ವಿಡಿಯೋ: ಇದೇ ದಿನ ಒಂದೇ ಇನ್ನಿಂಗ್ಸ್‌ನಲ್ಲಿ 10 ವಿಕೆಟ್ ಪಡೆದು ಇತಿಹಾಸ ನಿರ್ಮಿಸಿದ್ದ ಅನಿಲ್ ಕುಂಬ್ಳೆ

1999ರ ಫೆಬ್ರವರಿ 7ರಂದು ಅನಿಲ್ ಕುಂಬ್ಳೆ ದೆಹಲಿಯಲ್ಲಿ ಇತಿಹಾಸ ಸೃಷ್ಟಿಸಿದ್ದರು. ಪಾಕಿಸ್ತಾನ ವಿರುದ್ಧ ನಡೆದ ಟೆಸ್ಟ್ ಪಂದ್ಯದ ಒಂದೇ ಇನ್ನಿಂಗ್ಸ್‌ನಲ್ಲಿ ಎಲ್ಲಾ 10 ವಿಕೆಟ್‌ಗಳನ್ನು ಪಡೆದು ಭಾರತಕ್ಕೆ ಸ್ಮರಣೀಯ ಗೆಲುವು ತಂದುಕೊಟ್ಟಿದ್ದರು.
ಅನಿಲ್ ಕುಂಬ್ಳೆ ಈ ಮಹತ್ತರ ಸಾಧನೆ ಮಾಡಿದ ನಂತರ ಅವರಿಗೆ "ಜಂಬೋ" ಎನ್ನುವ ಅಡ್ಡಹೆಸರನ್ನು ಇಡಲಾಯಿತು. ಅನಿಲ್ ಕುಂಬ್ಳೆ ಸಾಧನೆಯನ್ನು ಕ್ರಿಕೆಟ್ ಇತಿಹಾಸದಲ್ಲಿ ಶ್ರೇಷ್ಠ ವೈಯಕ್ತಿಕ ಪ್ರದರ್ಶನ ಎಂದು ಗುರುತಿಸಲಾಗಿದೆ. ಅನಿಲ್ ಕುಂಬ್ಳೆ ಐತಿಹಾಸಿಕ ದಾಖಲೆಯ ವಿಕೆಟ್ ಪಡೆಯುವ ಮೂಲಕ ಭಾರತ 212 ರನ್‌ಗಳ ಭರ್ಜರಿ ಜಯ ಸಾಧಿಸಿತ್ತು.
ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ ಮೊದನೇ ಇನ್ನಿಂಗ್ಸ್‌ನಲ್ಲಿ 252 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಗಿತ್ತು. ಎಸ್ ರಮೇಶ್ 60 ರನ್ ಗಳಿಸಿದ್ದರೆ, ವಿವಿಎಸ್ ಲಕ್ಷ್ಮಣ್ 35 ಮತ್ತು ರಾಹುಲ್ ದ್ರಾವಿಡ್ 33 ರನ್ ಗಳಿಸಿದ್ದರು. ಮೊಹಮ್ಮದ್ ಅಜರುದ್ದೀನ್ 67 ರನ್ ಗಳಿಸುವ ಮೂಲಕ ಭಾರತ ಸವಾಲಿನ ಮೊತ್ತ ಕಲೆಹಾಕಲು ಕಾರಣವಾದರು. ಸಕ್ಲೈನ್ ಮುಷ್ತಾಕ್ 5 ವಿಕೆಟ್ ಪಡೆದು ಭಾರತಕ್ಕೆ ಕಡಿವಾಣ ಹಾಕಿದ್ದರು.
ನಂತರ ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ಭಾರತದ ಬೌಲಿಂಗ್ ದಾಳಿಗೆ ಸಿಲುಕಿ 172 ರನ್‌ಗಳಿಗೆ ಆಲೌಟ್ ಆಗಿತ್ತು.

172 ರನ್‌ಗಳಿಗೆ ಪಾಕಿಸ್ತಾನ ಆಲೌಟ್
ಶಾಹಿದ್ ಅಫ್ರಿದಿ 32 ರನ್ ಗಳಿಸಿದ್ದು ಬಿಟ್ಟರೆ ಉಳಿದ ಯಾವ ಬ್ಯಾಟರ್ ಕೂಡ ಹೆಚ್ಚಿನ ರನ್ ಗಳಿಸಲು ಸಾಧ್ಯವಾಗಲಿಲ್ಲ. ಕನ್ನಡಿಗ ಜಾವಗಲ್ ಶ್ರೀನಾಥ್ 1 ವಿಕೆಟ್ ಪಡೆದಿದ್ದರೆ, ವೆಂಕಟೇಶ್ ಪ್ರಸಾದ್ 2 ವಿಕೆಟ್ ಪಡೆದುಕೊಂಡಿದ್ದರು. ಹರ್ಭಜನ್ ಸಿಂಗ್ 3 ವಿಕೆಟ್ ಪಡೆದು ಮಿಂಚಿದ್ದರು.
ಮೊದಲನೇ ಇನ್ನಿಂಗ್ಸ್‌ನಲ್ಲಿ ಕೂಡ ಮಿಂಚಿದ್ದ ಅನಿಲ್ ಕುಂಬ್ಳೆ 4 ವಿಕೆಟ್ ಪಡೆದುಕೊಂಡಿದ್ದರು. ಇಂಝುಮಾಮ್ ಉಲ್ ಹಕ್, ಮೊಹಮ್ಮದ್ ಯೂಸುಫ್‌ರಂತಹ ಪ್ರಮುಖ ಬ್ಯಾಟರ್ ಗಳ ವಿಕೆಟ್ ಪಡೆದಿದ್ದರು. ಅಂತಿಮವಾಗಿ 172 ರನ್‌ಗಳಿಗೆ ಆಲೌಟ್ ಆದ ಪಾಕಿಸ್ತಾನ 80 ರನ್‌ಗಳ ಹಿನ್ನಡೆಯಲ್ಲಿತ್ತು.

ಭಾರತಕ್ಕೆ ಬೃಹತ್ ಮುನ್ನಡೆ
80 ರನ್‌ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಿದ 339 ರನ್‌ಗಳಿಗೆ ಆಲೌಟ್ ಆಗುವ ಮೂಲಕ 419 ರನ್‌ಗಳ ಬೃಹತ್ ಮುನ್ನಡೆ ಸಾಧಿಸಿರು. ಆರಂಭಿಕ ಆಟಗಾರ ಎಸ್ ರಮೇಶ್ 96 ರನ್ ಗಳಿಸಿದರೆ, ಸೌರವ್ ಗಂಗೂಲಿ ಅಜೇಯ 62 ರನ್ ಗಳಿಸಿದ್ದರು.
ಉಳಿದಂತೆ ರಾಹುಲ್ ದ್ರಾವಿಡ್ 29, ಸಚಿನ್ ತೆಂಡೂಲ್ಕರ್ 29, ಜಾವಗಲ್ ಶ್ರೀನಾಥ್ 49 ರನ್ ಗಳಿಸಿ ಭಾರತ ಬೃಹತ್ ಮೊತ್ತ ಕಲೆಹಾಕಲು ಕಾರಣವಾಗಿದ್ದರು.
ಇತಿಹಾಸ ಸೃಷ್ಟಿಸಿದ ಅನಿಲ್ ಕುಂಬ್ಳೆ
420 ರನ್‌ಗಳ ಬೃಹತ್ ಗುರಿಯನ್ನು ಬೆನ್ನತ್ತಿದ ಪಾಕಿಸ್ತಾನ ಮೊದಲ ವಿಕೆಟ್‌ಗೆ ಶಯೀದ್ ಅನ್ವರ್ ಮತ್ತು ಶಾಹಿದ್ ಅಫ್ರಿದಿ 101 ರನ್‌ಗಳನ್ನು ಕಲೆಹಾಕಿ ಭಾರತಕ್ಕೆ ಸವಾಲಾಕಿದ್ದರು. ಆದರೆ, ದಾಳಿಗೆ ಇಳಿದ ಅನಿಲ್ ಕುಂಬ್ಳೆ ಪಾಕಿಸ್ತಾನದ ಮೇಲೆ ಸವಾರಿ ಮಾಡಿದರು.
ಮೊದಲ ವಿಕೆಟ್‌ಗೆ 101 ರನ್ ಗಳಿಸಿದ್ದ ಪಾಕಿಸ್ತಾನ ಇನ್ನು 106 ರನ್ ಗಳಿಸುವಷ್ಟರಲ್ಲಿ ಸರ್ವಪತನ ಕಂಡಿತು. ಅನಿಲ್ ಕುಂಬ್ಳೆ ಎಲ್ಲಾ 10 ವಿಕೆಟ್‌ಗಳನ್ನು ಪಡೆದು ಇತಿಹಾಸ ನಿರ್ಮಿಸಿದರು. 26.3 ಓವರ್ ಬೌಲಿಂಗ್ ಮಾಡಿದ ಅವರು 74 ರನ್ ನೀಡಿ 10 ವಿಕೆಟ್ ಪಡೆದರು. ತಮ್ಮ ಅಮೋಘ ಆಟಕ್ಕೆ ಪಂದ್ಯದ ಶ್ರೇಷ್ಠ ಆಟಗಾರ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು.
ಅಂದು ಭಾರತ ಪಾಕಿಸ್ತಾನ ವಿರುದ್ಧ ಆಡಿದ ಟೆಸ್ಟ್ ಪಂದ್ಯದಲ್ಲಿ ನಾಲ್ಕು ಕನ್ನಡಿಗರು (ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್, ವೆಂಕಟೇಶ್ ಪ್ರಸಾದ್, ರಾಹುಲ್ ದ್ರಾವಿಡ್) ಇದ್ದರು ಎನ್ನುವುದೇ ಹೆಮ್ಮೆಯ ವಿಷಯ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications