ಬಾಲ್-ಬ್ಯಾಟ್ ಕೆಳಗಿಟ್ಟ ವಿಶ್ವಕಪ್ ವಿಜೇತ ತಂಡದ ಮುನಾಫ್ ಪಟೇಲ್

ನವದೆಹಲಿ, ನವೆಂಬರ್ 10: ಭಾರತದ ವೇಗಿ, 2011ರ ವಿಶ್ವಕಪ್ ವಿಜೇತ ತಂಡದಲ್ಲಿದ್ದ ಆಟಗಾರ ಮುನಾಫ್ ಪಟೇಲ್ ಅವರು ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಶನಿವಾರ (ನವೆಂಬರ್ 10) ಮುನಾಫ್, ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರ ಉಳಿಯುವ ನಿರ್ಧಾರ ಪ್ರಕಟಿಸಿದರು.
2011ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಕೊನೆಯ ಬಾರಿಗೆ ಟೆಸ್ಟ್ ಪಂದ್ಯವನ್ನಾಡಿದ್ದ ಮುನಾಫ್, 'ಕ್ರಿಕೆಟ್‌ನಲ್ಲಿ ಮುಂದುವರೆಯಲು ನನಗಿನ್ನು ಯಾವುದೇ ಪ್ರೇರಣೆ ಉಳಿದಿಲ್ಲ' ಎಂದಿದ್ದಾರೆ. ಫಿಟ್‌ನೆಸ್ ಕಾಯ್ದುಕೊಳ್ಳಲೂ ವಿಫಲರಾಗಿರುವ ಮುನಾಫ್, ಫಿಟ್‌ಗೆ ಮರಳುವ ಉತ್ಸಾಹವೂ ಇಲ್ಲ ಎಂಬರ್ಥದಲ್ಲಿ ಮಾತನಾಡಿದ್ದಾರೆ.
'ವಯಸ್ಸು ಹೆಚ್ಚಾದಂತೆ ಫಿಟ್‌ನೆಸ್‌ಕೂಡ ಒಂದೇರೀತಿ ಉಳಿದಿರುವುದಿಲ್ಲ. ಹೀಗಾಗಿ ನಿವೃತ್ತಿ ಘೋಷಿಸುತ್ತಿರುವುದರಲ್ಲಿ ಬೇರಾವುದೇ ವಿಶೇಷ ಕಾರಣಗಳಿಲ್ಲ. ಇನ್ನೊಂದೆಡೆ ಯುವ ಆಟಗಾರರೂ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಮುಖ್ಯ ವಿಚಾರವೆಂದರೆ ನನಗಿನ್ನು ಕ್ರಿಕೆಟ್ ನಲ್ಲಿ ಮುಂದುವರೆಯಲು ಯಾವುದೇ ಪ್ರೇರಣೆ ಉಳಿದಿಲ್ಲ' ಎಂದು 35ರ ಹರೆಯದ ಪಟೇಲ್ ಅಭಿಪ್ರಾಯಿಸಿದ್ದಾರೆ.
13 ಟೆಸ್ಟ್, 70 ಏಕದಿನ, 3 ಟಿ20 ಪಂದ್ಯಗಳನ್ನಾಡಿರುವ ಮುನಾಫ್ ಏಕದಿನದಲ್ಲಿ 2603 ರನ್, 86 ವಿಕೆಟ್ ಪಡೆದ ಸಾಧನೆ ಹೊಂದಿದ್ದಾರೆ. ಟೆಸ್ಟ್ ಕ್ರಿಕೆಟ್ ನಲ್ಲಿ 1349 ರನ್ ಮತ್ತು 35 ವಿಕೆಟ್ ಪಡೆದಿದ್ದಾರೆ. 2011ರಲ್ಲಿ ಮುಂಬೈಯಲ್ಲಿ ನಡೆದಿದ್ದ ವಿಶ್ವ ಕಪ್ ಫೈನಲ್ ನಲ್ಲಿ ಶ್ರೀಲಂಕಾ ವಿರುದ್ಧ ಭಾರತ 6 ವಿಕೆಟ್ ಜಯಗಳಿಸಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications