ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೆಲವರು ಒಮ್ಮೆ ಮಾತ್ರ ನಿವೃತ್ತಿಯಾಗುತ್ತಾರೆ: ಕೊಹ್ಲಿಗೆ ನಿವೃತ್ತಿ ಸಲಹೆ ನೀಡಿದ ಅಫ್ರಿದಿಗೆ ಅಮಿತ್ ಮಿಶ್ರಾ ಪಂಚ್!

ವಿರಾಟ್ ಕೊಹ್ಲಿ ನಿವೃತ್ತಿ ಕುರಿತು ಯೋಚಿಸಬೇಕು ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟರ್ ಶಾಹಿದ್ ಅಫ್ರಿದಿ ನೀಡಿದ್ದ ಹೇಳಿಕೆಗೆ ಬಾರಿ ವಿರೋಧ ವ್ಯಕ್ತವಾಗುತ್ತಿದೆ. ಭಾರತದ ಲೆಗ್‌ ಸ್ಪಿನ್ನರ್ ಅಮಿತ್ ಮಿಶ್ರಾ ಶಾಹಿದ್ ಅಫ್ರಿದಿ ಹೇಳಿಕೆಗೆ ತಿರುಗೇಟು ನೀಡಿದ್ದು, ವೈರಲ್ ಆಗಿದೆ.

ಉತ್ತಮವಾಗಿ ಆಡುತ್ತಿರುವಾಗಲೇ ನಿವೃತ್ತಿ ಬಗ್ಗೆ ಯೋಚಿಸಬೇಕು ಎಂದು ಶಾಹಿದ್ ಅಫ್ರಿದಿ ಹೇಳಿದ್ದರು. ವಿರಾಟ್ ಕೊಹ್ಲಿ ಈಗ ಫಾರ್ಮ್‌ ಕಂಡುಕೊಂಡಿದ್ದು, ಉತ್ತಮವಾಗಿ ಆಡುತ್ತಿದ್ದಾರೆ. ಅವರು ಈಗ ಕ್ರಿಕೆಟ್‌ನಿಂದ ನಿವೃತ್ತಿ ಬಗ್ಗೆ ಯೋಚಿಸುವ ಬಗ್ಗೆ ಸಮಯ ಬಂದಿದೆ ಎಂದು ಹೇಳಿದ್ದರು.

Asia Cup: ಇದೇ ಭಾರತ ತಂಡದ ದೊಡ್ಡ ಸಮಸ್ಯೆ; ಏಷ್ಯಾ ಕಪ್ ಸೋಲಿನ ಹಿನ್ನೆಲೆ ವಿಮರ್ಶಿಸಿದ ಬಿಸಿಸಿಐAsia Cup: ಇದೇ ಭಾರತ ತಂಡದ ದೊಡ್ಡ ಸಮಸ್ಯೆ; ಏಷ್ಯಾ ಕಪ್ ಸೋಲಿನ ಹಿನ್ನೆಲೆ ವಿಮರ್ಶಿಸಿದ ಬಿಸಿಸಿಐ

ಶಾಹಿದ್ ಅಫ್ರಿದಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಅಮಿತ್ ಮಿಶ್ರಾ, ಶಾಹಿದ್ ಅಫ್ರಿದಿಯ ಹಲವು ಬಾರಿ ನಿವೃತ್ತಿ ಘೋಷಿಸಿ, ಮತ್ತೆ ವಾಪಸ್ ಬಂದು ತಂಡ ಸೇರಿಕೊಂಡಿದ್ದನ್ನು ನೆನಪಿಸಿದರು. ಕೊಹ್ಲಿ ಕುರಿತು ಮತ್ತೆ ಈ ರೀತಿ ಹೇಳಿಕೆಗಳನ್ನು ನೀಡದಂತೆ ಸೂಚಿಸಿದರು.

Amit Mishra trolls Shahid Afridi For His Comments Over Retirement Of Virat Kohli

ಶಾಹಿದ್ ಅಫ್ರಿದಿ ಟ್ವೀಟ್‌ಗೆ ಉತ್ತರ ನೀಡಿರುವ ಅಮಿತ್ ಮಿಶ್ರಾ, "ಪ್ರಿಯ ಅಫ್ರಿದಿ, ಕೆಲವರು ಒಮ್ಮೆ ಮಾತ್ರ ನಿವೃತ್ತರಾಗುತ್ತಾರೆ, ಆದ್ದರಿಂದ ದಯವಿಟ್ಟು ವಿರಾಟ್ ಕೊಹ್ಲಿಯ ಬಗ್ಗೆ ಈ ರೀತಿ ಕಮೆಂಟ್ ಮಾಡುವುದನ್ನು ತಪ್ಪಿಸಿ" ಎಂದು ಹೇಳಿದ್ದಾರೆ.

ಕೊಹ್ಲಿ ನಿವೃತ್ತಿ ಬಗ್ಗೆ ಯೋಚಿಸಲಿ ಎಂದಿದ್ದ ಅಫ್ರಿದಿ

"ವಿರಾಟ್ ಕೊಹ್ಲಿ ವೃತ್ತಿ ಜೀವನದ ಆರಂಭದಲ್ಲಿ ತುಂಬಾ ಕಷ್ಟಪಟ್ಟಿದ್ದಾರೆ, ತಮ್ಮ ಸಾಮರ್ಥ್ಯದ ಮೂಲಕ ಅವರು ತುಂಬಾ ಹೆಸರು ಗಳಿಸಿದ್ದಾರೆ. ವಿರಾಟ್ ಕೊಹ್ಲಿ ಚಾಂಪಿಯನ್ ಆಟಗಾರ, ಈಗ ಆತ ನಿವೃತ್ತಿಯತ್ತ ಸಾಗುವ ಹಂತ ಬಂದಿದೆ ಎಂದು ನಾನು ನಂಬುತ್ತೇನೆ. ನೀವು ಇನ್ನೂ ಎತ್ತರಕ್ಕೆ ಏರುವುದು ಗುರಿಯಾಗಬೇಕು" ಎಂದು ಪಾಕಿಸ್ತಾನದ ಟಿವಿಗೆ ನೀಡಿದ ಸಂದರ್ಶನದಲ್ಲಿ ಶಾಹಿದ್ ಅಫ್ರಿದಿ ಹೇಳಿದ್ದರು.

ಭಾರತದ ಈ ಆಟಗಾರ ಎಲ್ಲಾ ಕ್ರಮಾಂಕಕ್ಕೂ ಸಲ್ಲುವ ಕ್ರಿಕೆಟಿಗ ಎಂದ ಜಾಂಟಿ ರೋಡ್ಸ್ಭಾರತದ ಈ ಆಟಗಾರ ಎಲ್ಲಾ ಕ್ರಮಾಂಕಕ್ಕೂ ಸಲ್ಲುವ ಕ್ರಿಕೆಟಿಗ ಎಂದ ಜಾಂಟಿ ರೋಡ್ಸ್

"ಇದು ನಿಮ್ಮನ್ನು ತಂಡದಿಂದ ಕೈಬಿಡುವ ಹಂತವನ್ನು ತಲುಪಬಾರದು ಮತ್ತು ನೀವು ನಿಮ್ಮ ಆಟದಲ್ಲಿ ಉತ್ತುಂಗದಲ್ಲಿರುವಾಗ ನಿವೃತ್ತಿ ಘೋಷಿಸಬೇಕು. ಇದು ವಿರಳವಾಗಿ ಸಂಭವಿಸುತ್ತದೆ. ಕೆಲವೇ ಕೆಲವು ಆಟಗಾರರು, ವಿಶೇಷವಾಗಿ ಏಷ್ಯಾದ ಕ್ರಿಕೆಟಿಗರು ಆ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ," ಎಂದು ಹೇಳಿದ್ದರು.

Amit Mishra trolls Shahid Afridi For His Comments Over Retirement Of Virat Kohli

ಐದು ಬಾರಿ ನಿವೃತ್ತಿ ಘೋಷಿಸಿದ್ದ ಅಫ್ರಿದಿ

ಅಫ್ರಿದಿ ತಮ್ಮ 22 ವರ್ಷಗಳ ಸುದೀರ್ಘ ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ ಐದು ಬಾರಿ ಅಧಿಕೃತವಾಗಿ ನಿವೃತ್ತಿ ಹೊಂದಿದ್ದರು. 2006ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದ ಅಫ್ರಿದಿ ಎರಡೇ ವಾರದಲ್ಲಿ ಯು-ಟರ್ನ್ ಮಾಡಿದ್ದರು. ಅಂತಿಮವಾಗಿ 2010ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಘೋಷಿಸಿದರು.

ನಂತರ 2011ರಲ್ಲಿ ವೈಟ್‌-ಬಾಲ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದರು. ಆದರೆ ಪುನಃ 5 ತಿಂಗಳ ನಂತರ ವಾಪಸ್ ಬಂದರು, ಆದರೆ ಅಂತಿಮವಾಗಿ 2015ರಲ್ಲಿ ಏಕದಿನ ಕ್ರಿಕೆಟ್‌ ಮತ್ತು 2017ರಲ್ಲಿ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದರು.

Story first published: Wednesday, September 14, 2022, 13:40 [IST]
Other articles published on Sep 14, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X