ಐಸಿಸಿ 2025ರ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಪಾಕಿಸ್ತಾನ ಆತಿಥ್ಯ ವಹಿಸಲಿದೆ. ಅದಕ್ಕೂ ಮುನ್ನ ಪಾಕಿಸ್ತಾ ಕ್ರಿಕೆಟ್ ಬೋರ್ಡ್ (ಪಿಸಿಬಿ) ಮಹತ್ವದ ಮಹತ್ವದ ಘೋಷಣೆ ಮಾಡಿದೆ. ಬಾಬರ್ ಅಜಮ್ ನಂತರ ವೈಟ್ ಬಾಲ್ ಕ್ರಿಕೆಟ್‌ನಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಹೊಸ ನಾಯಕ ಸಿಕ್ಕಿದ್ದಾರೆ.
ಮುಂದಿನ ತಿಂಗಳು ಅಂದರೆ ನವೆಂಬರ್‌ನಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ಮತ್ತು ಜಿಂಬಾಬ್ವೆ ವಿರುದ್ಧದ ಸೀಮಿತ ಓವರ್‌ಗಳ ಪ್ರವಾಸಕ್ಕಾಗಿ ಪಾಕಿಸ್ತಾನ ತಂಡಗಳನ್ನು ಇತ್ತೀಚೆಗೆ ಪ್ರಕಟಿಸಿದೆ. ಈಗ ಪಿಸಿಬಿ ತನ್ನ ಹೊಸ ವೈಟ್ ಬಾಲ್ ನಾಯಕನಾಗಿ ಸ್ಟಾರ್ ವಿಕೆಟ್‌ಕೀಪರ್- ಬ್ಯಾಟರ್ ಮೊಹಮ್ಮದ್ ರಿಜ್ವಾನ್ ಅವರನ್ನು ನೇಮಿಸಿದೆ.

ಭಾನುವಾರ ಲಾಹೋರ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರು ಮೊಹಮ್ಮದ್ ರಿಜ್ವಾನ್ ಅವರನ್ನು ಹೊಸ ವೈಟ್ ಬಾಲ್ ನಾಯಕರಾಗಿ ನೇಮಿಸಿರುವುದಾಗಿ ಘೋಷಿಸಿದ್ದಾರೆ. ಜೊತೆಗೆ ಆಲ್ ರೌಂಡರ್ ಸಲ್ಮಾನ್ ಅಲಿ ಅಗಾ ಅವರನ್ನು ತಂಡದ ನೂತನ ಉಪನಾಯಕರಾಗವುದನ್ನು ತಿಳಿಸಿದ್ದಾರೆ. ಪಾಕಿಸ್ತಾನದ ಸೀಮಿತ ಓವರ್‌ಗಳ ಕ್ರಿಕೆಟ್‌ನ ನಾಯಕತ್ವದಿಂದ ಕೆಳಗಿಳಿದಿದ್ದ ಬಾಬರ್ ಅಜಮ್ ಅವರ ಸ್ಥಾನಕ್ಕೆ ರಿಜ್ವಾನ್ ನೇಮಕಗೊಂಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮೊಹ್ಸಿನ್ ನಖ್ವಿ, 'ನಾವು ಚಾಂಪಿಯನ್ಸ್ ಕಪ್‌ನ ಎಲ್ಲಾ ಐವರು ಮಾರ್ಗದರ್ಶಕರು ಮತ್ತು ತರಬೇತುದಾರರೊಂದಿಗೆ ಮಾತನಾಡಿದ್ದೇವೆ. ಅವರಲ್ಲಿ ಹೆಚ್ಚಿನವರು ಮೊಹಮ್ಮದ್ ರಿಜ್ವಾನ್ ನಾಯಕರಾಗಬೇಕು ಮತ್ತು ಸಲ್ಮಾನ್ ಅಲಿ ಅಗಾ ಉಪನಾಯಕರಾಗಬೇಕು ಎಂದು ತಮ್ಮ ಅಭಿಪ್ರಾಯಗಳನ್ನು ತಿಳಿಸಿರುವುದಾಗಿ ಹೇಳಿದ್ದಾರೆ.
ಅನುಭವಿ ಆಟಗಾರನಾದ ಮೊಹಮ್ಮದ್ ರಿಜ್ವಾನ್ ತಂಡದಲ್ಲಿ ಭರವಸೆ ಉಳಿಸಿಕೊಂಡಿದ್ದಾರೆ. ಅವರು ದೇಶೀಯ ಕ್ರಿಕೆಟ್ ಮತ್ತು ಪಿಎಸ್‌ಎಲ್ (ಪಾಕಿಸ್ತಾನ ಸೂಪರ್ ಲೀಗ್) ನಲ್ಲಿ ಆಡಿದ ಮತ್ತು ನಾಯಕತ್ವ ವಹಿಸಿದ ಅನುಭವವನ್ನು ಹೊಂದಿದ್ದಾರೆ. ಇದರ ಅಧಾರದ ಮೇಲೆ ಅವರಿಗೆ ಪಾಕಿಸ್ತಾನ ತಂಡದ ಜವಾಬ್ದಾರಿಯನ್ನು ನೀಡಲಾಗಿದೆ.
ನಾಯಕನಾಗಿ ರಿಜ್ವಾನ್ ಅವರು ಆಸ್ಟ್ರೇಲಿಯಾ ಪ್ರವಾಸದಿಂದ ತಮ್ಮ ಅಧಿಕಾರವಧಿಯನ್ನು ಆರಂಭಿಸಲಿದ್ದಾರೆ. ಪಾಕಿಸ್ತಾನ ತಂಡವು ನವೆಂಬರ್ 4 ರಿಂದ ತಲಾ ಮೂರು ಏಕದಿನಗಳು ಮತ್ತು ಟಿ20 ಪಂದ್ಯಗಳ ಸರಣಿಯನ್ನು ಆಡಲಿದೆ. ಆಸ್ಟ್ರೇಲಿಯಾ ಪ್ರವಾಸದ ನಂತರ ನವೆಂಬರ್ 24 ರಿಂದ ಜಿಂಬಾಬ್ವೆ ವಿರುದ್ಧದ 3 ಏಕದಿನ ಹಾಗೂ 3 ಟಿ20 ಪಂದ್ಯಗಳ ಸರಣಿಯನ್ನೂ ಆಡಬೇಕಿದೆ.
ಅಮೀರ್ ಜಮಾಲ್, ಅಬ್ದುಲ್ಲಾ ಶಫೀಕ್, ಅರಾಫತ್ ಮಿನ್ಹಾಸ್, ಬಾಬರ್ ಅಜಮ್, ಫೈಸಲ್ ಅಕ್ರಮ್, ಹ್ಯಾರಿಸ್ ರೌಫ್, ಹಸಿಬುಲ್ಲಾ (ವಿಕೆಟ್‌ಕೀಪರ್), ಕಮ್ರಾನ್ ಗುಲಾಮ್, ಮೊಹಮ್ಮದ್ ಹಸ್ನೇನ್, ಮೊಹಮ್ಮದ್ ರಿಜ್ವಾನ್ (ವಿಕೆಟ್‌ಕೀಪರ್ ಮತ್ತು ನಾಯಕ), ಮೊಹಮ್ಮದ್ ಇರ್ಫಾನ್ ಖಾನ್, ನಸೀಮ್ , ಸೈಮ್ ಅಯೂಬ್, ಸಲ್ಮಾನ್ ಅಲಿ ಅಗಾ, ಶಾಹೀನ್ ಶಾ ಅಫ್ರಿದಿ.
ಅರಾಫತ್ ಮಿನ್ಹಾಸ್, ಬಾಬರ್ ಅಜಮ್, ಹಾರಿಸ್ ರೌಫ್, ಹಸಿಬುಲ್ಲಾ, ಜಹಂದಾದ್ ಖಾನ್, ಮೊಹಮ್ಮದ್ ಅಬ್ಬಾಸ್ ಅಫ್ರಿದಿ, ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್ ಮತ್ತು ನಾಯಕ), ಮೊಹಮ್ಮದ್ ಇರ್ಫಾನ್ ಖಾನ್, ನಸೀಮ್ ಶಾ, ಒಮೈರ್ ಬಿನ್ ಯೂಸುಫ್, ಸಾಹಿಬ್ಜಾದಾ ಫರ್ಹಾನ್, ಸಲ್ಮಾನ್ ಅಫ್ಗಾ, ಸಲ್ಮಾನ್ ಅಲಿ ಮೊಕೀಮ್, ಉಸ್ಮಾನ್ ಖಾನ್.