ಶಾರ್ಜಾ: ಮಂಗಳವಾರದಿಂದ ಯುಎಇನಲ್ಲಿ ಏಷ್ಯಾ ಕಪ್ ಟಿ20 ಟೂರ್ನಿ ಆರಂಭವಾಗಲಿದೆ. ಈ ಟೂರ್ನಿಗೂ ಮೊದಲು ಪಾಕಿಸ್ತಾನ ತಂಡದ ಸ್ಟಾರ್ ಬೌಲರ್ ಅಬ್ಬರ ನಡೆಸಿದ್ದಾನೆ. ತ್ರಿಕೋನ ಸರಣಿಯ ಫೈನಲ್ ಪಂದ್ಯದಲ್ಲಿ ಪಾಕ್ ಅಮೋಘ ಪ್ರದರ್ಶನ ನೀಡಿ ಜಯ ಸಾಧಿಸಿದೆ. ಅಫ್ಘಾನಿಸ್ತಾನ ವಿರುದ್ಧ 75 ರನ್‌ಗಳಿಂದ ಜಯ ಸಾಧಿಸಿದ ಪಾಕ್ ಆರ್ಭಟಿಸಿದೆ. ಈ ಪಂದ್ಯದಲ್ಲಿ ಪಾಕ್ ತಂಡದ ಮೊಹಮ್ಮದ್ ನವಾಜ್ ಬಿಗುವಿನ ದಾಳಿ ನಡೆಸಿ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ. ಈ ಮೂಲಕ ಏಷ್ಯಾ ಕಪ್‌ನಲ್ಲಿ ಭಾಗವಹಿಸುತ್ತಿರುವ ಎದುರಾಳಿ ತಂಡಗಳಿಗೆ ನಡುಕ ಆರಂಭವಾಗಿದೆ.
ಮೊದಲು ಬ್ಯಾಟ್ ಮಾಡಿದ ಪಾಕ್ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 141 ರನ್ ಕಲೆ ಹಾಕಿತು. ಸ್ಪರ್ಧಾತ್ಮಕ ಗುರಿಯನ್ನು ಹಿಂಬಾಲಿಸಿದ ಅಫ್ಘಾನಿಸ್ತಾನ 15.5 ಓವರ್‌ಗಳಲ್ಲಿ 66 ರನ್‌ಗಳಿಗೆ ಆಲೌಟ್ ಆಯಿತು. ಪಾಕ್ ತಂಡದ ಪರ ಫಖರ್ ಜಮಾನ್ 27, ನಾಯಕ ಸ್ಲಾಮನ್ ಅಘಾ 24, ಮೊಹಮ್ಮದ್ ನವಾಜ್ 25, ಫಹೀಮ್ ಅಶ್ರಫ್ 15, ಹಸನ್ ನವಾಜ್ 15 ರನ್ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸುವಲ್ಲಿ ಸಫಲರಾದರು. ಆಫ್ಘಾನ್ ತಂಡದ ಸ್ಪಿನ್ ಬೌಲರ್ 3 ವಿಕೆಟ್, ನೂರ್ ಅಹ್ಮದ್, ಫಜಲ್ ಫಾರೂಕಿ ತಲಾ 2 ವಿಕೆಟ್ ಪಡೆದರು.

ಅಫ್ಘಾನಿಸ್ತಾನ ತಂಡದ ಬ್ಯಾಟರ್‌ಗಳು ಮಹತ್ವದ ಪಂದ್ಯದಲ್ಲಿ ಜವಾಬ್ದಾರಿ ಮೆರೆತರು. ಪಾಕ್ ತಂಡದ ಸ್ಟಾರ್ ಬೌಲರ್‌ಗಳ ಕರಾರುವಾಕ್ ದಾಳಿಗೆ ಅಫ್ಘಾನ್ ಬ್ಯಾಟರ್‌ಗಳು ಥಂಡಾ ಹೊಡೆದರು. ಅಫ್ಘಾನ್ ಪರ ಸಿದ್ದಿಕುಲ್ಲಾ ಅಟಲ್ (13), ರಾಶೀದ್ ಖಾನ್ (17) ಮಾತ್ರ ಡಬಲ್ ಡಿಜಿಟ್ ಮುಟ್ಟಿದರು. ಉಳಿದ ಬ್ಯಾಟರ್‌ಗಳು ಸಿಂಗಲ್ ಡಿಜಿಟ್‌ನಲ್ಲಿ ಆಟ ಮುಗಿಸಿದರು.
ಪಾಕ್ ತಂಡದ ವೇಗದ ಬೌಲರ್ ಮೊಹಮ್ಮದ್ ನವಾಜ್ ಪವರ್ ಪ್ಲೇನಲ್ಲಿ ಕೊನೆಯ ಓವರ್ ಬೌಲ್ ಮಾಡಲು ಬಂದರು. ಈ ಓವರ್‌ನ ಐದನೇ ಎಸೆತದಲ್ಲಿ ದರ್ವಿಶ್ ರಸೂಲಿ ಅವರಿಗೆ ಖೆಡ್ಡಾ ತೋಡಿದ ನವಾಜ್, ನಂತರದ ಎಸೆತದಲ್ಲಿ ಅಜ್ಮತುಲ್ಲಾ ಓಮರ್ಜಾಯಿ ಅವರಿಗೆ ಪೆವಿಲಿಯನ್ ಕಳುಹಿಸುವಲ್ಲಿ ಸಫಲರಾದರು. ಇದಾದ ಬಳಿಕ ಏಳನೇ ಓವರ್‌ನ ಮೊದಲ ಎಸೆತದಲ್ಲಿ ನವಾಜ್ ಆರ್ಭಟಿಸಿದರು. ಇದೇ ಓವರ್‌ನ ನಾಲ್ಕನೇ ಎಸೆತದಲ್ಲಿ ಕರಿಮ್ ಜನತ್ ಅವರಿಗೆ ಖೆಡ್ಡಾ ತೋಡಿದ ನವಾಜ್ ಅಫ್ಘಾನ್ ಬ್ಯಾಟರ್‌ಗಳಿಗೆ ಬಹುವಾಗಿ ಕಾಡಿದರು. ಇವರು 9 ರನ್ ನೀಡಿ 5 ವಿಕೆಟ್ ಕಬಳಿಸಿದರು.
ಫೈನಲ್‌ನಲ್ಲಿ ನವಾಜ್ ಅವರ ಆಲ್‌ರೌಂಡ್ ಪ್ರದರ್ಶನವು ಪಾಕಿಸ್ತಾನಕ್ಕೆ ವರವಾಯಿತು. ಈ ಮೂಲಕ ಪಾಕ್ ಏಷ್ಯಾ ಕಪ್ ಟಿ20 ಕ್ರಿಕೆಟ್‌ಗೆ ಸಂಪೂರ್ಣ ಸಿದ್ಧವಾಗಿದೆ.
ಭಾರತದ ಆತಿಥ್ಯದಲ್ಲಿ ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿ ಆಯೋಜಿಸಲಾಗುತ್ತಿದ್ದು, ಇದರಲ್ಲಿ ಪಾಕ್ ಸಹ ಎ ಗುಂಪಿನಲ್ಲಿ ಸ್ಥಾನ ಪಡೆದಿದೆ. ಈ ಟೂರ್ನಿಯಲ್ಲಿ ಪಾಕ್ ಸೆ.12 ರಂದು ತನ್ನ ಅಭಿಯಾನ ಆರಂಭಿಸಲಿದೆ.