ಸೌರವ್ ಗಂಗೂಲಿ, ಭಾರತ-ಪಾಕ್ ಸೋಲು ಗೆಲುವಿನ ಹೇಳಿಕೆಯಿತ್ತ ಅಖ್ತರ್!

ಇಸ್ಲಮಾಬಾದ್, ಅಕ್ಟೋಬರ್ 16: ಟೀಮ್ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ, ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಅಧ್ಯಕ್ಷತೆ ವಹಿಸಲು ಸಜ್ಜಾಗುತ್ತಿದ್ದಾರೆ. ಈ ಬದಲಾವಣೆ ಬಗ್ಗೆ ದೇಶವಲ್ಲದೆ ವಿದೇಶದಲ್ಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ಕೂಡ ಈ ಬಗ್ಗೆ ಹೇಳಿಕೆ ನೀಡಿದ್ದಾರೆ.
ಐಪಿಎಲ್‌ನಲ್ಲಿ ಗಂಗೂಲಿ ನಾಯಕತ್ವದ ಕೋಲ್ಕತ್ತ ನೈಟ್ ರೈಡರ್ಸ್ ಪರ ಆಡಿರುವ ಅನುಭವ ಹೊಂದಿರುವ ಅಖ್ತರ್, ಗಂಗೂಲಿ ಬಿಸಿಸಿಐ ಅಧ್ಯಕ್ಷತೆ ವಹಿಸಿಕೊಳ್ಳುತ್ತಿರುವ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಬಂಗಾಳ ಹುಲಿ ಗಂಗೂಲಿ ಭಾರತೀಯ ಕ್ರಿಕೆಟ್‌ನಲ್ಲಿ ಮಹತ್ವದ ಬದಲಾವಣೆಗೆ ಕಾರಣರಾದವರು ಎಂದು ಶೋಯೆಬ್ ಹೇಳಿದ್ದಾರೆ.
'ಭಾರತೀಯ ಕ್ರಿಕೆಟ್‌ನಲ್ಲಿ ಬದಲಾವಣೆ ತಂದವರು ಸೌರವ್ ಗಂಗೂಲಿ. 1997-98ಕ್ಕೂ ಮೊದಲು ನಾನು ಭಾರತ ತಂಡ ಪಾಕಿಸ್ತಾನವನ್ನು ಸೋಲಿಸುತ್ತೆ ಎಂದು ಭಾವಿಸಿರಲಿಲ್ಲ. ತಂಡದ ನಾಯಕತ್ವವನ್ನು ಗಂಗೂಲಿ ವಹಿಸಿಕೊಳ್ಳುವವರೆಗೂ ಭಾರತ, ಪಾಕಿಸ್ತಾನವನ್ನು ಸೋಲಿಸೀತು ಎಂದು ನಾನು ಅಂದುಕೊಂಡಿರಲೇ ಇಲ್ಲ,' ಎಂದು ಅಖ್ತರ್ ಗಂಗೂಲಿ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ.
'ಸೌರವ್ ಗಂಗೂಲಿ ಭಾರತೀಯ ಆಟಗಾರರ ಮನಸ್ಥಿತಿಯನ್ನೇ ಬದಲಿಸಿದವರು. ಅವರು ಟೀಮ್ ಇಂಡಿಯಾ ಪರ ಆಡುವ ಪ್ರತಿಭಾನ್ವಿತ ಆಟಗಾರರನ್ನು ಆರಿಸುವತ್ತ ಚಿತ್ತ ಹೊಂದಿದ್ದಾರೆ,' ಎಂದು ಅಖ್ತರ್ ತನ್ನ ಯೂಟ್ಯೂಬ್ ಚಾನೆಲ್ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.
'ದಾದ ಒಬ್ಬರು ಶ್ರೇಷ್ಠ ನಾಯಕ. ಪ್ರತಿಭೆಗಳನ್ನು ಆರಿಸುವ ಬಗೆಯಲ್ಲಿ ಆತನೊಬ್ಬ ಪ್ರಮಾಣಿಕ ವ್ಯಕ್ತಿ. ಆತನಲ್ಲಿ ಅಧ್ಬುತ ಕ್ರಿಕೆಟ್ ಜ್ಞಾನವಿದೆ,' ಎಂದು ಅಖ್ತರ್ ಹೇಳಿದ್ದಾರೆ. ಮುಂಬೈಯಲ್ಲಿರುವ ಬಿಸಿಸಿಐ ಮುಖ್ಯ ಕಚೇರಿಗೆ ನಾಮನಿರ್ದೇಶನ ನೀಡಿರುವ ಗಂಗೂಲಿ, ತಾನು ಪ್ರಥಮದರ್ಜೆ ಕ್ರಿಕೆಟರ್‌ಗಳತ್ತ ಹೆಚ್ಚು ಲಕ್ಷ್ಯ ಹರಿಸುವುದಾಗಿ ಹೇಳಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications