For Quick Alerts
ALLOW NOTIFICATIONS  
For Daily Alerts
 

ನಾವು ತಟಸ್ಥ ತಾಣದಲ್ಲಿ ಸರಣಿ ನಡೆಸಲ್ಲ: ಪಾಕಿಸ್ತಾನ ಕ್ರಿಕೆಟ್ ಬೋರ್ಡ್

No more neutral venues for us: Pakistan Cricket Board official

ಕರಾಚಿ: ತವರಿನಲ್ಲಿ ನಡೆಯಲಿದ್ದ ಸರಣಿಗಳನ್ನು ತಟಸ್ಥ ತಾಣದಲ್ಲಿ ನಡೆಸುವುದನ್ನು ನಾವಿನ್ನು ಪರಿಗಣಿಸುವುದಿಲ್ಲ ಎಂದು ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (ಪಿಸಿಬಿ) ಹಿರಿಯ ಅಧಿಕಾರಿಗಳು ಹೇಳಿದ್ದಾರೆ. ತಟಸ್ಥ ತಾಣದಲ್ಲಿ ಸರಣಿಗಳನ್ನು ನಡೆಸುವ ಆಲೋಚನೆಯಿಲ್ಲ, ಯಾಕೆಂದರೆ ಪಾಕಿಸ್ತಾನವೇ ಸರಣಿಗಳನ್ನು ನಡೆಸಲು ಸುರಕ್ಷಿತವಾಗಿದೆ ಎಂದು ಪಿಸಿಬಿ ತಿಳಿಸಿದೆ.

ಸುಮಾರು 18 ವರ್ಷಗಳ ಬಳಿಕ ಪಾಕಿಸ್ತಾಕ್ಕೆ ಪ್ರವಾಸ ಸರಣಿ ಆಡುವುದಕ್ಕೋಸ್ಕರ ನ್ಯೂಜಿಲೆಂಡ್ ಕ್ರಿಕೆಟ್ ತಂಡ ಬಂದಿತ್ತು. ಆದರೆ ಕಿವೀಸ್‌ಗೆ ಪಾಕ್‌ನಲ್ಲಿ ಭದ್ರತೆಯ ಅಪಾಯ ಎಚ್ಚರಿಕೆ ಕೇಳಿ ಬಂದಿದ್ದರಿಂದ ನಡೆಯಬೇಕಿದ್ದ ಟೂರ್ನಿಯನ್ನು ಆಡದೆ ತವರಿಗೆ ವಾಪಸ್ ಆಗಿತ್ತು. ನ್ಯೂಜಿಲೆಂಡ್ ಈ ನಡೆ ಕ್ರಿಕೆಟ್‌ ವಲಯದಲ್ಲಿ ಚರ್ಚೆ ಹುಟ್ಟು ಹಾಕಿತ್ತು.

"ಪಾಕಿಸ್ತಾನದಲ್ಲಿ ಅಭದ್ರತೆ ಇದೆ ಎನ್ನುವ ಮಾತಿಗೆ ಅರ್ಥವೇ ಇಲ್ಲ. ಯಾಕೆಂದರೆ ಪಾಕಿಸ್ತಾನ ಸುರಕ್ಷಿತವಾಗಿದೆ. ಸಂದರ್ಭ ಸಾಮಾನ್ಯವಾಗಿದೆ. ಇಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ಆತಿಥ್ಯ ವಹಿಸಲು ಏನೆಲ್ಲ ಬೇಕೋ ಅದೆಲ್ಲವೂ ಇದೆ. ಹೀಗಾಗಿ ತಟಸ್ಥ ತಾಣಗಳಲ್ಲಿ ಸರಣಿಗಳನ್ನು ಯೋಚಿಸುವ ಆಲೋಚನೆಯಿಲ್ಲ," ಎಂದು ಪಿಸಿಬಿ ಅಧಿಕಾರಿಗಳು ಹೇಳಿದ್ದಾರೆ.

2009ರಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡ ಪಾಕಿಸ್ತಾನಕ್ಕೆ ಪ್ರವಾಸ ಹೋಗಿದ್ದಾಗ ಭಯೋತ್ಪಾದನಾ ದಾಳಿ ನಡೆದಿತ್ತು. ನ್ಯೂಜಿಲೆಂಡ್‌ ತಂಡ ಪ್ರವಾಸ ಹೋಗಿದ್ದಾಗಲೂ ಆಟಗಾರರು ತಂಗಿದ್ದ ಹೋಟೆಲ್ ಸಮೀಪ ಬಾಂಬ್ ಬ್ಲಾಸ್ಟ್ ನಡೆದಿತ್ತು. ಆ ಘಟನೆಗಳು ನಡೆದ ಬಳಿಕ ಅಂತಾರಾಷ್ಟ್ರೀಯ ತಂಡಗಳು ಪಾಕ್‌ಗೆ ಪ್ರವಾಸ ಹೋಗುವುದನ್ನೇ ನಿಲ್ಲಿಸಿತ್ತು.

ಆದರೆ ಇತ್ತೀಚೆಗೆ ಪಾಕಿಸ್ಥಾನಕ್ಕೆ ಬೇರೆ ಬೇರೆ ತಂಡಗಳು ಪಾಕಿಸ್ತಾನಕ್ಕೆ ಪ್ರವಾಸ ಬರುತ್ತಿವೆ. ಬಾಂಗ್ಲಾದೇಶ, ಶ್ರೀಲಂಕಾ, ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ ತಂಡಗಳು ಈಗಾಗಲೇ ಪಾಕ್‌ನಲ್ಲಿ ಪಂದ್ಯಗಳನ್ನಾಡಿದೆ. ಈ ತಿಂಗಳ ಆರಂಭದಲ್ಲಿ ಪಾಕ್‌ಗೆ ನ್ಯೂಜಿಲೆಂಡ್ ಪ್ರವಾಸ ಬಂದಿದ್ದಾಗ ನ್ಯೂಜಿಲೆಂಡ್ ತಂಡಕ್ಕೆ ನ್ಯೂಜಿಲೆಂಡ್ ಸರ್ಕಾರ ಭದ್ರತಾ ಅಪಾಯದ ಎಚ್ಚರಿಕೆ ನೀಡಿತ್ತು. ಈ ಎಚ್ಚರಿಕೆ ಬಂದ ಕೂಡಲೇ ನ್ಯೂಜಿಲೆಂಡ್ ತಂಡ ಪಾಕ್‌ನಲ್ಲಿ ಸರಣಿ ಆಡಲು ಹಿಂದೇಟು ಹಾಕಿತ್ತು. ಇದರಿಂದ ಪಾಕಿಸ್ಥಾನ ಕ್ರಿಕೆಟ್ ಬೋರ್ಡ್‌ಗೆ ದೊಡ್ಡ ಮಟ್ಟಿನ ಆರ್ಥಿಕ ನಷ್ಟವಾಗಿದ್ದಷ್ಟೇ ಅಲ್ಲ, ವಿಶ್ವ ಕ್ರಿಕೆಟ್‌ನಲ್ಲಿ ತೀವ್ರ ಮುಖಭಂಗವೂ ಆಗಿತ್ತು.

ವರದಿಯ ನ್ಯೂಜಿಲೆಂಡ್ ಪಾಕಿಸ್ತಾನಕ್ಕೆ ಪ್ರವಾಸ ಬಂದಾಗ ಭದ್ರತೆಗಾಗಿ ಪಾಕಿಸ್ತಾನ ಐವರು ಎಸ್‌ಪಿಎಸ್ (ಸ್ಟೇಟ್ ಪೊಲೀಸ್ ಸರ್ವಿಸ್), ಸುಮಾರು 500ರಷ್ಟು ಮಂದಿ ಎಸ್ಎಸ್‌ಪಿ (ಸೀನಿಯರ್ ಸೂಪರಿಂಟೆಂಡೆಂಟ್ ಪೊಲೀಸ್) ಸಿಬ್ಬಂದಿಗಳನ್ನು ನೇಮಿಸಿತ್ತು. ಅಷ್ಟೇ ಅಲ್ಲ, ಇದರ ಜೊತೆಗೆ ಪಾಕ್ ಆರ್ಮಿಯನ್ನೂ ನಿಯೋಜಿಸಲಾಗಿತ್ತು. ಆದರೂ ನ್ಯೂಜಿಲೆಂಡ್ ಸರ್ಕಾರದಿಂದ ಎಚ್ಚರಿಕೆಯ ಕರೆ ಬಂದಿತ್ತಂತೆ. ಹಾಗಂತ ಪಾಕ್‌ನಲ್ಲಿ ನ್ಯೂಜಿಲೆಂಡ್ ತಂಡಕ್ಕೆ ಅಪಾಯ ಎದುರಾಗುವಂತ ಯಾವುದೇ ಸಾಕ್ಷ್ಯಗಳು ಸಿಕ್ಕಿರಲಿಲ್ಲ.

ನ್ಯೂಜಿಲೆಂಡ್‌ಗೆ ಪಾಕ್‌ನಲ್ಲಿ ಕ್ರಿಕೆಟ್ ಆಡಲು ಯಾಕೆ ಇಷ್ಟು ಭಯ?

2002ರಲ್ಲಿ ಕರಾಚಿಯಲ್ಲಿ ನ್ಯೂಜಿಲೆಂಡ್‌ ತಂಡ ತಂಗಿದ್ದ ಹೋಟೆಲ್ ಸಮೀಪ ಬಾಂಬ್ ಬ್ಲಾಸ್ಟ್ ಆಗಿತ್ತು. ಅದಾಗಿ ಒಂದು ವರ್ಷದ ಬಳಿಕ ನ್ಯೂಜಿಲೆಂಡ್ ತಂಡ ಕೂಡ ಪಾಕಿಸ್ತಾನಕ್ಕೆ ಪ್ರವಾಸ ಹೋಗುವುದನ್ನೇ ನಿಲ್ಲಿಸಿತ್ತು. ಆ ಘಟನೆ ನಡೆದು ಬರೋಬ್ಬರಿ 18 ವರ್ಷಗಳ ಬಳಿಕ ಮತ್ತೆ ಈ ಬಾರಿ ಕಿವೀಸ್ ಪಾಕಿಸ್ತಾನಕ್ಕೆ ಪ್ರವಾಸ ಕೈಗೊಂಡಿತ್ತು. 2009ರಲ್ಲಿ ಶ್ರೀಲಂಕಾ ತಂಡ ಪಾಕ್‌ಗೆ ಹೋಗಿದ್ದಾಗ, ಈಗ ನ್ಯೂಜಿಲೆಂಡ್ ತಂಡದ ಕೋಚ್ ಆಗಿರುವ ಥಿಲನ್ ಸಮರವೀರ ಅವರ ಎಡ ತೊಡೆಯ ಭಾಗಕ್ಕೆ ಗುಂಡು ಹಾರಿಸಲಾಗಿತ್ತು. ಅದಾಗಿ ಶಸ್ತ್ರ ಚಿಕಿತ್ಸೆ ನಡೆದು ಮೂರು ತಿಂಗಳ ಬಳಿಕ ಸಮರವೀರ ಮತ್ತೆ ಮೈದಾನಕ್ಕಿಳಿದಿದ್ದರು. ಈಗ 2019ರಿಂದಲೂ ಸಮರವೀರ ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಜೊತೆಗೆ ಕೆಲಸ ಮಾಡುತ್ತಿದ್ದಾರೆ. ಆದರೆ ಈಚಿನ ದಿನಗಳಲ್ಲಿ ಕ್ರಿಕೆಟರ್ಸ್‌ಗೆ ಪಾಕ್‌ನಲ್ಲಿ ಭಯೋತ್ಪಾದನಾ ಭೀತಿ ಎದುರಾಗಿದ್ದ ಬಗ್ಗೆ ಅಧಿಕೃತ ಮಾಹಿತಿಯಿಲ್ಲ. ಇದೇ ಕಾರಣಕ್ಕೆ ಈಚಿನ ವರ್ಷಗಳಲ್ಲ ಪಾಕಿಸ್ತಾನ ತಂಡ ಜಿಂಬಾಬ್ವೆ, ಸೌತ್ ಆಫ್ರಿಕಾ, ಬಾಂಗ್ಲಾದೇಶ, ವೆಸ್ಟ್‌ ಇಂಡೀಸ್ ಮತ್ತು ಶ್ರೀಲಂಕಾ ತಂಡಗಳಿಗೆ ಯಶಸ್ವಿಯಾಗಿ ಸರಣಿ ಆಯೋಜಿಸಿತ್ತು.

Story first published: Sunday, September 26, 2021, 0:18 [IST]
Other articles published on Sep 26, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+