ಟೀಂ ಇಂಡಿಯಾ ಆಟಗಾರರಿಗೆ ಹಲಾಲ್ ಮಾಂಸ ಸೇವನೆ ಕಡ್ಡಾಯಗೊಳಿಸಿದ ಬಿಸಿಸಿಐ! ನೆಟ್ಟಿಗರಿಂದ ತೀವ್ರ ಟೀಕೆ

ಟೀಂ ಇಂಡಿಯಾ ಆಟಗಾರರಿಗೆ ಫಿಟ್ನೆಸ್ ಸಾಭೀತು ಪಡಿಸಲು ಹಲವಾರು ಪರೀಕ್ಷೆಗಳಿಗೆ ಒಡ್ಡಲಾಗುವುದು. ಆಟಗಾರ ಇಂಜ್ಯುರಿ ಆಗಿ ತಂಡದಿಂದ ಹೊರಬಿದ್ರೆ ಅಥವಾ ಫಾರ್ಮ್ ವೈಫಲ್ಯ ಅನುಭವಿಸಿ ತಂಡದಿಂದ ಆಚೆ ಇದ್ದಲ್ಲಿ, ವಾಪಸ್ ತಂಡ ಸೇರಿಕೊಳ್ಳಲು NCA ನಲ್ಲಿ ಫಿಟ್ನೆಸ್ ಪರೀಕ್ಷೆಗೆ ಒಳಪಡಬೇಕಾಗುತ್ತದೆ.
ಟೀಂ ಇಂಡಿಯಾ ರೂಪಿಸಿಕೊಂಡಿರುವ ತನ್ನದೇ ಆದ ಸ್ಟ್ಯಾಂಡರ್ಡ್ ಪರೀಕ್ಷೆಯನ್ನು ಆಟಗಾರ ಪಾಸ್ ಆಗಿದ್ದೇ ಆದಲ್ಲಿ ಮಾತ್ರ ಆತನು ತಂಡವನ್ನು ಸೇರಿಕೊಳ್ಳಲು ಸಾಧ್ಯ. ಹೀಗೆ ಫಿಟ್ನೆಸ್ ಪರೀಕ್ಷೆ ಜೊತೆಗೆ ಪ್ರತಿಯೊಬ್ಬ ಆಟಗಾರನು ಬಿಸಿಸಿಐ ರೂಪಿಸಿರುವ ಡಯಟ್ ಪ್ಲ್ಯಾನ್ ಪಾಲಿಸಬೇಕು. ಸದ್ಯ ಈ ಡಯಟ್ ಪ್ಲಾನ್‌ಗೆ ಸೇರಿರುವ ಆಹಾರದ ವಿಚಾರವು ಇದೀಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಹೌದು, ಸದ್ಯ ಹರಿದಾಡುತ್ತಿರುವ ವರದಿ ಪ್ರಕಾರ ಟೀಂ ಇಂಡಿಯಾ ಡಯಟ್ ಪಟ್ಟಿಯಲ್ಲಿ ಹಲಾಲ್ ಮಾಂಸವನ್ನು ಮಾತ್ರ ಸೇವಿಸಬಹುದು ಎಂದು ಬಿಸಿಸಿಐ ಕಡ್ಡಾಯಗೊಳಿಸಿದೆ. ಇದರ ಹೊರತು ಯಾವುದೇ ಮಾಂಸವನ್ನ ಸೇವನೆ ಮಾಡಬಾರದು ಎಂದು ಪಟ್ಟಿ ಸಿದ್ಧಪಡಿಸಿದೆ.
ಅಂದ್ರೆ ಟೀಂ ಇಂಡಿಯಾ ಆಟಗಾರರ ಹಲಾಲ್ ಸಂಸ್ಕರಿತ ಮಾಂಸವನ್ನು ಹೊರತುಪಡಿಸಿ ಹಂದಿ ಮಾಂಸ, ದನದ ಮಾಂಸವನ್ನು ಸೇವನೆ ಮಾಡುವಂತಿಲ್ಲ.

ಹಿಂದೂ, ಸಿಖ್ ಧರ್ಮದಲ್ಲಿ ಹಲಾಲ್ ಮಾಂಸ ನಿಷೇಧವಿದೆ!
ಹಿಂದೂ ಧರ್ಮದಲ್ಲಿ ಮತ್ತು ಸಿಖ್ ಸಂಸ್ಕೃತಿಯಲ್ಲಿ ಹಲಾಲ್ ಮಾಂಸದ ಸೇವನೆ ನಿಷೇಧವಿದೆ. ಆದರೆ ಮುಂಸ್ಲಿಂ ಸಂಸ್ಕೃತಿಯಲ್ಲಿ ಹಲಾಲ್ ಮಾಂಸವನ್ನ ಹೊರತುಪಡಿಸಿ ಬೇರೆ ಮಾಂಸ ಸೇವನೆಯಿಂದ ದೂರವಿರಿ ಎಂಬ ಮಾತಿದೆ.

ಹಲಾಲ್ ಮಾಂಸ ಎಂದರೇನು? ಸಂಸ್ಕರಣಾ ವಿಧಾನ ಹೇಗಿರಲಿದೆ?
ಹಲಾಲ್ ಮಾಂಸದ ತಯಾರಿಯ ಮೊದಲು ಕುರಿ, ಹಸು, ಇತರೆ ಯಾವುದೇ ಸೇವನೆಯ ಪ್ರಾಣಿಯ ಕತ್ತು ಕುಯ್ಯುವ ಮೂಲಕ ರಕ್ತನಾಳಗಳನ್ನ ಕತ್ತರಿಸಿ, ಸಂಪೂರ್ಣ ರಕ್ತ ಹರಿಯುವಂತೆ ಮಾಡಲಾಗುವುದು. ಆದರೆ ಹಿಂದಿನ ಭಾಷೆಯಲ್ಲಿ ಕರೆಯುವ 'ಜಟ್ಕಾ' ಒಂದೇ ಬಾರಿಯಲ್ಲಿ ಪ್ರಾಣಿಯ ಕತ್ತು ಕತ್ತರಿಸುವುದಾಗಿದೆ. ಇದು ಹಿಂದೂ ಮತ್ತು ಸಿಖ್ ಸಂಸ್ಕೃತಿಯಲ್ಲಿ ನಾವು ಕಾಣಬಹುದಾಗಿದೆ.
ಬಿಸಿಸಿಐ ವಿರುದ್ಧ ಕಿಡಿಕಾರಿದ ನೆಟ್ಟಿಗರು
ಟೀಂ ಇಂಡಿಯಾ ಆಟಗಾರರು ಹಲಾಲ್ ಮಾಂಸವನ್ನೇ ಸೇವನೆ ಮಾಡಬೇಕು ಎಂಬ ನಿಯಮವನ್ನ ನೆಟ್ಟಿಗರು ತೀವ್ರವಾಗಿ ಟೀಕಿಸಿದ್ದಾರೆ. ಹಲಾಲ್ ಮಾಂಸ ಹೇಗೆ ಇತರೆ ಮಾಂಸಕ್ಕಿಂತ ಹೆಚ್ಚು ಶಕ್ತಿಯುತವಾಗಿರುತ್ತದೆ ಎಂದು ಬಿಸಿಸಿಐ ತಿಳಿಸಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆಗ್ರಹಿಸಿದ್ದಾರೆ. ಅಲ್ಲದೆ ಇದು ಆಟಗಾರರ ಫಿಟ್ನೆಸ್ ಸುಧಾರಿಸಲು ಹೇಗೆ ಸಹಾಯ ಮಾಡುತ್ತದೆ ಎಂದು ತಿಳಿಸಿ ಎಂದು ಬಿಸಿಸಿಐ ಅನ್ನು ಪ್ರಶ್ನಿಸಿದ್ದಾರೆ.
ಇನ್ನು ಟೀಮ್ ಇಂಡಿಯಾದ ಒಟ್ಟಾರೆ ಕಾಂಟ್ರಾಕ್ಟ್‌ನಲ್ಲಿ ಇರುವುದು ಕೇವಲ ಇಬ್ಬರು ಮುಸ್ಲಿಮರು, ಇದಕ್ಕಾಗಿ ಎಲ್ಲರಿಗೂ ಹಲಾಲ್ ಮಾಂಸ ಸೇವನೆ ಕಡ್ಡಾಯಗೊಳಿಸುವುದು ಹೇಗೆ ಸರಿಯಾದ ನಿರ್ಧಾರ ಎಂದು ಇನ್ನು ಕೆಲವರು ನೆಟ್ಟಿಗರು ಬಿಸಿಸಿಐನಿಂದ ಉತ್ತರ ಬಯಸಿದ್ದಾರೆ.
ಟೆಸ್ಟ್ ಸರಣಿ ಆರಂಭಕ್ಕೂ ಮುನ್ನವೇ ಟೀಂ ಇಂಡಿಯಾಗೆ ಆಘಾತ: ಕೆ.ಎಲ್ ರಾಹುಲ್ ತಂಡದಿಂದ ಹೊರಕ್ಕೆ

ನವೆಂಬರ್ 25ರಂದು ಮೊದಲ ಟೆಸ್ಟ್ ಪಂದ್ಯ
ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಕಾನ್ಪುರದ ಗ್ರೀನ್ ಪಾರ್ಕ್‌ನಲ್ಲಿ ಮೊದಲ ಟೆಸ್ಟ್ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ. ಈಗಾಗಲೇ ಟಿ20 ಸರಣಿಯಲ್ಲಿ ಕಿವೀಸ್ ಪಡೆಯನ್ನ ವೈಟ್‌ವಾಶ್ ಮಾಡಿರುವ ಭಾರತವನ್ನ ಅಜಿಂಕ್ಯ ರಹಾನೆ ಮುನ್ನಡೆಸಲಿದ್ದಾರೆ. ಬಹುತೇಕ ಸ್ಟಾರ್ ಆಟಗಾರರ ಅನುಪಸ್ಥಿತಿಯಲ್ಲಿ ಯುವ ಆಟಗಾರರಿಂದ ಕೂಡಿರುವ ಟೀಂ ಇಂಡಿಯಾ ಕಣಕ್ಕಿಳಿಯಲಿದೆ.
ಕೆ.ಎಲ್ ರಾಹುಲ್ ಗಾಯಾಳುವಾಗಿ ತಂಡದಿಂದ ಹೊರಬಿದ್ದಿದ್ದು, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ರಿಷಭ್ ಪಂತ್ ಸರಣಿಯಿಂದ ವಿಶ್ರಾ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications