For Quick Alerts
ALLOW NOTIFICATIONS  
For Daily Alerts
 

ಲೆಫ್ಟಿನೆಂಟ್ ಕರ್ನಲ್ ಆಗಿ ನೀರಜ್‌ ಚೋಪ್ರಾ ನೇಮಕ

ದೇಶದ ಕೀರ್ತಿಯನ್ನು ವಿಶ್ವ ಮಟ್ಟದಲ್ಲಿ ಪಸರಿಸಿರುವ ನೀರಜ್‌ ಚೋಪ್ರಾ ಅವರ ಮುಡಿಗೆ ಮತ್ತೊಂದು ಗರಿ ಸಂದಿದೆ. ಇವರಿಗೆ ಪ್ರಾದೇಶಿಕ ಸೇನೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಆಗಿ ನೇಮಿಸಲಾಗಿದೆ. ಬುಧವಾರ ನಡೆದ ಸಮಾರಂಭದಲ್ಲಿ ರಕ್ಷಣಾ ಸಚಿನ್ ರಾಜನಾಥ್ ಸಿಂಗ್, ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಈ ಬಿರುದನ್ನು ಪ್ರದಾನ ಮಾಡಿದರು. ಇದೇ ವೇಳೆ ನೀರಜ್ ಚೋಪ್ರಾ ಅವರ ತಂದೆ, ತಾಯಿ ಹಾಗೂ ಆಪ್ತ ಕುಟುಂಬಸ್ಥರು ಹಾಜರಿದ್ದರು.

ನೀರಜ್‌ ಚೋಪ್ರಾ ಅವರು ಆಗಸ್ಟ್ 26, 2016 ರಂದು ನೈಬ್ ಸುಬೇದಾರ್ ಆಗಿ ಸೇನೆಗೆ ಸೇರ್ಪಡೆ ಆದರು. ಇನ್ನು ಇವರಿಗೆ 2021ರಲ್ಲಿ ಸುಬೇದಾರ್ ಆಗಿ ಬಡ್ತಿ ನೀಡಲಾಯಿತು. ಇನ್ನ 2021ರಲ್ಲಿ ಟೋಕಿಯೊದಲ್ಲಿ ನಡೆದ ಒಲಿಂಪಿಕ್ಸ್ ಕ್ರೀಡಾ ಕೂಟದಲ್ಲಿ ಚಿನ್ನದ ಸಾಧನೆ ಮಾಡಿದ ಬಳಿಕ, ಇವರಿಗೆ ಸೇನೆಯಲ್ಲಿ ವಿಶಿಷ್ಠ ಸೇವಾ ಪದಕವನ್ನು ನೀಡಿ ಗೌರವಿಸಲಾಯಿತು. ಈ ಅಮೋಘ ಸಾಧನೆಯ ಪರಿಣಾಮ ಅವರನ್ನು 2022ರಲ್ಲಿ ಸುಬೇದಾರ್ ಮೇಜರ್ ಆಗಿ ಪ್ರಮೋಷನ್‌ ನೀಡಲಾಯಿತು.

Neeraj Chopra conferred Honorary Lieutenant Colonel rank in Territorial Army

ಸತತ ಎರಡು ಒಲಿಂಪಿಕ್ಸ್‌ನಲ್ಲಿ ದೇಶಕ್ಕೆ ಕೀರ್ತಿ ತಂದ ನೀರಜ್ ಚೋಪ್ರಾ ಅವರಿಗೆ ಸೇನೆ ಗೌರವಿಸುತ್ತಲೇ ಬಂದಿದೆ. ಕ್ರೀಡಾ ಕ್ಷೇತ್ರದಲ್ಲಿ ಇವರು ನೀಡಿದ ಸಾಧನೆಗೆ ಪ್ರಾದೇಶಿಕ ಸೇನೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಗೌರವ ಹುದ್ದೆಯನ್ನು ನೀರಜ್ ಚೋಪ್ರಾ ಅವರಿಗೆ ನೀಡಲಾಯಿತು.

ನೀರಜ್‌ ಚೋಪ್ರಾ ಸಾಧನೆ

ಫೀಲ್ಡ್‌ ಆಂಡ್ ಟ್ರ್ಯಾಕ್ ವಿಭಾಗದಲ್ಲಿ ಅಮೋಘ ಸಾಧನೆ ಮಾಡಿದ ನೀರಜ್‌ ಜಾವೆಲಿನ್ ಎಸೆತದಲ್ಲಿ ಟೋಕಿಯೊದಲ್ಲಿ ಬಂಗಾರ, ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕದ ಸಾಧನೆ ಮಾಡಿದ್ದರು. ಇವರ ಕ್ರೀಡಾ ಸಾಧನೆಗೆ ಇವರಿಗೆ 2021 ರಲ್ಲಿ ಖೇಲ್ ರತ್ನ, 2022 ರಲ್ಲಿ ಪದ್ಮಶ್ರೀ ನೀಡಿ ಗೌರವಿಸಲಾಯಿತು. ನೀರಜ್ ಚೋಪ್ರಾ ಇಲ್ಲಿಯವರೆಗೆ 90.23 ಮೀಟರ್ ಜಾವೆಲಿನ್ ಎಸೆದಿದ್ದೇ ದೊಡ್ಡ ಸಾಧನೆ. ಇವರು ಇತ್ತೀಚಿಗೆ ನಡೆದ ಡೈಮಂಡ್‌ ಲೀಗ್‌ನ ಫೈನಲ್‌ಗೆ ಅರ್ಹತೆ ಪಡೆಯಲು ವಿಫಲರಾಗಿದ್ದರು. ಆದರೆ ಈ ಹಿಂದೆ ಇವರು ಈ ಟೂರ್ನಿಯ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದರು.

Story first published: Wednesday, October 22, 2025, 22:53 [IST]
Other articles published on Oct 22, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+