ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನಸೀಮ್ ಶಾಗೆ ಪಾಕಿಸ್ತಾನ್ ಸೂಪರ್ ಲೀಗ್‌ನಿಂದ ಗೇಟ್‌ ಪಾಸ್!

Naseem Shah expelled from PSL for violating COVID-19 protocols

ಕರಾಚಿ: ಅಬುಧಾಬಿಯಲ್ಲಿ ಮುಂದಿನ ತಿಂಗಳು ನಡೆಯಲಿರುವ ಪಾಕಿಸ್ತಾನ್ ಸೂಪರ್ ಲೀಗ್‌ (ಪಿಎಸ್‌ಎಲ್‌)ನಿಂದ ಪಾಕ್ ವೇಗಿ ನಸೀಮ್ ಶಾ ಹೊರ ಬಿದ್ದಿದ್ದಾರೆ. ಕೋವಿಡ್-19 ನಿಯಮನ್ನು ಉಲ್ಲಂಘಿಸಿದ್ದರಿಂದ ನಸೀಮ್ ಟೂರ್ನಿಯಿಂದ ಹೊರ ದಬ್ಬಲ್ಪಟ್ಟಿದ್ದಾರೆ.

ನ್ಯೂಜಿಲೆಂಡ್‌ನ ಕ್ರಿಕೆಟ್ ಪೇಜ್‌ನಲ್ಲಿ ಭಾರತಕ್ಕೆ ಅವಮಾನ, ಪೋಸ್ಟ್‌ಗೆ ಕಿವೀಸ್ ಕ್ರಿಕೆಟಿಗರಿಂದ ಲೈಕ್ಸ್!ನ್ಯೂಜಿಲೆಂಡ್‌ನ ಕ್ರಿಕೆಟ್ ಪೇಜ್‌ನಲ್ಲಿ ಭಾರತಕ್ಕೆ ಅವಮಾನ, ಪೋಸ್ಟ್‌ಗೆ ಕಿವೀಸ್ ಕ್ರಿಕೆಟಿಗರಿಂದ ಲೈಕ್ಸ್!

ಸೋಮವಾರ (ಮೇ 24) ಲಾಹೋರ್‌ಗೆ ಬಂದಿಳಿದಿದ್ದ 18ರ ಹರೆಯದ ನಸೀಮ್ ಶಾ ಕೋವಿಡ್-19 ನೆಗೆಟಿವ್ ರಿಪೋರ್ಟ್ ಸಲ್ಲಿಸಿದ್ದರು. ಇದು ಅವಧಿ ಮೀರಿದ ನೆಗೆಟಿವ್ ರಿಪೋರ್ಟ್ ಆಗಿತ್ತು. ಹೀಗಾಗಿ ನಸೀಮ್ ಅವರನ್ನು ಟೂರ್ನಿಯಿಂದ ಹೊರಗಿಡಲಾಗಿದೆ ಎಂದು ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಹೇಳಿದೆ.

ಪಿಎಸ್‌ಎಲ್‌ಗಾಗಿ ಬುಧವಾರ ಅಬುಧಾಬಿಗೆ ಪ್ರಯಾಣಿಸಲಿರುವ ಆಟಗಾರರು ಟೀಮ್ ಹೋಟೆಲ್‌ಗೆ ತಲುಪಿದ ಬಳಿಕ ಕೋವಿಡ್ ನೆಗೆಟಿವ್ ರಿಪೋರ್ಟ್ ಸಲ್ಲಿಸಬೇಕು. ಆದರೆ ರಿಪೋರ್ಟ್ 48 ಗಂಟೆಗಿಂತ ಮುಂಚಿನ ರಿಪೋರ್ಟ್ ಆಗಿರಬಾರದು. ಅಂದರೆ ಹೋಟೆಲ್‌ಗೆ ಬಂದ ಬಳಿಕ ಪರೀಕ್ಷಿಸಿ 48 ಗಂಟೆಯೊಳಗೆ ಬಂದ ರಿಪೋರ್ಟ್ ಆಗಿರಬೇಕು.

ಪುರುಷ-ಮಹಿಳೆಯರ ಸೇರಿಸಿದ ಭಾರತದ ಅತ್ಯುತ್ತಮ ಟಿ20 XI ಹೇಗಿದೆ ನೋಡಿ!ಪುರುಷ-ಮಹಿಳೆಯರ ಸೇರಿಸಿದ ಭಾರತದ ಅತ್ಯುತ್ತಮ ಟಿ20 XI ಹೇಗಿದೆ ನೋಡಿ!

ಶಾ ಅವರನ್ನೂ ಕೂಡಲೇ ಪ್ರತ್ಯೇಕವಾಗಿ ಕ್ವಾರಂಟೈನ್ ನಲ್ಲಿ ಇಡಲಾಗಿದೆ. ಹೋಟೆಲ್‌ನಿಂದ ಬಿಡುಗಡೆ ಮಾಡುವ ಮುನ್ನ ಪ್ರತ್ಯೇಕ ಮಹಡಿಯಲ್ಲಿ ನಸೀಮ್‌ಗೆ ಐಸೊಲೇಶನ್‌ಗೆ ಸೂಚಿಸಲಾಗಿದೆ ಎಂದು ಪಿಸಿಬಿ ಹೇಳಿದೆ.

Story first published: Tuesday, May 25, 2021, 0:24 [IST]
Other articles published on May 25, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X