For Quick Alerts
ALLOW NOTIFICATIONS  
For Daily Alerts
 

ODI World Cup 2023: ಏಕದಿನ ವಿಶ್ವಕಪ್ ಭಾರತ ತಂಡದಲ್ಲಿ ಈತನಿರಬೇಕು ಎಂದ ರಿಕಿ ಪಾಂಟಿಂಗ್

ಮುಂಬರುವ 2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಗೆ ಅಕ್ಟೋಬರ್ 5ರಂದು ಚಾಲನೆ ಸಿಗಲಿದ್ದು, ಇದಕ್ಕಾಗಿ ಈಗಿನಿಂದಲೇ ಹಲವು ಪ್ರಮುಖ ತಂಡಗಳು ತಯಾರಿ ಆರಂಭಿಸಿವೆ. ಆಟಗಾರರ ಫಾರ್ಮ್, ಫಿಟ್‌ನೆಸ್ ಬಗ್ಗೆ ಆಯಾ ಕ್ರಿಕೆಟ್ ಮಂಡಳಿಗಳು ಗಮನ ಹರಿಸುತ್ತಿವೆ.

2011ರ ಬಳಿಕ ಭಾರತದಲ್ಲಿ ಪೂರ್ಣ ಪ್ರಮಾಣದ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿ ಆಯೋಜನೆಯಾಗುತ್ತಿದೆ. ಹೀಗಾಗಿ, ಮತ್ತೊಮ್ಮೆ ತವರಿನಲ್ಲಿ ಐಸಿಸಿ ಟ್ರೋಫಿ ಎತ್ತಿ ಹಿಡಿಯಲು ಭಾರತ ತಂಡ ಎದುರು ನೋಡುತ್ತಿದೆ. ಏಕದಿನ ವಿಶ್ವಕಪ್ ಅಕ್ಟೋಬರ್ 5ರಂದು ಆರಂಭವಾಗಲಿದ್ದರೆ, ನವೆಂಬರ್ 19ರಂದು ಫೈನಲ್ ಪಂದ್ಯದ ಮೂಲಕ ಮುಕ್ತಾಯವಾಗಲಿದೆ.

ODI World Cup 2023: Suryakumar Yadav Should Be In Indias ODI World Cup Squad Says Ricky Ponting

ಇದೀಗ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರು ಫಾರ್ಮ್‌ನಿಂದ ಹೊರಗಿರುವ ಸೂರ್ಯಕುಮಾರ್ ಯಾದವ್ ಅವರನ್ನು ಐಸಿಸಿ ಪುರುಷರ ಏಕದಿನ ವಿಶ್ವಕಪ್ 2023ರ ಭಾರತ ತಂಡದಲ್ಲಿ ಆಯ್ಕೆ ಮಾಡಬೇಕೆಂದು ಅಭಿಪ್ರಾಯಪಟ್ಟಿದ್ದಾರೆ.

ರಿಕಿ ಪಾಂಟಿಂಗ್ ಅವರು ತಾನು ಭಾರತ ತಂಡ ಆಯ್ಕೆಗಾರರಾಗಿದ್ದರೆ, ಖಂಡಿತವಾಗಿಯೂ ಬಲಗೈ ಬ್ಯಾಟರ್ ಸೂರ್ಯಕುಮಾರ್ ಯಾದವ್ ಅವರನ್ನು ಸೇರಿಸುತ್ತಿದ್ದೆ ಎಂದು ಹೇಳಿದರು. "ನಾಯಕ ರೋಹಿತ್ ಶರ್ಮಾ, ಯುವ ಆರಂಭಿಕ ಆಟಗಾರ ಶುಭ್ಮನ್ ಗಿಲ್ ಮತ್ತು ವಿರಾಟ್ ಕೊಹ್ಲಿ ಭಾರತದ ಅಗ್ರ ಕ್ರಮಾಂಕದಲ್ಲಿ ಆಡುವ ಸಾಧ್ಯತೆಯಿದ್ದು, ಮೊದಲ ಆರು ಕ್ರಮಾಂಕಗಳಲ್ಲಿ ಸೂರ್ಯಕುಮಾರ್ ಯಾದವ್ ಅವರಿಗೆ ಒಂದು ಮೀಸಲಿರಬೇಕು," ಎಂದು ರಿಕಿ ಪಾಂಟಿಂಗ್ ತಿಳಿಸಿದ್ದಾರೆ.

ODI World Cup 2023: Suryakumar Yadav

ಇತ್ತೀಚೆಗೆ ಮುಕ್ತಾಯಗೊಂಡ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಭಾರತ ತಂಡದ ಮಧ್ಯಮ ಕ್ರಮಾಂಕ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಲು ವಿಫಲವಾಯಿತು. ವಿಶೇಷವಾಗಿ ಸೂರ್ಯಕುಮಾರ್ ಕಳಪೆಯಾಗಿದ್ದರು. ಸತತ ಮೂರು ಪಂದ್ಯಗಳಲ್ಲಿ ಸೊನ್ನೆ ಸುತ್ತುವ ಮೂಲಕ ಯಾರಿಗೂ ಬೇಡವಾದ ದಾಖಲೆ ನಿರ್ಮಿಸಿದರು. ಅಂತಿಮವಾಗಿ, ತವರಿನಲ್ಲಿ ನಡೆದ ಮೂರು ಪಂದ್ಯಗಳ ಸರಣಿಯನ್ನು ಭಾರತ ತಂಡ 2-1 ಅಂತರದಲ್ಲಿ ಸೋತಿತು.

2022ರ ಫೆಬ್ರವರಿಯಲ್ಲಿ ಅವರ ಏಕದಿನ ಅರ್ಧಶತಕದ ನಂತರ ಸೂರ್ಯಕುಮಾರ್ ಯಾದವ್ 12.28 ಸರಾಸರಿಯಲ್ಲಿ 172 ಏಕದಿನ ರನ್‌ಗಳನ್ನು ಗಳಿಸಿದ್ದಾರೆ. ತಮ್ಮ ವೃತ್ತಿಜೀವನದ ಒಂದು ಹಂತದಲ್ಲಿ ಪ್ರತಿಯೊಬ್ಬರೂ ಕಳಪೆ ಫಾರ್ಮ್ ಮೂಲಕ ಸಾಗುತ್ತಾರೆ ಎಂದು ಹೇಳುವ ಮೂಲಕ ಮುಂಬೈ ಬ್ಯಾಟರ್ ಸೂರ್ಯಕುಮಾರ್ ಯಾದವ್ ಅವರನ್ನು ರಿಕಿ ಪಾಂಟಿಂಗ್ ಬೆಂಬಲಿಸಿದರು.

ODI World Cup 2023: Suryakumar Yadav

"ಯಾವುದೇ ಒಬ್ಬ ಆಟಗಾರ ಸತತವಾಗಿ ಮೂರು ಬಾರಿ ಮೊದಲ ಎಸೆತದಲ್ಲಿ ವಿಕೆಟ್ ಒಪ್ಪಿಸಿದ್ದನ್ನು ನಾನು ನೋಡಿಲ್ಲ. ಆದರೆ ಪ್ರತಿಯೊಬ್ಬ ಅಂತಾರಾಷ್ಟ್ರೀಯ ಆಟಗಾರರು ತಮ್ಮ ವೃತ್ತಿಜೀವನದಲ್ಲಿ ಏರಿಳಿತಗಳನ್ನು ಎದುರಿಸುತ್ತಾರೆ," ಎಂದು ಐಸಿಸಿ ರಿವ್ಯೂನಲ್ಲಿ ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ರಿಕಿ ಪಾಂಟಿಂಗ್ ಹೇಳಿದರು.

ದೊಡ್ಡ ಪಂದ್ಯಗಳನ್ನು ಗೆಲ್ಲಿಸುವ ಸೂರ್ಯಕುಮಾರ್ ಯಾದವ್ ಅವರ ಪ್ರವೃತ್ತಿಯನ್ನು ರಿಕಿ ಪಾಂಟಿಂಗ್ ಎತ್ತಿ ತೋರಿಸಿದರು. "ಟಿ20 ಸ್ವರೂಪದಲ್ಲಿ ಸೂರ್ಯಕುಮಾರ್ ಅದ್ಭುತ ಪ್ರದರ್ಶನ ನೀಡಿದ್ದಾರೆ. ಭಾರತ ತಂಡವು ಅವರಿಗೆ ಬೆಂಬಲ ನೀಡಬೇಕು ಮತ್ತು ಏಕದಿನ ವಿಶ್ವಕಪ್ ತಂಡದಲ್ಲಿ ಅವರನ್ನು ಆಯ್ಕೆ ಮಾಡಿಕೊಳ್ಳಬೇಕು. ಸೂರ್ಯಕುಮಾರ್ ಯಾದವ್ ಪಂದ್ಯ ವಿಜೇತ ಆಟಗಾರನಾಗಿದ್ದು, ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಆಂಡ್ರ್ಯೂ ಸೈಮಂಡ್ಸ್ ಅವರಿಗೆ ಹೋಲಿಕೆಯಾಗುತ್ತಾರೆ," ಎಂದು ರಿಕಿ ಪಾಂಟಿಂಗ್ ತಿಳಿಸಿದರು.

Story first published: Friday, April 7, 2023, 17:35 [IST]
Other articles published on Apr 7, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+