ಟೆಸ್ಟ್ ಸರಣಿ ಆರಂಭಕ್ಕೂ ಮುನ್ನವೇ ಟೀಂ ಇಂಡಿಯಾಗೆ ಆಘಾತ: ಕೆ.ಎಲ್ ರಾಹುಲ್ ತಂಡದಿಂದ ಹೊರಕ್ಕೆ

ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್‌ ಸರಣಿ ಆರಂಭಕ್ಕೂ ಮುನ್ನವೇ ಟೀಂ ಇಂಡಿಯಾಗೆ ಆಘಾತ ಎದುರಾಗಿದೆ. ಓಪನರ್ ಕೆ.ಎಲ್ ರಾಹುಲ್‌ ಎಡಗಾಲಿನ ತೊಡೆಯ ಸ್ನಾಯು ಸೆಳೆತದಿಂದಾಗಿ ಮುಂಬರುವ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ರಾಹುಲ್ ಬದಲಿಗೆ ಸೂರ್ಯಕುಮಾರ್ ಯಾದವ್‌ಗೆ ತಂಡದಲ್ಲಿ ಸ್ಥಾನ ಒದಗಿಸಲಾಗಿದೆ.

ಈ ಮೊದಲು ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಸೂರ್ಯಕುಮಾರ್ ಯಾದವ್ ಆಯ್ಕೆಯಾಗಿರಲಿಲ್ಲ. ಆದರೆ ಬಿಸಿಸಿಐ ದಿಢೀರ್ ಎಂದು ಸೂರ್ಯಕುಮಾರ್ ಯಾದವ್‌ರನ್ನ ಟೆಸ್ಟ್ ಸರಣಿಗೆ ಆಯ್ಕೆ ಮಾಡಿತ್ತು. ಆದ್ರೆ ಈ ಕುರಿತಾಗಿ ಸುದ್ದಿ ಹೊರಬಿದ್ದಿದ್ದು, ಕೆ.ಎಲ್ ರಾಹುಲ್ ಟೆಸ್ಟ್ ಪಂದ್ಯ ಆರಂಭಕ್ಕೂ ಮೊದಲು ಚೇತರಿಕೆ ಕಾಣದ ಹಿನ್ನೆಲೆಯಲ್ಲಿ ಯುವ ಪ್ರತಿಭಾವಂತ ಆಟಗಾರ ಸೂರ್ಯಕುಮಾರ್ ಯಾದವ್‌ರನ್ನ ಆಯ್ಕೆ ಮಾಡಲಾಗಿದೆ.

ಸೂರ್ಯಕುಮಾರ್ ಯಾದವ್ ಪ್ರಥಮ ದರ್ಜೆ ರೆಕಾರ್ಡ್ಸ್‌

ಸೂರ್ಯಕುಮಾರ್ ಯಾದವ್ ಪ್ರಥಮ ದರ್ಜೆ ರೆಕಾರ್ಡ್ಸ್‌

ಸೂರ್ಯಕುಮಾರ್ ಯಾದವ್ ಇದುವರೆಗೂ 77 ಪ್ರಥಮ ದರ್ಜೆ ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ, 44 ರ ಸರಾಸರಿಯಲ್ಲಿ 5,356 ರನ್ ಗಳಿಸಿದ್ದಾರೆ. ಅವರ 11 ವರ್ಷಗಳ ಸುದೀರ್ಘ ಪ್ರಥಮ ದರ್ಜೆ ವೃತ್ತಿಜೀವನದಲ್ಲಿ 14 ಶತಕ ಮತ್ತು 26 ಅರ್ಧಶತಕಗಳನ್ನು ಬಾರಿಸಿದ್ದಾರೆ. 2010-11ರ ಋತುವಿನಲ್ಲಿ ಮುಂಬೈ ಪರ, ಡೆಲ್ಲಿ ವಿರುದ್ಧ ಪ್ರಥಮ ದರ್ಜೆಯ ಚೊಚ್ಚಲ ಪಂದ್ಯವನ್ನಾಡಿದ್ದರು.

ಚೊಚ್ಚಲ ಪಂದ್ಯದಲ್ಲೇ ಅವರು 73 ರನ್‌ಗಳ ಆಕರ್ಷಕ ರನ್ ದಾಖಲಿಸಿ ನೋಡುಗರ ಗಮನ ಸೆಳೆದರು. ಅವರ ಅಂತರರಾಷ್ಟ್ರೀಯ ವೃತ್ತಿಜೀವನದ ಬಗ್ಗೆ ನೋಡುವುದಾದ್ರೆ, ಅವರು ಇಲ್ಲಿಯವರೆಗೆ ಭಾರತಕ್ಕಾಗಿ 11 ಟಿ20 ಅಂತರಾಷ್ಟ್ರೀಐ ಪಂದ್ಯಗಳನ್ನು ಆಡಿದ್ದಾರೆ ಮತ್ತು 34.85 ರ ಸರಾಸರಿಯಲ್ಲಿ 244 ರನ್ ಗಳಿಸಿದ್ದಾರೆ ಮತ್ತು 155.4 ರ ಅದ್ಭುತ ಸ್ಟ್ರೈಕ್ ರೇಟ್‌ನಲ್ಲಿ ಗಳಿಸಿದ್ದಾರೆ.

ಒಂಬತ್ತು ಇನ್ನಿಂಗ್ಸ್‌ಗಳಿಂದ ಅವರು ಒಟ್ಟು ಮೂರು ಫಿಫ್ಟಿ ಪ್ಲಸ್ ಸ್ಕೋರ್‌ಗಳನ್ನು ದಾಖಲಿಸಿದ್ದಾರೆ. ಇನ್ನು ಈತ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ ಪ್ರಬಲ ಬ್ಯಾಟರ್ ಆಗಿ ಗುರುತಿಸಿಕೊಂಡಿದ್ದಾರೆ.

ಅವರು ಈ ವರ್ಷದ ಆರಂಭದಲ್ಲಿ ಶ್ರೀಲಂಕಾ ವಿರುದ್ಧ ಮೂರು ODIಗಳನ್ನು ಆಡಿದರು, ಅದರಲ್ಲಿ ಅವರು 62 ರ ಸರಾಸರಿಯಲ್ಲಿ 124 ರನ್ ಗಳಿಸಿದರು. ಯಾದವ್ ಅವರು ಆಡಿದ ಏಕೈಕ ODI ಸರಣಿಯಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಪಡೆದಿದ್ದು ವಿಶೇಷ.

ಶುಭ್ಮನ್ ಗಿಲ್ ಯಾವ ಕ್ರಮಾಂಕದಲ್ಲಿ ಆಡ್ತಾರೆ ಎಂದು ಹೇಳಲು ಸಾಧ್ಯವಿಲ್ಲ: ಚೇತೇಶ್ವರ ಪೂಜಾರ

ಶುಭ್ಮ್‌ನ್ ಗಿಲ್ ಓಪನರ್ ಆಗಿ ಕಣಕ್ಕಿಳಿಯುವ ಸಾಧ್ಯತೆ

ಶುಭ್ಮ್‌ನ್ ಗಿಲ್ ಓಪನರ್ ಆಗಿ ಕಣಕ್ಕಿಳಿಯುವ ಸಾಧ್ಯತೆ

ಕೆ.ಎಲ್ ರಾಹುಲ್ ಕುರಿತಾಗಿ ಸುದ್ದಿ ಹೊರಬೀಳುವ ಮುನ್ನ ಯುವ ಆಟಗಾರ ಶುಭ್ಮನ್ ಗಿಲ್ಲ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿಯುತ್ತಾರೆ ಎಂದೇ ಹೇಳಲಾಗುತ್ತಿತ್ತು. ಗಿಲ್‌ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಆಡುವುದನ್ನ, ಬ್ಯಾಟ್ಸ್‌ಮನ್ ಚೇತೇಶ್ವರ ಪೂಜಾರ ಖಚಿತಪಡಿಸಿದ್ರು. ಆದ್ರೆ ಯಾವ ಕ್ರಮಾಂಕದಲ್ಲಿ ಆಡುತ್ತಾರೆ ಎಂದು ಹೇಳಲು ನಿರಾಕರಿಸಿದ್ರು.

ಆದ್ರೆ ರಾಹುಲ್ ಇಂಜ್ಯುರಿಯು, ಶುಭ್ಮನ್ ಗಿಲ್‌ಗೆ ಉತ್ತಮ ಅವಕಾಶ ಮಾಡಿಕೊಟ್ಟಿದ್ದು, ಮಯಾಂಕ್ ಅಗರ್ವಾಲ್ ಜೊತೆಗೆ ಓಪನರ್ ಆಗಿ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಾಗಿದೆ.

RCB ಆಭಿಮಾನಿಗಳು ಹೊಸ ಹಾಡು ಕೇಳಿ ಹೇಳುತ್ತಿರೋದೇನು | Oneindia Kannada
 ಟೀಂ ಇಂಡಿಯಾದಲ್ಲಿ ಸ್ಕ್ವಾಡ್‌

ಟೀಂ ಇಂಡಿಯಾದಲ್ಲಿ ಸ್ಕ್ವಾಡ್‌

ಅಜಿಂಕ್ಯ ರಹಾನೆ (ನಾಯಕ) ಮಯಾಂಕ್ ಅಗರ್ವಾಲ್, ಚೇತೇಶ್ವರ ಪೂಜಾರ (ಉಪನಾಯಕ) ಶುಭ್ಮನ್ ಗಿಲ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ವೃದ್ದಿಮಾನ್ ಸಾಹಾ, ಕೆ.ಎಸ್ ಭರತ್, ರವೀಂದ್ರ ಜಡೇಜಾ, ಆರ್. ಅಶ್ವಿನ್, ಅಕ್ಷರ್ ಪಟೇಲ್, ಜಯಂತ್ ಯಾದವ್, ಇಶಾಂತ್ ಶರ್ಮಾ, ಉಮೇಶ್ ಯಾದವ್, ಮೊಹಮ್ಮದ್ ಸಿರಾಜ್, ಪ್ರಸಿದ್ ಕೃಷ್ಣ

For Quick Alerts
ALLOW NOTIFICATIONS
For Daily Alerts
Story first published: Tuesday, November 23, 2021, 17:27 [IST]
Other articles published on Nov 23, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X