For Quick Alerts
ALLOW NOTIFICATIONS  
For Daily Alerts
 

ಕೊಹ್ಲಿ, ರೋಹಿತ್ ಅಲ್ಲ: ವಿಶ್ವಕಪ್ ಗೆಲ್ಲಲು ಭಾರತಕ್ಕೆ ಈತ ಅನಿವಾರ್ಯ ಎಂದು ಮತ್ತೊಮ್ಮೆ ಸಾಬೀತು!!

ವಿಶ್ವಕಪ್‌ನ ಸನಿಹದಲ್ಲಿ ಟೀಮ್ ಇಂಡಿಯಾ ಏಷ್ಯಾಕಪ್ ಟೂರ್ನಿಯಲ್ಲಿ ಭರ್ಜರಿ ಸಿದ್ಧತೆಗಳನ್ನು ನಡೆಸುತ್ತಿದೆ. ಟೂರ್ನಿ ಫೈನಲ್‌ಗೆ ಪ್ರವೇಶಿಸಿರುವ ಭಾರತ ತಂಡ ಚಾಂಪಿಯನ್ ಪಟ್ಟಕ್ಕೇರುವ ನೆಚ್ಚಿನ ತಂಡ ಎನಿಸಿಕೊಂಡಿದೆ. ಆದರೆ ಸೂಪರ್ 4 ಹಂತದಲ್ಲಿ ಯಾವುದೇ ಮಹತ್ವವಿಲ್ಲದ ಬಾಂಗ್ಲಾದೇಶ ವಿರುದ್ಧದ ಪಂದ್ಯವನ್ನು ಸೋಲು ಮೂಲಕ ಭಾರತ ತಂಡಕ್ಕೆ ಫೈನಲ್ ಪಂದ್ಯಕ್ಕೂ ಮುನ್ನ ದೊಡ್ಡ ಎಚ್ಚರಿಕೆಯೊಂದು ದೊರೆತಿದೆ.

ಸೂಪರ್ 4 ಹಂತದಲ್ಲಿ ಪಾಕಿಸ್ತಾನ, ಶ್ರೀಲಂಕಾ ದಂತ ಬಲಿಷ್ಠ ಆಟಗಾರರ ಪಡೆಯನ್ನು ಹೊಂದಿದ ತಂಡಗಳನ್ನು ಮಣಿಸಿದ ಭಾರತ ಬಾಂಗ್ಲಾದೇಶದ ವಿರುದ್ಧ ಅನುಭವಿಸಿದ ಸೋಲು ಅನಿರೀಕ್ಷಿತ. ಈ ಪಂದ್ಯದಲ್ಲಿ ಭಾರತ ತಂಡದ 5 ಬದಲಾವಣೆಗಳನ್ನು ಮಾಡಿಕೊಳ್ಳಲಾಗಿತ್ತಾದರೂ ಸಮರ್ಥ ಆಟಗಾರರ ದಂಡೇ ಹೊಂದಿತ್ತು ಎನ್ನುವುದು ಗಮನಾರ್ಹ. ಬ್ಯಾಟಿಂಗ್‌ಗೆ ಸವಾಲಾಗಿದ್ದ ಪಿಚ್‌ನಲ್ಲಿ ತಂಡದ ಕೆಲ ಪ್ರಮುಖ ಆಟಗಾರರಿಂದ ಉತ್ತಮ ಪ್ರದರ್ಶನ ಬಾರದೇ ಇರುವುದು ತಂಡದ ಸೋಲಿನಲ್ಲಿ ಮೇಲ್ನೋಟಕ್ಕೆ ಕಾರಣ ಎನಿಸಿದರೂ ಬೌಲಿಂಗ್ ವಿಭಾಗ ಓರ್ವ ಆಟಗಾರನ ಅನುಪಸ್ಥಿತಿಯಿಂದ ಕಳೆಗುಂದಿದಂತೆ ಕಂಡುಬಂದಿದ್ದು ನಿಜ.

Neither Virat, Nor Rohit! This star player proves his importance in Team India to Win ICC World Cup 2023

ಇದೇ ಕಾರಣಕ್ಕೆ ಟೀಮ್ ಇಂಡಿಯಾಗೆ ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಓರ್ವ ಕ್ರಿಕೆಟಿಗ ನಿರ್ಣಾಯಕ ಪಾತ್ರವಹಿಸಲಿದ್ದಾರೆ. ಹಾಗಾದರೆ ಆ ಆಟಗಾರ ಯಾರು? ಮುಂದೆ ಓದಿ..

ಕೊಹ್ಲಿ, ರೋಹಿತ್‌ಗಿಂತಲೂ ಮುಖ್ಯ ಈತ

ಟೀಮ್ ಇಂಡಿಯಾದ ಬ್ಯಾಟಿಂಗ್ ವಿಭಾಗದ ದಿಗ್ಗಜ ಆಟಗಾರರಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಪ್ರದರ್ಶನ ವಿಶ್ವಕಪ್‌ನಲ್ಲಿ ಮಹತ್ವ ಪಡೆಯಲಿದೆ ಎನ್ನುವುದು ನಿಸ್ಸಂಶಯ. ಒಂದು ಹಂತದಲ್ಲಿ ಈ ಇಬ್ಬರು ಆಟಗಾರರು ವೈಫಲ್ಯ ಅನುಭವಿಸಿದರೂ ಅದನ್ನು ಹೊಂದಾಣಿಕೆ ಮಾಡಬಲ್ಲ ಪ್ರತಿಭಾವಂತ ಆಟಗಾರರು ಕೂಡ ತಂಡದಲ್ಲಿದ್ದಾರೆ. ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ತಂಡದಿಮದ ಹೊರಗಿದ್ದು ರೋಹಿತ್ ಶರ್ಮಾ ಅಲ್ಪ ಮೊತ್ತಕ್ಕೆ ಔಟಾದ ಹೊರತಾಗಿಯೂ ಶುಬ್ಮನ್ ಗಿಲ್ ನೀಡಿರುವ ಪ್ರದರ್ಶನ ಇದಕ್ಕೆ ತಾಜಾ ಉದಾಹರಣೆ.

ಈ ಅನುಭವಿ ವೇಗಿ ಭಾರತಕ್ಕೆ ಅನಿವಾರ್ಯ

ಆದರೆ ಮುಂದಿನ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಚಾಂಪೊಯನ್ ಎನಿಸಿಕೊಳ್ಳಬೇಕಾದರೆ ತಂಡದಲ್ಲಿ ಪ್ರಮುಖ ಪಾತ್ರವಹಿಸಲಿರುವುದು ಜಸ್ಪ್ರೀತ್ ಬೂಮ್ರಾ. ಇದಕ್ಕೆ ಬಾಂಗ್ಲಾದೇಶ ವಿರುದ್ಧದ ಪಂದ್ಯ ಮತ್ತೊಮ್ಮೆ ಸಾಕ್ಷಿಯಾಗಿದೆ. ಬೌಲಿಂಗ್‌ಗೆ ನೆರವು ನೀಡುವ ಪಿಚ್‌ನಲ್ಲಿ ಆರಂಭದಲ್ಲಿ ಭಾರತದ ಬೌಲಿಂಗ್ ವಿಭಾಗ ಮೇಲುಗೈ ಸಾಧಿಸಿತಾದರೂ ಬಳಿಕ ಅದರ ಲಾಭವನ್ನು ಪಡೆಯಲು ಸಾಧ್ಯವಾಗಲಿಲ್ಲ. ಮಧ್ಯಮ ಓವರ್‌ಗಳಲ್ಲಿ ಭಾರತ ತೀವ್ರ ಹಿನ್ನಡೆಯನ್ನು ಅನುಭವಿಸಿತು. ಹೀಗಾಗಿ ಕೊಲಂಬೋ ಪಿಚ್‌ನಲ್ಲಿ ಭಾರತಕ್ಕೆ ಸವಾಲಿನ ಗುರಿ ನೀಡುವಲ್ಲಿ ಬಾಂಗ್ಲಾದೇಶ ಯಶಸ್ವಿಯಾಗಿತ್ತು. ಇಂಥಾ ಸಂದರ್ಭದಲ್ಲಿ ಜೊತೆಯಾಟವನ್ನು ಮುರಿಯಲು ಭಾರತಕ್ಕೆ ಬೂಮ್ರಾ ಅಗತ್ಯ ಇದ್ದೇ ಇದೆ.

ಬೂಮ್ರಾ ಯಾಕೆ ವಿಶೇಷ?

ಇನ್ನು ಜಸ್ಪ್ರೀತ್ ಬೂಮ್ರಾ ಅವರನ್ನು ಟೀಮ್ ಇಂಡಿಯಾ ಇಷ್ಟು ಅವಲಂಬಿಸಲು ಕಾರಣವೂ ಇದೆ. ಬೂಮ್ರಾ ಯಾವುದೇ ವಿಧದ ಪಿಚ್‌ನಲ್ಲಿಯೂ ಎದುರಾಳಿಯನ್ನು ಸಂಕಷ್ಟಕ್ಕೆ ಸಿಲುಕಿಸಬಲ್ಲ ಸಾಮರ್ಥ್ಯ ಹೊಂದಿರುವ ಬೌಲರ್. ಸಾಮಾನ್ಯವಾಗಿ ತಮಗೆ ನೆರವು ನೀಡುವಂತಾ ಪಿಚ್‌ಗಳಲ್ಲಿ ಬೌಲರ್‌ಗಳು ಮೇಲುಗೈ ತಂದುಕೊಡುವುದು ಸಹಜ. ಉದಾಹರಣೆಗೆ ಸ್ಪಿನ್ನರ್‌ಗಳಿಗೆ ಪಿಚ್ ನೆರವು ನೀಡುತ್ತಿದ್ದರೆ ಅಲ್ಲಿ ಸ್ಪಿನ್ನರ್‌ಗಳು ಬ್ಯಾಟರ್‌ಗಳಿಗೆ ಕಾಟ ನೀಡುತ್ತಾರೆ.

ಬ್ಯಾಟಿಂಗ್ ಸ್ನೇಹಿ ಪಿಚ್ ಆಗಿದ್ದರೆ ಅಲ್ಲಿ ಬೌಲರ್‌ಗಳು ಯದ್ವಾತದ್ವ ರನ್ ಬಿಟ್ಟುಕೊಡುತ್ತಾರೆ. ಆದೆ ಬೂಮ್ರಾ ವಿಶೇಷತೆಯೆಂದರೆ ಪಿಚ್‌ ಯಾವುದೇ ರೀತಿಯಾಗಿದ್ದರೂ ಅಲ್ಲಿ ಎದುರಾಳಿಯನ್ನು ಕಟ್ಟಿ ಹಾಕುವ ಸಾಮರ್ಥ್ಯವಿರುವ ವೇಗಿ. ಹಾಗಾಗಿ ಟೀಮ್ ಇಂಡಿಯಾ ಈ ಬಾರಿಯ ವಿಶ್ವಕಪ್‌ನಲ್ಲಿ ಗೆಲುವು ಸಾಧಿಸಬೇಕಿದ್ದರೆ ಬೂಮ್ರಾ ಪಾತ್ರ ಅತ್ಯಂತ ನಿರ್ಣಾಯಕ.

Story first published: Saturday, September 16, 2023, 12:22 [IST]
Other articles published on Sep 16, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+