
ನೇಪಿಯರ್: ನೇಪಿಯರ್‌ನ ಮೆಕ್‌ಮೀನ್ ಪಾರ್ಕ್‌ನಲ್ಲಿ ಮಂಗಳವಾರ (ಡಿಸೆಂಬರ್ 22) ನಡೆದ ನ್ಯೂಜಿಲೆಂಡ್ ಮತ್ತು ಪಾಕಿಸ್ತಾನ ನಡುವಿನ 3ನೇ ಟಿ20ಐ ಪಂದ್ಯದಲ್ಲಿ ಪಾಕಿಸ್ತಾನ 4 ವಿಕೆಟ್ ಗೆಲುವನ್ನಾಚರಿಸಿದೆ. ಆರಂಭಿಕ ಬ್ಯಾಟ್ಸ್‌ಮನ್ ಮೊಹಮ್ಮದ್ ರಿಝ್ವಾನ್ ಸ್ಫೋಟಕ ಅರ್ಧ ಶತಕದಿಂದಾಗಿ ಪಾಕ್ ಪಂದ್ಯ ಗೆದ್ದುಕೊಂಡಿತು.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ನ್ಯೂಜಿಲೆಂಡ್, ಮಾರ್ಟಿನ್ ಗಪ್ಟಿಲ್ 19, ಟಿಮ್ ಸೀಫರ್ಟ್ 35, ಡೆವೊನ್ ಕಾನ್ವೇ 63, ಗ್ಲೆನ್ ಫಿಲಿಪ್ಸ್ 31, ಸ್ಕಾಟ್ ಕುಗ್ಗೆಲೀಜ್ನ್ 14 ರನ್‌ನೊಂದಿಗೆ 20 ಓವರ್‌ಗೆ 7 ವಿಕೆಟ್ ಕಳೆದು 173 ರನ್ ಗಳಿಸಿತು.
ಗುರಿ ಬೆನ್ನಟ್ಟಿದ ಪಾಕಿಸ್ತಾನದಿಂದ ಮೊಹಮ್ಮದ್ ರಿಝ್ವಾನ್ 89 (59 ಎಸೆತ), ಹೈದರ್ ಅಲಿ 11, ಮೊಹಮ್ಮದ್ ಹಫೀಝ್ 41, ಖುಷ್ದಿಲ್ ಶಾ 13, ಇಫ್ತಿಕರ್ 14 ರನ್ ಕೊಡುಗೆಯೊಂದಿಗೆ 19.4 ಓವರ್‌ಗೆ 6 ವಿಕೆಟ್ ಕಳೆದು 177 ರನ್ ಬಾರಿಸಿ ಗೆಲುವನ್ನಾಚರಿಸಿತು. ಇದರೊಂದಿಗೆ 3 ಪಂದ್ಯಗಳ ಟಿ20 ಸರಣಿ 2-1ರಿಂದ ನ್ಯೂಜಿಲೆಂಡ್ ವಶವಾಗಿದೆ.
ನ್ಯೂಜಿಲೆಂಡ್ ಇನ್ನಿಂಗ್ಸ್‌ನಲ್ಲಿ ಪಾಕ್‌ನ ಶಾಹೀನ್ ಅಫ್ರಿದಿ 2, ಹ್ಯಾರಿಸ್ ರೌಫ್ 2, ಫಹೀಮ್ ಅಶ್ರಫ್ 3 ವಿಕೆಟ್ ಪಡೆದರೆ, ಪಾಕ್ ಇನ್ನಿಂಗ್ಸ್‌ನಲ್ಲಿ ನ್ಯೂಜಿಲೆಂಡ್‌ನ ಟಿಮ್ ಸೌಥೀ 2, ಕೈಲ್ ಜೇಮಿಸನ್ 1, ಸ್ಕಾಟ್ ಕುಗ್ಗೆಲೀಜ್ನ್ 2, ಜೇಮ್ಸ್ ನೀಶಮ್ 1 ವಿಕೆಟ್‌ನೊಂದಿಗೆ ಗಮನ ಸೆಳೆದರು.