Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Noman Ali: ಟೆಸ್ಟ್ ಕ್ರಿಕೆಟ್‌ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಮೊದಲ ಪಾಕಿಸ್ತಾನ ಸ್ಪಿನ್ನರ್

ಪಾಕಿಸ್ತಾನ ತಂಡದ ಅನುಭವಿ ಆಫ್ ಸ್ಪಿನ್ನರ್ ನೋಮನ್ ಅಲಿ ಇತಿಹಾಸ ಸೃಷ್ಟಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಪಾಕಿಸ್ತಾನದ ಮೊದಲ ಸ್ಪಿನ್ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಶನಿವಾರ, ಜನವರಿ 25 ರಂದು ಮುಲ್ತಾನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್‌ ಪಂದ್ಯದ ವೆಸ್ಟ್ ಇಂಡೀಸ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ನೋಮನ್ ಅಲಿ ಈ ಸಾಧನೆ ಮಾಡಿದ್ದಾರೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಮೊದಲ ಪಾಕಿಸ್ತಾನಿ ಸ್ಪಿನ್ನರ್ ಎಂಬ ಹೆಗ್ಗಳಿಕೆಗೆ ಪಾತ್ರರಾದ ನೋಮನ್ ಅಲಿ ಇತಿಹಾಸದ ಪುಟಗಳಲ್ಲಿ ತಮ್ಮ ಹೆಸರನ್ನು ದಾಖಲಿಸಿದ್ದಾರೆ. 38 ವರ್ಷದ ಎಡಗೈ ಸ್ಪಿನ್ನರ್ ನೋಮನ್ ಅಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್‌ನ ಮೊದಲ ದಿನದ ಆಟದಲ್ಲಿ ಈ ಸಾಧನೆ ಮಾಡುವಲ್ಲಿ ಯಶಸ್ವಿಯಾದರು.

Noman Ali becomes first Pakistan spinner to take hat-trick in Test cricket

ವೆಸ್ಟ್ ಇಂಡೀಸ್‌ನ ಮೊದಲ ಇನ್ನಿಂಗ್ಸ್‌ನ 12ನೇ ಓವರ್‌ನ ಮೊದಲ ಮೂರು ಎಸೆತಗಳಲ್ಲಿ ಜಸ್ಟಿನ್ ಗ್ರೀವ್ಸ್, ಟೆವಿನ್ ಇಮ್ಲಾಚ್ ಮತ್ತು ಕೆವಿನ್ ಸಿಂಕ್ಲೇರ್ ಅವರನ್ನು ಔಟ್ ಮಾಡುವ ಮೂಲಕ ನೋಮನ್ ದಾಖಲೆ ಸೃಷ್ಟಿಸಿದರು. ಗ್ರೀವ್ಸ್ 3 ಎಸೆತಗಳಲ್ಲಿ 1 ರನ್‌ಗೆ ಎರಡನೇ ಸ್ಲಿಪ್‌ನಲ್ಲಿ ಬಾಬರ್ ಅಜಮ್‌ಗೆ ಕ್ಯಾಚ್ ನೀಡಿದರು. ವಿಕೆಟ್‌ಕೀಪರ್-ಬ್ಯಾಟರ್ ಇಮ್ಲಾಚ್ ಗೋಲ್ಡನ್ ಡಕ್‌ಗೆ ಎಲ್‌ಬಿಡಬ್ಲ್ಯೂ ಆಗಿ ಔಟಾದರು. ಇದಾದ ನಂತರ, ಸಿಂಕ್ಲೇರ್ ಕ್ಯಾಚ್ ಅನ್ನು ಬಾಬರ್ ಹಿಡಿದರು. ಈ ಮೂಲಕ ಸತತ ಮೂರು ಎಸೆತಗಳಲ್ಲಿ ಮೂರು ವಿಕೆಟ್ ಪಡೆದ ನೋಮನ್ ಮಿಂಚಿದರು.

ಐದನೇ ಪಾಕಿಸ್ತಾನಿ ಬೌಲರ್

ಟೆಸ್ಟ್ ಕ್ರಿಕೆಟ್‌ನಲ್ಲಿ ನೋಮನ್ ಅಲಿ ಹ್ಯಾಟ್ರಿಕ್ ವಿಕೆಟ್ ಪಡೆದ 5ನೇ ಪಾಕಿಸ್ತಾನ ತಂಡದ ಬೌಲರ್ ಆಗಿದ್ದಾರೆ. ವಾಸಿಮ್ ಅಕ್ರಮ್ ಟೆಸ್ಟ್ ಕ್ರಿಕೆಟ್‌ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಮೊದಲ ಪಾಕಿಸ್ತಾನದ ಬೌಲರ್. ಒಂದಲ್ಲ ಎರಡು ಬಾರಿ ಈ ಸಾಧನೆ ಮಾಡಿದ್ದಾರೆ. ಇದುವರೆಗೂ ಈ ದಾಖಲೆಯನ್ನು ಯಾರಿಂದಲ್ಲೂ ಮುರಿಯಲು ಸಾಧ್ಯವಾಗಿಲ್ಲ.

ಜೂನ್ 2000 ರಲ್ಲಿ ಗಾಲೆಯಲ್ಲಿ ಶ್ರೀಲಂಕಾ ವಿರುದ್ಧ ಪಾಕಿಸ್ತಾನದ ಟೆಸ್ಟ್ ಪಂದ್ಯದ ಸಂದರ್ಭದಲ್ಲಿ ವಾಸಿಮ್ ಅಕ್ರಮ್ ಜೊತೆಗೆ ಆಲ್ ರೌಂಡರ್ ಅಬ್ದುಲ್ ರಜಾಕ್ ಹ್ಯಾಟ್ರಿಕ್ ವಿಕೆಟ್ ಪಡೆದವರ ಪಟ್ಟಿಗೆ ಸೇರಿದರು. ವೇಗದ ಬೌಲರ್ ಮೊಹಮ್ಮದ್ ಸಮಿ ಮಾರ್ಚ್ 2002 ರಲ್ಲಿ ಲಾಹೋರ್‌ನಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಟೆಸ್ಟ್ ಹ್ಯಾಟ್ರಿಕ್ ಪಡೆದ ಮೂರನೇ ಪಾಕಿಸ್ತಾನದ ಬೌಲರ್ ಆಗಿದ್ದಾರೆ.

ನೋಮನ್ ಅಲಿ ಅವರಿಂತ ಮೊದಲು, ಟೆಸ್ಟ್ ಕ್ರಿಕೆಟ್‌ನಲ್ಲಿ ಹ್ಯಾಟ್ರಿಕ್ ಪಡೆದ ಕೊನೆಯ ಪಾಕಿಸ್ತಾನದ ಬೌಲರ್ ವೇಗಿ ನಸೀಮ್ ಶಾ. ಫೆಬ್ರವರಿ 2020 ರಲ್ಲಿ ರಾವಲ್ಪಿಂಡಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಬಾಂಗ್ಲಾದೇಶ ವಿರುದ್ದದ ಟೆಸ್ಟ್ ಪಂದ್ಯದಲ್ಲಿ ನಸೀಮ್ ಈ ಸಾಧನೆ ಮಾಡಿದ್ದರು.

Story first published: Saturday, January 25, 2025, 17:34 [IST]
Other articles published on Jan 25, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+