ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಕ್ಷರ್ ಪಟೇಲ್ ಕಂಬ್ಯಾಕ್, ಟೀಂ ಇಂಡಿಯಾದಿಂದ ಕುಲ್‌ದೀಪ್ ಯಾದವ್‌ಗೆ ಗೇಟ್‌ಪಾಸ್‌?

Kuldeep yadav and axar patel

ಟೀಂ ಇಂಡಿಯಾದಲ್ಲಿ ಸಾಕಷ್ಟು ಮಹತ್ತರ ಬದಲಾವಣೆ ನಡೆಯುತ್ತಲೇ ಇದೆ. ಇದಕ್ಕೆ ಸಾಕ್ಷಿಯೆಂಬಂತೆ ತಂಡದಲ್ಲಿ ಪದೇ ಪದೇ ಆಟಗಾರರ ಬದಲಾವಣೆ ನಡೆಯುತ್ತಿದೆ. ರೋಹಿತ್ ಶರ್ಮಾ ಮೂರು ಫಾರ್ಮೆಟ್‌ನ ನಾಯಕನಾದ ಬಳಿಕ ಮೊಟ್ಟ ಮೊದಲ ಟೆಸ್ಟ್ ಸರಣಿಯಲ್ಲಿ ಶ್ರೀಲಂಕಾ ವಿರುದ್ಧ ಭರ್ಜರಿ ಗೆಲುವನ್ನ ದಾಖಲಿಸಿದ್ದಾರೆ.

ಮೊಹಾಲಿಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯವನ್ನ ಕೇವಲ ಮೂರೇ ದಿನಕ್ಕೆ ಮುಕ್ತಾಯಗೊಳಿಸಿದ ಭಾರತ, ಶ್ರೀಲಂಕಾ ವಿರುದ್ಧ ಇನ್ನಿಂಗ್ಸ್‌ ಸೇರಿದಂತೆ 222 ರನ್‌ಗಳ ಭರ್ಜರಿ ಗೆಲುವು ದಾಖಲಿಸಿತು.

ಅಕ್ಷರ್ ಪಟೇಲ್ ಫಿಟ್ ಆಗಿ ಕಂಬ್ಯಾಕ್‌

ಅಕ್ಷರ್ ಪಟೇಲ್ ಫಿಟ್ ಆಗಿ ಕಂಬ್ಯಾಕ್‌

ಸಾಕಷ್ಟು ಸಮಯದ ಕಾಲ ಗಾಯಗೊಂಡು ಟೀಂ ಇಂಡಿಯಾದಿಂದ ಹೊರಬಿದ್ದಿದ್ದ ಆಲ್‌ರೌಂಡರ್‌ ಅಕ್ಷರ್ ಪಟೇಲ್ ಟೀಂ ಇಂಡಿಯಾಕ್ಕೆ ವಾಪಸ್ಸಾಗಿದ್ದಾರೆ. ಎನ್‌ಎಸ್‌ಇ ಪುನರ್‌ವಸತಿ ಶಿಬಿರದಲ್ಲಿ ಫಿಟ್ನೆಸ್ ಕಂಡುಕೊಂಡಿರುವ ಗುಜರಾತ್ ಮೂಲದ ಆಲ್‌ರೌಂಡರ್ ಭಾರತ ತಂಡಕ್ಕೆ ವಾಪಸ್ಸಾಗಿರುವುದು ತಂಡದ ಬಲವನ್ನ ಹೆಚ್ಚಿಸಿದೆ.

ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಈಗಾಗಲೇ ಮೊದಲ ಪಂದ್ಯ ಮುಗಿದಿದ್ದು, ಬೆಂಗಳೂರಿನಲ್ಲಿ ನಡೆಯಲಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಅಕ್ಷರ್ ಪಟೇಲ್ ಪ್ಲೇಯಿಂಗ್ 11ನಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಹೆಚ್ಚಿದೆ.

ಕುಲ್‌ದೀಪ್ ಯಾದವ್‌ಗೆ ಗೇಟ್‌ಪಾಸ್‌

ಕುಲ್‌ದೀಪ್ ಯಾದವ್‌ಗೆ ಗೇಟ್‌ಪಾಸ್‌

ಕ್ರಿಕ್‌ಬಝ್‌ ಪ್ರಕಾರ ಚೈನಾಮೆನ್ ಬೌಲರ್ ಕುಲ್‌ದೀಪ್ ಯಾದವ್‌ ಟೀಂ ಇಂಡಿಯಾದಿಂದ ಕೈ ಬಿಡಲಾಗಿದೆ. ಜಡೇಜಾ ಮತ್ತು ಅಕ್ಷರ್ ಪಟೇಲ್ ಗಾಯಗೊಂಡಿದ್ದರ ಪರಿಣಾಮ ಲಿಮಿಟೆಡ್ ಓವರ್ ಕ್ರಿಕೆಟ್‌ನಲ್ಲಿ ಸ್ಥಾನ ಪಡೆದಿದ್ದ ಕುಲ್‌ದೀಪ್ ಯಾದವ್‌ಗೆ ಟೆಸ್ಟ್ ಸ್ಕ್ವಾಡ್‌ನಲ್ಲೂ ಸ್ಥಾನವನ್ನ ಪಡೆದಿದ್ದರು.

ಆದ್ರೆ ವರದಿಯ ಪ್ರಕಾರ ಅಕ್ಷರ್ ಸಂಪೂರ್ಣ ಫಿಟ್ ಆಗಿದ್ದು, ತಂಡಕ್ಕೆ ಮರಳಲು ಸಜ್ಜಾಗಿದ್ದಾರೆ. ಎರಡನೇ ಟೆಸ್ಟ್‌ನಲ್ಲಿ ಟೀಮ ಇಂಡಿಯಾ ಸೇರಿಕೊಳ್ಳಲಿದ್ದು, ಪರಿಣಾಮ ಕುಲ್‌ದೀಪ್ ಯಾದವ್‌ ತಂಡದಿಂದ ಹೊರಬೀಳಲಿದ್ದಾರೆ.

ತನ್ನ ಟೆಸ್ಟ್ ದಾಖಲೆ ಮುರಿದ ಆರ್ ಅಶ್ವಿನ್ ಬಗ್ಗೆ ದೊಡ್ಡ ಭವಿಷ್ಯ ನುಡಿದ ಕಪಿಲ್ ದೇವ್

ಅಕ್ಷರ್ ಪಟೇಲ್ ವಾಪಸ್ಸಾತಿ ಕುರಿತು ಮೊದಲೇ ತಿಳಿಸಿದ್ದ ಬಿಸಿಸಿಐ

ಅಕ್ಷರ್ ಪಟೇಲ್ ವಾಪಸ್ಸಾತಿ ಕುರಿತು ಮೊದಲೇ ತಿಳಿಸಿದ್ದ ಬಿಸಿಸಿಐ

ಅಕ್ಷರ್ ಪಟೇಲ್ ಫಿಟ್ನೆಸ್ ಕುರಿತು ಈ ಮೊದಲೇ ತಿಳಿಸಿದ್ದ ಬಿಸಿಸಿಐ, ಎರಡನೇ ಟೆಸ್ಟ್ ವೇಳೆಗೆ ಅಕ್ಷರ್ ಪಟೇಲ್ ವಾಪಸ್ಸಾಗಬಹುದೆಂದು ತಿಳಿಸಿತ್ತು. ಫೆಬ್ರವರಿ 22ರಂದು ಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಭಾರತದ ಸ್ಕ್ವಾಡ್ ಘೋಷಣೆ ವೇಳೆಯಲ್ಲಿ ಬಿಸಿಸಿಐ ತಿಳಿಸಿತ್ತು.

''ಅಕ್ಷರ್ ಪಟೇಲ್ ಪ್ರಸ್ತುತ ಪುನರ್ವಸತಿ ಶಿಬಿರದಲ್ಲಿ ಸಿದ್ಧತೆ ನಡೆಸಿದ್ದು, ಸದ್ಯಕ್ಕೆ ಮೊದಲ ಟೆಸ್ಟ್‌ಗೆ ಆಯ್ಕೆಗಿಲ್ಲ. ಎರಡನೇ ಟೆಸ್ಟ್‌ಗೆ ಅವರ ಆಯ್ಕೆಯನ್ನು ಪರಿಗಣಿಸಲಾಗುವುದು'' ಎಂದು ಬಿಸಿಸಿಐ ಹೇಳಿತ್ತು.

ನ್ಯೂಜಿಲೆಂಡ್ ವಿರುದ್ಧ ನಡೆದ ಮುಂಬೈ ಟೆಸ್ಟ್‌ನಲ್ಲಿ ಕೊನೆಯ ಬಾರಿಗೆ ಅಕ್ಷರ್ ಪಟೇಲ್ ಆಡಿದ್ದರು.

ಶೇನ್ ವಾರ್ನ್ ಸಾವಿನ ಕುರಿತು ಸತ್ಯ ಬಿಚ್ಚಿಟ್ಟ ಮ್ಯಾನೇಜರ್: ಲೆಜೆಂಡ್ ಸಾವಿಗೆ ಕಾರಣ ಏನು?

ಕುಲ್‌ದೀಪ್ ಜೊತೆಗೆ ಯಾರಿಗೆಲ್ಲಾ ಗೇಟ್‌ಪಾಸ್?

ಕುಲ್‌ದೀಪ್ ಜೊತೆಗೆ ಯಾರಿಗೆಲ್ಲಾ ಗೇಟ್‌ಪಾಸ್?

ಕುಲದೀಪ್ ಜೊತೆಗೆ ಎರಡನೇ ಬ್ಯಾಟಿಂಗ್ ಕೋಚ್ ಅಪೂರ್ವ ದೇಸಾಯಿ, ತರಬೇತುದಾರ ಆನಂದ್ ಮತ್ತು ಫಿಸಿಯೋ ಪಾರ್ಥೋ ಅವರನ್ನು ಬಿಡುಗಡೆ ಮಾಡಲಾಗಿದೆ. ಆದಾಗ್ಯೂ, ಸಾಯಿರಾಜ್ ಅವರನ್ನು ಉಳಿಸಿಕೊಳ್ಳಲಾಗಿದ್ದು, ರಡನೇ ಮತ್ತು ಕೊನೆಯ ಟೆಸ್ಟ್‌ಗೆ ತಂಡದೊಂದಿಗೆ ಉಳಿಯಲಿದ್ದಾರೆ.

ರೋಹಿತ್ ಶರ್ಮಾ ಪೊಲಿಟಿಕ್ಸ್ | Oneindia Kannada
ಟೀಂ ಇಂಡಿಯಾ ಟೆಸ್ಟ್ ಸ್ಕ್ವಾಡ್

ಟೀಂ ಇಂಡಿಯಾ ಟೆಸ್ಟ್ ಸ್ಕ್ವಾಡ್

ರೋಹಿತ್ ಶರ್ಮಾ (ನಾಯಕ), ಪ್ರಿಯಾಂಕ್ ಪಾಂಚಾಲ್, ಮಯಾಂಕ್ ಅಗರ್ವಾಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಹನುಮ ವಿಹಾರಿ, ಶುಭಮನ್ ಗಿಲ್, ರಿಷಭ್ ಪಂತ್ (ವಿಕೆಟ್-ಕೀಪರ್), ಕೆ.ಎಸ್ ಭರತ್, ರವೀಂದ್ರ ಜಡೇಜಾ, ಜಯಂತ್ ಯಾದವ್, ಆರ್. ಅಶ್ವಿನ್, ಅಕ್ಷರ್ ಪಟೇಲ್, ಸೌರಭ್ ಕುಮಾರ್, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ (ಉಪನಾಯಕ)

Story first published: Tuesday, March 8, 2022, 9:58 [IST]
Other articles published on Mar 8, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X