ಪಾಕ್ vs ವಿಂಡೀಸ್ ಏಕದಿನ ಸರಣಿಯ ತಾಣ ದಿಢೀರ್ ಬದಲು: ಕಾರಣ ಇಮ್ರಾನ್ ಖಾನ್!

ಪಾಕಿಸ್ತಾನ ಹಾಗೂ ವೆಸ್ಟ್ ಇಂಡೀಸ್ ನಡುವಿನ ಏಕದಿನ ಸರಣಿ ಜೂನ್ ತಿಂಗಳಿನಲ್ಲಿ ನಡೆಯಲಿದ್ದು ಈ ಸರಣಿಯ ತಾಣವನ್ನು ದಿಢೀರ್ ಆಗಿ ಬದಲಾವಣೆ ಮಾಡಲಾಗಿದೆ ಎಂದು ಕ್ರಿಕ್ ಇನ್ಫೊ ವರದಿ ಮಾಡಿದೆ. ಈ ಸರಣಿಯನ್ನು ರಾವಲ್ಪಿಂಡಿಯಲ್ಲಿ ಆಯೋಜಿಸಲು ನಿರ್ಧರಿಸಲಾಗಿತ್ತು. ಆದರೆ ಈಗ ಮುಲ್ತಾನ್‌ನಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ. ಇಸ್ಲಮಾಬಾದ್‌ನಲ್ಲಿ ರಾಜಕೀಯ ಅನಿಶ್ಚಿತತೆ ಉಂಟಾಗಿರುವ ಕಾರಣದಿಂದಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಇಸ್ಲಮಾಬಾದ್‌ನಲ್ಲಿ ರ್‍ಯಾಲಿಗಳನ್ನು ಆಯೋಜಿಸುವ ಸಾಧ್ಯತೆಗಳು ಇದ್ದ ಕಾರಣದಿಂದಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಈ ಮೊದಲೇ ಮುಲ್ತಾನ್ ಕ್ರೀಡಾಂಗಣವನ್ನು ಬ್ಯಾಕಪ್ ಆಯ್ಕೆಯಾಗಿ ಗುರುತಿಸಿಕೊಂಡಿತ್ತು ಎನ್ನಲಾಗಿದೆ. ಇದೀಗ ಈ ತಾಣದಲ್ಲಿಯೇ ಏಕದಿನ ಸರಣಿಯನ್ನು ಆಯೋಜಿಸುವ ನಿರ್ಧಾರ ಮಾಡಲಾಗಿದೆ.

ಮುಲ್ತಾನ್ ಏಕೈಕ ಆಯ್ಕೆ
ಪಾಕಿಸ್ತಾನದ ಪ್ರಧಾನಿ ಹುದ್ದೆಯನ್ನು ಕಳೆದುಕೊಂಡಿರುವ ಇಮ್ರಾನ್ ಖಾನ್ ಸರ್ಕಾರದ ವಿರುದ್ಧ ಅನೇಕ ಪ್ರತಿಭಟನಾ ರ್‍ಯಾಲಿಗಳನ್ನು ಹಮ್ಮಿಕೊಂಡಿದ್ದಾರೆ. ಪ್ರಮುಖ ರ್‍ಯಾಲಿ ಮೇ 25 ರಂದು ನಡೆದಿದ್ದರೂ ಮುಂಬರುವ ದಿನಗಳಲ್ಲಿ ಮತ್ತಷ್ಟು ರ್‍ಯಾಲಿಗಳನ್ನು ಆಯೋಜಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಲಾಹೋರ್ ಮತ್ತು ಕರಾಚಿಯಲ್ಲಿನ ಪಿಚ್‌ಗಳ ಕಾಮಗಾರಿ ನಡೆಯುತ್ತಿದ್ದು ಪೇಶಾವರ ಕ್ರೀಡಾಂಗಣದ ನವೀಕರಣದ ಕಾರ್ಯ ನಡೆಯುತ್ತಿದೆ. ಹೀಗಾಗಿ ಮುಲ್ತಾನ್ ಕ್ರೀಡಾಂಗಣ ಮಾತ್ರೇ ಉಳಿದುಕೊಂಡಿರುವ ಆಯ್ಕೆಯಾಗಿದೆ.

ಜೂನ್ 8ರಿಂದ ಸರಣಿ ಆರಂಭ
ಮೂರು ಪಂದ್ಯಗಳ ಈ ಏಕದಿನ ಸರಣಿಯ ತಾಣಗಳು ಬದಲಾವಣೆಯಾದರೂ ದಿನಾಂಕದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಮೊದಲ ಪಂದ್ಯ ಜೂನ್ 8ರಂದು ಆಯೋಜನೆಯಾಗಲಿದೆ. ಎರಡನೇ ಪಂದ್ಯ ಜೂನ್ 10ರಂದು ನಡೆದರೆ ಮೂರನೇ ಪಂದ್ಯ ಜೂನ್ 12ರಂದು ನಡೆಯಲಿದೆ. ಎಲ್ಲಾ ಪಂದ್ಯಗಳು ಕೂಡ ಮಧ್ಯಾಹ್ನ 3:30ಕ್ಕೆ ಆರಂಭವಾಗಲಿದೆ. ನಿಕೋಲಸ್ ಪೂರನ್ ನೇತೃತ್ವದ ವೆಸ್ಟ್ ಇಂಡಿಸ್ ತಂಡ ಜೂನ್ 6ರಂದು ಇಸ್ಲಮಾಬಾದ್‌ಗೆ ಆಗಮಿಸಲಿದ್ದು ಚಾರ್ಟರ್ ವಿಮಾನದ ಮೂಲಕ ಮುಲ್ತಾನ್‌ಗೆ ಪ್ರಯಾಣಿಸಲಿದೆ.

ಟಿ20 ಸರಣಿ ವಶಕ್ಕೆ ಪಡೆದಿರುವ ಪಾಕ್
ಕಳೆದ ಡಿಸೆಂಬರ್‌ನಲ್ಲಿ ಪಾಕಿಸ್ತಾನ ಪ್ರವಾಸ ಕೈಗೊಂಡಿದ್ದ ವೆಸ್ಟ್ ಇಂಡೀಸ್ ತಂಡ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಭಾಗಿಯಾಗಿತ್ತು. ಈ ಸರಣಿಯ ಮೂರು ಪಂದ್ಯಗಳಲ್ಲಿ ಕೂಡ ಗೆಲುವು ಸಾಧಿಸಿದ್ದ ಬಾಬರ್ ಅಜಂ ಪಡೆ ವೈಟ್‌ವಾಶ್ ಮೂಲಕ ಸರಣಿಯನ್ನು ವಶಕ್ಕೆ ಪಡೆದುಕೊಂಡಿತ್ತು. ಇದೀಗ ಏಕದಿನ ಸರಣಿಯಲ್ಲಿ ಈ ಎರಡು ತಂಡಗಳ ಕದನ ಹೇಗಿರಲಿದೆ ಎಂಬುದು ಕುತೂಹಲ ಮೂಡಿಸಿದೆ.

ಇತ್ತಂಡಗಳ ಸ್ಕ್ವಾಡ್ ಹೀಗಿದೆ
ಪಾಕಿಸ್ತಾನ ತಂಡ: ಬಾಬರ್ ಅಜಮ್ (ನಾಯಕ), ಶದಾಬ್ ಖಾನ್ (ಉಪ ನಾಯಕ), ಅಬ್ದುಲ್ಲಾ ಶಫೀಕ್, ಫಖರ್ ಜಮಾನ್, ಹ್ಯಾರಿಸ್ ರೌಫ್, ಹಸನ್ ಅಲಿ, ಇಫ್ತಿಕರ್ ಅಹ್ಮದ್, ಇಮಾಮ್-ಉಲ್-ಹಕ್, ಖುಷ್ದಿಲ್ ಶಾ, ಮೊಹಮ್ಮದ್ ಹ್ಯಾರಿಸ್ (ವಿಕೆಟ್ ಕೀಪರ್), ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್) , ಮೊಹಮ್ಮದ್ ನವಾಜ್, ಮೊಹಮ್ಮದ್ ವಾಸಿಮ್ ಜೂನಿಯರ್, ಶಾಹೀನ್ ಶಾ ಅಫ್ರಿದಿ, ಶಾನವಾಜ್ ದಹಾನಿ, ಜಾಹಿದ್ ಮಹಮೂದ್
ವೆಸ್ಟ್ ಇಂಡೀಸ್ ತಂಡ: ನಿಕೋಲಸ್ ಪೂರನ್ (ನಾಯಕ), ಶಾಯ್ ಹೋಪ್ (ಉಪ ನಾಯಕ), ಎನ್‌ಕ್ರುಮಾ ಬೊನ್ನರ್, ಅಕೆಲ್ ಹೊಸೈನ್, ಕೀಸಿ ಕಾರ್ಟಿ, ಅಲ್ಜಾರಿ ಜೋಸೆಫ್, ಬ್ರಾಂಡನ್ ಕಿಂಗ್, ಶೆರ್ಮನ್ ಲೂಯಿಸ್, ಕೈಲ್ ಮೇಯರ್ಸ್, ಆಂಡರ್ಸನ್ ಫಿಲಿಪ್, ರೋವ್‌ಮನ್ ಪೊವೆಲ್, ಜೇಡನ್ ಸೀಲ್ಸ್, ರೊಮಾರಿಯೊ ಶೆಫರ್ಡ್ ವಾಲ್ಷ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications