Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪಾಕಿಸ್ತಾನ, ವೆಸ್ಟ್ ಇಂಡೀಸ್ ಪ್ರವಾಸಕ್ಕೆ ನ್ಯೂಜಿಲೆಂಡ್‌ ಸರ್ಕಾರದಿಂದ ಅನುಮತಿ

New Zealand government gives all clear for Pakistan, West Indies to tour

ವೆಲ್ಲಿಂಗ್ಟನ್: 2020ರ ಅಂತ್ಯ ಮತ್ತು 2021ರ ಆರಂಭದಲ್ಲಿ ನ್ಯೂಜಿಲೆಂಡ್‌ಗೆ ಪಾಕಿಸ್ತಾನ ಮತ್ತು ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡಗಳು ಪ್ರವಾಸ ಬರುವುದರಲ್ಲಿವೆ. ಇತ್ತಂಡಗಳ ನ್ಯೂಜಿಲೆಂಡ್ ಪ್ರವಾಸಕ್ಕೆ ಅಲ್ಲಿನ ಸರ್ಕಾರ ಅನುಮತಿ ನೀಡಿದೆ. ನ್ಯೂಜಿಲೆಂಡ್ ಕ್ರಿಕೆಟ್ ಈ ವಿಚಾರವನ್ನು ಶುಕ್ರವಾರ (ಸೆಪ್ಟೆಂಬರ್ 25) ತಿಳಿಸಿದೆ.

ಕೊರೊನಾವೈರಸ್ ಭೀತಿಯನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸಿದ ರಾಷ್ಟ್ರಗಳಲ್ಲಿ ನ್ಯೂಜಿಲೆಂಡ್ ಮುಂಚೂಣಿಯಲ್ಲಿದೆ. ಈ ದೇಶಕ್ಕೆ ಹೋಗಬೇಕಾದರೆ ಈಗಲೂ ಬಹುತೇಕರಿಗೆ ನಿರ್ಬಂಧವಿದೆ. ಆದರೆ ವಿದೇಶಿ ಕ್ರಿಕೆಟ್ ಟೂರ್ನಿಗೆ ಅಲ್ಲಿನ ಸರ್ಕಾರ ಕಡೆಗೂ ಅಸ್ತು ಎಂದಿದೆ.

ನ್ಯೂಜಿಲೆಂಡ್‌ಗೆ ಪ್ರವಾಸ ಬರಲಿರುವ ಪಾಕಿಸ್ತಾನ ಮತ್ತು ವೆಸ್ಟ್ ಇಂಡೀಸ್ ತಂಡಗಳು ಅಲ್ಲಿ ದೀರ್ಘ ಕಾಲ ಉಳಿಯಲಿದ್ದಾರೆ. ಯಾಕೆಂದರೆ ಪ್ರವಾಸ ಸರಣಿಯು ನಿಯಮಿತ ಓವರ್ ಮತ್ತು ಟೆಸ್ಟ್ ಸರಣಿಯನ್ನೂ ಒಳಗೊಂಡಿರಲಿದೆ.

'ಮುಂಬರಲಿರುವ ನವೆಂಬರ್, ಡಿಸೆಂಬರ್ ಮತ್ತು ಜನವರಿಯಲ್ಲಿ ಪಾಕಿಸ್ತಾನ ಮತ್ತು ವೆಸ್ಟ್ ಇಂಡೀಸ್ ಪುರುಷರ ತಂಡಗಳು ನ್ಯೂಜಿಲೆಂಡ್‌ಗೆ ಪ್ರವಾಸ ಬರುವುದಕ್ಕೆ ಸಂಬಂಧಿಸಿ ಯೋಜನೆಗಳನ್ನು ಮುಂದುವರೆಸಲು ನ್ಯೂಜಿಲೆಂಡ್ ಸರ್ಕಾರ ಅನುಮತಿ ನೀಡಿದೆ,' ಎಂದು ನ್ಯೂಜಿಲೆಂಡ್ ಕ್ರಿಕೆಟ್ ತಿಳಿಸಿದೆ.

Story first published: Friday, September 25, 2020, 18:04 [IST]
Other articles published on Sep 25, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+