ್ಮೆ ಮಾತ್ರ ನಿವೃತ್ತಿಯಾಗುತ್ತಾರೆ: ಕೊಹ್ಲಿಗೆ ನಿವೃತ್ತಿ ಸಲಹೆ ನೀಡಿದ ಅಫ್ರಿದಿಗೆ ಅಮಿತ್ ಮಿಶ್ರಾ ಪಂಚ್!

ಜಾಗತಿಕ ಕಾರ್ಯಾಚರಣೆ ಉಸ್ತುವಾರಿ
ಜಯವರ್ಧನೆ ಮತ್ತು ಜಹೀರ್ ಪಾತ್ರಗಳಿಗೆ ಸಂಬಂಧಿಸಿದಂತೆ, ಇದು ಅವರಿಗೆ ಹೊಸದು. ಜಯವರ್ಧನೆ ಜಾಗತಿಕ ಪ್ರದರ್ಶನದ ಮುಖ್ಯಸ್ಥರಾಗಿದ್ದು, ಫ್ರಾಂಚೈಸಿಯಲ್ಲಿ ವಿವಿಧ ತಂಡಗಳನ್ನು ನೋಡಿಕೊಳ್ಳುತ್ತಾನೆ. ಅವರು ಸಂಪೂರ್ಣ ಕೋಚಿಂಗ್, ಸಿಬ್ಬಂದಿ, ಆಟಗಾರರ ನೇಮಕಾತಿ, ಇತರ ಕಾರ್ಯತಂತ್ರದ ಯೋಜನೆಗಳನ್ನು ನೋಡಿಕೊಳ್ಳಲು ಸಿದ್ಧರಾಗಿದ್ದಾರೆ.
ಎಲ್ಲಕ್ಕಿಂತ ಮುಖ್ಯವಾಗಿ, ವಿವಿಧ ಲೀಗ್‌ಗಳಲ್ಲಿ ಎಂಐನ ಎಲ್ಲಾ ತಂಡಗಳು ಯಶಸ್ವಿಯಾಗುವಂತೆ ನೋಡಿಕೊಳ್ಳುವುದು, ಯಶಸ್ಸಿಗೆ ಬೇಕಾದಂತೆ ಕಾರ್ಯತಂತ್ರ ರೂಪಿಸುವ ಜವಾಬ್ದಾರಿ ಜಯವರ್ಧನೆ ಮೇಲಿದೆ.

ಹೊಸ ಜವಾಬ್ದಾರಿಗಾಗಿ ಧನ್ಯವಾದ
ತಮಗೆ ನೀಡಿರುವ ಹೊಸ ಜವಾಬ್ದಾರಿ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಯವರ್ಧನೆ ಸಂತಸ ವ್ಯಕ್ತಪಡಿಸಿದ್ದಾರೆ. ಹೊಸ ಜವಾಬ್ದಾರಿನಿಭಾತಿಸಲು ಎದುರು ನೋಡುತ್ತಿರುವುದಾಗಿ ತಿಳಿಸಿದ್ದಾರೆ.
"ಮುಂಬೈ ಇಂಡಿಯನ್ಸ್‌ನ ಜಾಗತಿಕ ಕ್ರಿಕೆಟ್ ಕಾರ್ಯಾಚರಣೆಗಳನ್ನು ಮುನ್ನಡೆಸುವುದು ನನಗೆ ಸಂಪೂರ್ಣ ಗೌರವವಾಗಿದೆ. ನೀತಾ ಅಂಬಾನಿ ಮತ್ತು ಆಕಾಶ್ ನಾಯಕತ್ವ ಮತ್ತು ಮಾರ್ಗದರ್ಶನವು ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯನ್ನು ಅತ್ಯಂತ ಮೌಲ್ಯಯುತವಾದ ಜಾಗತಿಕ ಕ್ರಿಕೆಟ್ ಫ್ರಾಂಚೈಸಿಯನ್ನಾಗಿ ಮಾಡಿದೆ ಮತ್ತು ಎಂಐ ಜಾಗತಿಕವಾಗಿ ಬೆಳೆಯುವುದನ್ನು ನೋಡಲು ನನಗೆ ತುಂಬಾ ಸಂತೋಷವಾಗಿದೆ. ಪ್ರಬಲವಾದ ಸುಸಂಘಟಿತ ಜಾಗತಿಕ ಬ್ರ್ಯಾಂಡ್ ಕ್ರಿಕೆಟ್ ಅನ್ನು ನಿರ್ಮಿಸಲು ನಾನು ಈ ಹೊಸ ಜವಾಬ್ದಾರಿಯನ್ನು ಎದುರು ನೋಡುತ್ತಿದ್ದೇನೆ ಎಂದು ಹೇಳಿದ್ದಾರೆ.

ಸಂತಸ ವ್ಯಕ್ತಪಡಿಸಿದ ಜಹೀರ್ ಖಾನ್
ಜಹೀರ್ ಖಾನ್ ಕೂಡ ಜಾಗತಿಕವಾಗಿ ತಂಡಗಳ ನಿರ್ವಹಣೆಯನ್ನು ನೋಡಿಕೊಳ್ಳಲಿದ್ದಾರೆ. ಆಟಗಾರರ ಪ್ರದರ್ಶನವನ್ನು ಗಮನಿಸಿವುದು, ವಿವಿಧ ರಾಷ್ಟ್ರಗಳ ಹೊಸ ಪ್ರತಿಭೆಗಳನ್ನು ಗುರುತಿಸುವ ಕೆಲಸವನ್ನು ಜಹೀರ್ ಖಾನ್ ಮುಂಬೈ ಇಂಡಿಯನ್ಸ್‌ಗಾಗಿ ಮಾಡಲಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, "ಹೊಸ ಪಾತ್ರವನ್ನು ತೆಗೆದುಕೊಳ್ಳಲು ನಾನು ವಿನಮ್ರನಾಗಿದ್ದೇನೆ ಮತ್ತು ನನ್ನ ಮೇಲಿನ ನಂಬಿಕೆ ಇಟ್ಟು ಜವಾಬ್ದಾರಿ ನೀಡಿದ್ದಕ್ಕಾಗಿ ನೀತಾ ಅಂಬಾನಿ ಮತ್ತು ಆಕಾಶ್ ಅವರಿಗೆ ಧನ್ಯವಾದ ಹೇಳುತ್ತೇನೆ. ಎಂಐ ತಂಡದ ಆಟಗಾರನಾಗಿ ಮತ್ತು ಕೋಚಿಂಗ್ ತಂಡದ ಸದಸ್ಯನಾಗಿ ನಾನು ನೆಲೆ ಕಂಡುಕೊಂಡಿದ್ದೇನೆ. ಈಗ ನಾವು ಹೊಸ ಪ್ರಯಾಣವನ್ನು ಪ್ರಾರಂಭಿಸುತ್ತಿರುವಾಗ, ಕುಟುಂಬಕ್ಕೆ ಸೇರಬಹುದಾದ ಹೊಸ ಸಾಮರ್ಥ್ಯವನ್ನು ಬಹಿರಂಗಪಡಿಸಲು ಜಾಗತಿಕ ನೆಟ್‌ವರ್ಕ್‌ನಲ್ಲಿರುವ ಎಲ್ಲಾ ಪಾಲುದಾರರೊಂದಿಗೆ ನಿಕಟವಾಗಿ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇನೆ" ಎಂದು ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications