ಶೇನ್ ವಾರ್ನ್‌ಗಿಂತ, ಮುತ್ತಯ್ಯ ಮುರಳೀಧರನ್ ಗ್ರೇಟ್ ಎಂದ ಸುನಿಲ್ ಗವಾಸ್ಕರ್

ಇತ್ತೀಚಿಗಷ್ಟೇ ಆಸ್ಟ್ರೇಲಿಯಾ ಕ್ರಿಕೆಟ್ ದಿಗ್ಗಜ ಶೇನ್ ವಾರ್ನ್ ದಿಢೀರನೆ ಸಾವನ್ನಪ್ಪುವ ಮೂಲಕ ಇಡೀ ಕ್ರಿಕೆಟ್ ಲೋಕವೇ ಶಾಕ್‌ಗೆ ಒಳಗಾಯಿತು. ವಿಸ್ಡಂ ಕ್ರಿಕೆಟರ್ ಆಫ್ ದಿ ಸೆಂಚುರಿ ಎಂದೇ ಕರೆಯಲ್ಪಟ್ಟಿರುವ ಆರ್ನ್ ಸಾರ್ವಕಾಲಿಕ ಶ್ರೇಷ್ಠ ಲೆಗ್ ಸ್ಪಿನ್ನರ್, ಬ್ರಾಡ್‌ಮನ್ ಆಫ್ ಲೆಗ್ ಸ್ಪಿನ್ ಎಂದೆಲ್ಲಾ ಕರೆಯಲಾಗುತ್ತದೆ.
ಆದ್ರೆ ಶೇನ್ ವಾರ್ನ್‌ಗಿಂತ ಶ್ರೀಲಂಕಾದ ಲೆಜೆಂಡರಿ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಮತ್ತು ಭಾರತ ರಾಷ್ಟ್ರೀಯ ಕ್ರಿಕೆಟ್ ತಂಡದ ಸ್ಪಿನ್ನರ್‌ಗಳು ಖಂಡಿತವಾಗಿಯೂ ಉತ್ತಮರು ಎಂದು ಭಾರತದ ಮಾಜಿ ಬ್ಯಾಟ್ಸ್‌ಮನ್ ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.
ಥಾಯ್ಲೆಂಡ್‌ನ ಕೊಹ್ ಸಮುಯಿಯಲ್ಲಿ ಶುಕ್ರವಾರ ಶಂಕಿತ ಹೃದಯಾಘಾತದಿಂದ ವಾರ್ನ್ ನಿಧನರಾದರು ಮತ್ತು ಥಾಯ್ ಪೊಲೀಸರ ಪ್ರಕಾರ, ವಾರ್ನ್‌ನ ನಾಲ್ಕು ಸ್ನೇಹಿತರು ಆಸ್ಟ್ರೇಲಿಯಾದ ಲೆಜೆಂಡ್ ಜೀವವನ್ನು ಉಳಿಸಲು 20 ನಿಮಿಷಗಳ ಕಾಲ ಹೋರಾಡಿದರು. ಆದ್ರೆ ಕೊನೆಯಲ್ಲಿ ವಿಫಲಗೊಂಡರು.

ವಾರ್ನ್ 708, ಮುರಳೀಧರನ್ 800 ವಿಕೆಟ್
ಸ್ಪಿನ್ ಮಾಂತ್ರಿಕ ಶೇನ್ ವಾರ್ನ್ 1992ರಲ್ಲಿ ಆಸ್ಟ್ರೇಲಿಯಾ ಪರ ಚೊಚ್ಚಲ ಪಂದ್ಯವನ್ನಾಡಿದ್ರು. 145 ಟೆಸ್ಟ್ ಪಂದ್ಯಗಳಲ್ಲಿ ವಾರ್ನ್ 708 ವಿಕೆಟ್ ಕಬಳಿಸಿದ್ರು. ಇನ್ನು ಶ್ರೀಲಂಕಾದ ಗ್ರೇಟ್ ಸ್ಪಿನ್ ಬೌಲರ್ ಮುತ್ತಯ್ಯ ಮುರಳೀಧರನ್ ಕೂಡ 1992ರಲ್ಲಿ ಲಂಕಾ ಪರ ಪಾದಾರ್ಪಣೆ ಮಾಡಿದ್ದು, 133 ಟೆಸ್ಟ ಪಂದ್ಯಗಳಲ್ಲಿ 800 ವಿಕೆಟ್ ಪಡೆದಿದ್ದಾರೆ. ಈ ಇಬ್ಬರು ಸ್ಪಿನ್ನರ್ ಗಳು ಮಾತ್ರ ಕ್ರಿಕೆಟ್ ಇತಿಹಾಸದಲ್ಲಿ 700ಕ್ಕೂ ಹೆಚ್ಚು ಟೆಸ್ಟ್ ವಿಕೆಟ್ ಪಡೆದ ಇಬ್ಬರು ಸ್ಪಿನ್ನರ್ ಆಗಿದ್ದಾರೆ.

ಭಾರತದ ವಿರುದ್ಧ ವಾರ್ನ್ ಸಾಮಾನ್ಯ ಬೌಲಿಂಗ್ ಮಾಡಿದ್ದಾರೆ: ಸುನಿಲ್ ಗವಾಸ್ಕರ್
ಆಸ್ಟ್ರೇಲಿಯಾದ ಸ್ಪಿನ್ನರ್ ಶೇನ್ ವಾರ್ನ್ ಅವರು ಸಾರ್ವಕಾಲಿಕ ಶ್ರೇಷ್ಠ ಸ್ಪಿನ್ನರ್ ಆಗಿದ್ದಾರೆಯೇ ಎಂದು ಬ್ಯಾಟಿಂಗ್ ಲೆಜೆಂಡ್ ಗವಾಸ್ಕರ್ ಅವರನ್ನು ಕೇಳಿದಾಗ, ಅವರು ಮುರಳೀಧರನ್ ಮತ್ತು ಭಾರತೀಯ ಸ್ಪಿನ್ನರ್‌ಗಳನ್ನು ವಾರ್ನ್‌ಗಿಂತ ಹೆಚ್ಚು ಗ್ರೇಟ್ ಎಂದು ಹೇಳುವ ಮೂಲಕ ಉತ್ತರಿಸಿದರು. ಭಾರತದಲ್ಲಿ ಆಸ್ಟ್ರೇಲಿಯಾದ ಲೆಗ್ ಸ್ಪಿನ್ನರ್‌ನ ಪ್ರದರ್ಶನವು "ಸಾಧಾರಣವಾಗಿದೆ" ಎಂದು ಅವರು ಹೇಳಿದರು.
ಅಕ್ಷರ್ ಪಟೇಲ್ ಕಂಬ್ಯಾಕ್, ಟೀಂ ಇಂಡಿಯಾದಿಂದ ಕುಲ್‌ದೀಪ್ ಯಾದವ್‌ಗೆ ಗೇಟ್‌ಪಾಸ್?

ಮುರಳೀಧರನ್ ಮತ್ತು ಭಾರತದ ಸ್ಪಿನ್ನರ್‌ಗಳಿಂದಲೇ ಉತ್ತಮ ಬೌಲಿಂಗ್
"ಇಲ್ಲ, ಎಂದು ನಾನು ಹೇಳುವುದಿಲ್ಲ. ನನಗೆ, ಶೇನ್ ವಾರ್ನ್‌ಗಿಂತ ಭಾರತದ ಸ್ಪಿನ್ನರ್‌ಗಳು ಮತ್ತು ಮುತ್ತಯ್ಯ ಮುರಳೀಧರನ್ ಖಂಡಿತವಾಗಿಯೂ ಉತ್ತಮವಾಗಿದ್ದಾರೆ ಎಂದು ಅನ್ನಿಸುತ್ತದೆ ಎಂದು ಗವಾಸ್ಕರ್ 'ಇಂಡಿಯಾ ಟುಡೇ' ನಲ್ಲಿ ಹೇಳಿದರು.
"ಏಕೆಂದರೆ ಭಾರತದ ವಿರುದ್ಧ ಶೇನ್ ವಾರ್ನ್ ಅವರ ದಾಖಲೆಯನ್ನು ನೋಡಿ. ಇದು ಬಹಳ ಸಾಮಾನ್ಯವಾಗಿತ್ತು. ಭಾರತದಲ್ಲಿ, ಅವರು ನಾಗ್ಪುರದಲ್ಲಿ ಒಮ್ಮೆ ಮಾತ್ರ ಐದು ವಿಕೆಟ್ ಪಡೆದರು, ಮತ್ತು ಜಹೀರ್ ಖಾನ್ ಹುಚ್ಚುಚ್ಚಾಗಿ ಬ್ಯಾಟ್ ಬೀಸಿದ್ದರಿಂದ ಅವರು ಐದು ವಿಕೆಟ್ ಪಡೆದರು'' ಎಂದು ಗವಾಸ್ಕರ್ ಹೇಳಿದ್ದಾರೆ.
ಶೇನ್ ವಾರ್ನ್ ಸಾವಿನ ಕುರಿತು ಸತ್ಯ ಬಿಚ್ಚಿಟ್ಟ ಮ್ಯಾನೇಜರ್: ಲೆಜೆಂಡ್ ಸಾವಿಗೆ ಕಾರಣ ಏನು?

ವಾರ್ನ್‌ಗಿಂತ , ಮುರಳೀಧರನ್ ಹೆಚ್ಚು ಯಶಸ್ಸು ಕಂಡಿದ್ದಾರೆ: ಶೇನ್ ವಾರ್ನ್
"ಸ್ಪಿನ್‌ನಲ್ಲಿ ಉತ್ತಮ ಆಟಗಾರರಾಗಿದ್ದ ಭಾರತೀಯ ಆಟಗಾರರ ವಿರುದ್ಧ ಅವರು ಹೆಚ್ಚಿನ ಯಶಸ್ಸನ್ನು ಗಳಿಸದ ಕಾರಣ, ನಾನು ಅವರನ್ನು ಶ್ರೇಷ್ಠ ಎಂದು ಕರೆಯುತ್ತೇನೆ ಎಂದು ನಾನು ಭಾವಿಸುವುದಿಲ್ಲ" ಎಂದು ಗವಾಸ್ಕರ್ ಹೇಳಿದರು.
"ಮುತ್ತಯ್ಯ ಮುರಳೀಧರನ್ ಅವರು ಭಾರತದ ವಿರುದ್ಧ ಹೆಚ್ಚಿನ ಯಶಸ್ಸನ್ನು ಗಳಿಸಿದ್ದು, ನನ್ನ ಪ್ರಕಾರ ನಾನು ಅವರನ್ನು ವಾರ್ನ್‌ಗಿಂತ ಶ್ರೇಷ್ಠ ಎಂದು ಪರಿಗಣಿಸುತ್ತೇನೆ" ಎಂದು ಅವರು ಹೇಳಿದರು.

ಶೇನ್ ವಾರ್ನ್ ಮ್ಯಾಜಿಕ್ ಡಿಲಿವರಿ
ಮಾಜಿ ಭಾರತೀಯ ನಾಯಕ ಸುನಿಲ್ ಗವಾಸ್ಕರ್, ವಾರ್ನ್ ಅವರನ್ನು ಶ್ಲಾಘಿಸಿದ್ದಾರೆ. ಮಣಿಕಟ್ಟಿನ ಸ್ಪಿನ್‌ನ ಕಷ್ಟಕರವಾದ ಸ್ಕಿಲ್ ಅನ್ನು ಕರಗತ ಮಾಡಿಕೊಂಡಿದ್ದ ವಾರ್ನ್, "ಮ್ಯಾಜಿಕ್ ಎಸೆತಗಳನ್ನು" ಬೌಲ್ ಮಾಡಿದ್ದಾರೆ ಎಂದು ಹೇಳಿದರು.
ಅದೇ ಫಿಂಗರ್ ಸ್ಪಿನ್ನರ್‌ಗಳಿಗೆ ಚೆಂಡಿನ ಮೇಲೆ ಸುಲಭವಾಗಿ ನಿಯಂತ್ರಣವಿರುತ್ತದೆ. ಆದ್ರೆ ವ್ರಿಸ್ಟ್ ಸ್ಪಿನ್ನರ್ಸ್ ಹಾಗೂ ಲೆಗ್‌ಸ್ಪಿನ್ನರ್‌ಗಳು ಈ ಕೌಶಲ್ಯವನ್ನ ಕರಗತ ಮಾಡಿಕೊಳ್ಳಬೇಕಾಗುತ್ತದೆ ಎಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications