For Quick Alerts
ALLOW NOTIFICATIONS  
For Daily Alerts
 

ಟೆಸ್ಟ್ ಇತಿಹಾಸದಲ್ಲಿ 500ಕ್ಕೂ ಅಧಿಕ ರನ್‌ಗಳ ಅಂತರದಿಂದ ಗೆದ್ದ ಕೇವಲ 4 ಘಟನೆಗಳಿವು! ದಾಖಲೆಯ ಪುಟ ಸೇರಿದ ಬಾಂಗ್ಲಾ

ಟೆಸ್ಟ್ ಪಂದ್ಯವೊಂದನ್ನು ಗೆಲ್ಲುವುದು ಏಕದಿನ ಹಾಗೂ ಟಿ20 ಪಂದ್ಯವನ್ನು ಗೆಲ್ಲುವುದಕ್ಕಿಂತ ಬಹಳ ದೊಡ್ಡ ಸವಾಲು. ಯಾಕೆಂದರೆ ಟೆಸ್ಟ್ ಮಾದರಿಯಲ್ಲಿ ಸಂಪೂರ್ಣ ತಂಡ ಸುದೀರ್ಘವಾಗಿ ಸ್ಥಿರವಾದ ಪ್ರದರ್ಶನ ನೀಡಬೇಕಾಗುತ್ತದೆ. ಟಿ20 ಹಾಗೂ ಏಕದಿನ ಮಾದರಿಯಂತೆ ಕೇವಲ ಒಬ್ಬ ಆಟಗಾರನಿಂದಾಗಿ ಇಲ್ಲಿ ಪಂದ್ಯವನ್ನು ಗೆಲ್ಲಲು ಸಾಧ್ಯವಿಲ್ಲ. ಅಪರೂಪಕ್ಕೊಮ್ಮೆ ಇದು ಸಾಧ್ಯವಾದರು ಕೂಡ ಅದನ್ನು ಸ್ಥಿರವಾಗಿ ಸಾಧಿಸಲು ಸಾಧ್ಯವಾಗದು.

ಕ್ರಿಕೆಟ್‌ನ ಅತ್ಯಂತ ಹಳೆಯ ಮಾದರಿಯಾಗಿರುವ ಟೆಸ್ಟ್ ಕ್ರಿಕೆಟ್‌ನಲ್ಲಿ ಯಶಸ್ಸು ಸಾಧಿಸಬೇಕಾದರೆ ತಂಡದ ಸಂಪೂರ್ಣ ಬೆಂಬಲ ಅಗತ್ಯವಿದೆ. ಆದರೆ ಏಕದಿನ ಹಾಗೂ ಟಿ20 ಕ್ರಿಕೆಟ್ ಮಾದರಿಗಳಲ್ಲಿ ಇರುವಂತೆಯೇ ಟೆಸ್ಟ್ ಮಾದರಿಯಲ್ಲಿಯೂ ಸಂಪೂರ್ಣ ಏಕಮುಖ ಪಂದ್ಯಗಳು ಕೂಡ ನಡೆಯುವುದಿರುತ್ತದೆ. ಆದರೆ ಟೆಸ್ಟ್ ಕ್ರಿಕೆಟ್‌ನ ಇತಿಹಾಸದಲ್ಲಿ ಅತ್ಯಂತ ಅಪರೂಪಕ್ಕೆ ಎಂಬಂತೆ ಒಂದು ತಂಡ ಪಂದ್ಯದಲ್ಲಿ ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡು ವಿಭಾಗದಲ್ಲಿಯೂ ಅತ್ಯಮೋಘ ಪ್ರದರ್ಶನ ನೀಡಿ 500ಕ್ಕೂ ಅಧಿಕ ರನ್‌ಗಳ ಅಂತರದಿಂದ ಗೆದ್ದ ಉದಾಹರಣೆಗಳು ಕೂಡ ಇದೆ. ಇದರಲ್ಲಿ ಅಫ್ಘಾನಿಸ್ತಾನ ತಂಡವನ್ನು ಬಾಂಗ್ಲಾದೇಶ 546 ರನ್‌ಗಳ ಅಂತರದಿಂದ ಮಣಿಸಿರುವುದು ಕೂಡ ಇದೆ.

Only 4 instances of team won a Test match by more than 500 runs in 146 years test history

ಆದರೆ ಇದು ಶತಮಾನಕ್ಕೂ ಅಧಿಕ ಸುದೀರ್ಘ ಕಾಲದ ಇತಿಹಾಸ ಹೊಂದಿರುವ ಟೆಸ್ಟ್ ಕ್ರಿಕೆಟ್‌ನಲ್ಲಿ ಕೇವಲ ನಾಲ್ಕು ಬಾರಿ ಮಾತ್ರವೇ ನಡೆದಿದೆ. ಆ ನಾಲ್ಕು ಅಪರೂಪದ ನಿದರ್ಶನದ ಬಗ್ಗೆ ಇಲ್ಲಿದೆ ಮಾಹಿತಿ.

4. 1911ರಲ್ಲಿ ದ. ಆಫ್ರಿಕಾ ವಿರುದ್ಧ 530 ರನ್‌ಗಳ ಅಂತರದಿಂದ ಗೆದ್ದಿದ್ದ ಆಸಿಸ್

1911ರಲ್ಲಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡ ಟೆಸ್ಟ್ ಸರಣಿಗಾಗಿ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿತ್ತು. ಈ ಸರಣಿಯ ನಾಲ್ಕನೇ ಪಂದ್ಯವನ್ನು ಮೆಲ್ಬರ್ನ್‌ನಲ್ಲಿ ಆಯೋಜಿಸಲಾಗುತ್ತು. ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಎರಡು ಇನ್ನಿಂಗ್ಸ್‌ಗಳಲ್ಲಿ ಒಟ್ಟು 328 ಮತ್ತು 578 ರನ್‌ಗಳನ್ನು ಗಳಿಸಿತ್ತು. ಆದರೆ ದಕ್ಷಿಣ ಆಫ್ರಿಕಾ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 205 ರನ್‌ಗಳಿಗೆ ಆಲೌಟ್ ಆಗಿದ್ದರೆ ಎರಡನೇ ಇನ್ನಿಂಗ್ಸ್‌ನಲ್ಲಿ 702 ರನ್‌ಗಳನ್ನು ಬೆನ್ನಟ್ಟಿದ್ದಾಗ 171 ರನ್‌ಗಳಿಗೆ ಆಲೌಟ್ ಆಗಿತ್ತು. ಈ ಮೂಲಕ 530 ರನ್‌ಗಳ ಬೃಹತ್ ಅಂತರದಿಂದ ಆಸ್ಟ್ರೇಲಿಯಾ ಗೆಲುವು ಸಾಧಿಸಿತು.

3. 546 ರನ್‌ಗಳ ಅಂತರದಿಂದ ಅಫ್ಘನ್ ಪಡೆಯನ್ನು ಮಣಿಸಿ ದಾಖಲೆ ಬರೆದ ಬಾಂಗ್ಲಾದೇಶ

ಈ ಅಪರೂಪದ ಪಟ್ಟಿಯಲ್ಲಿ ಇತ್ತೀಚೆಗೆ ನಡೆದ ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯ ಕೂಡ ಸೇರ್ಪಡೆಯಾಗಿದೆ. ಢಾಕಾದಲ್ಲಿ ನಡೆದ ಈ ಪಂದ್ಯದಲ್ಲಿ ಪ್ರವಾಸಿ ಅಫ್ಘಾನಿಸ್ತಾನ ತಂಡವನ್ನು ಬಾಂಗ್ಲಾದೇಶ ದಾಖಲೆಯ ಅಂತರದಿಂದ ಮಣಿಸಿದೆ. ಈ ಪಂದ್ಯದಲ್ಲಿ ಬಾಂಗ್ಲಾದೇಶದ ಆಟಗಾರ ನಜ್ಮುಲ್ ಹುಸೇನ್ ಶಂಟೋ ಎರಡು ಇನ್ನಿಂಗ್ಸ್‌ನಲ್ಲಿಯೂ ಶತಕ ಸಿಡಿಸಿದ ಸಾಧನೆ ಮಾಡಿದರೆ ಮಾಮಿನುಲ್ ಹಕ್ ಕೂಡ ಎರಡನೇ ಇನ್ನಿಂಗ್ಸ್‌ನಲ್ಲಿ ಅಮೋಘ ಶತಕ ಸಿಡಿಸಿದರು. 662 ರನ್‌ಗಳನ್ನು ಬೆನ್ನಟ್ಟುವ ಸವಾಲು ಪಡೆದ ಅಫ್ಘಾನಿಸ್ತಾನ ತಂಡ 115ರ ರನ್‌ಗಳಿಗೆ ಆಲೌಟ್ ಆಗುವ ಮೂಲಕ 546 ರನ್‌ಗಳ ಅಂತರದ ಸೋಲಿಗೆ ಗುರಿಯಾಗಿದೆ.

2. 1934ರಲ್ಲಿ 562 ರನ್‌ಗಳ ಅಂತರದಿಂದ ಇಂಗ್ಲೆಂಡ್ ಪಡೆಯನ್ನು ಮಣಿಸಿದ ಆಸ್ಟ್ರೇಲಿಯಾ

500ಕ್ಕೂ ಹೆಚ್ಚು ರನ್‌ಗಳಿಂದ ಎರಡು ಬಾರಿ ಗೆಲುವು ಸಾಧಿಸಿದ ಏಕೈಕ ತಂಡ ತಂಡ ಎಂಬ ದಾಖಲೆಯನ್ನು ಹೊಂದಿದೆ ಆಸ್ಟ್ರೇಲಿಯಾ. 1934 ರಲ್ಲಿ ಓವಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಈ ಎರಡನೇ ಬೃಹತ್ ಗೆಲುವು ಸಾಧಿಸಿತ್ತು ಆಸಿಸ್ ಪಡೆ. ನಾಲ್ಕನೇ ಇನ್ನಿಂಗ್ಸ್‌ನಲ್ಲಿ ಗೆಲುವಿಗಾಗಿ 708 ರನ್‌ಗಳ ಗುರಿ ಬೆನ್ನತ್ತಿದ ಇಂಗ್ಲೆಂಡ್ 562 ರನ್‌ಗಳ ಅಂತಿರದಿಂದ ಸೋಲು ಕಂಡಿತ್ತು.

1. 1928ರ ಬಳಿಕ ಇಂಗ್ಲೆಂಡ್ ಹೆಸರಿನಲ್ಲಿದೆ ಟೆಸ್ಟ್ ಕ್ರಿಕೆಟ್‌ನ ಅತಿ ದೊಡ್ಡ ಗೆಲುವು

ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ದೊಡ್ಡ ಗೆಲುವಿನ ದಾಖಲೆ ಇಂಗ್ಲೆಂಡ್‌ನ ಹೆಸರಿನಲ್ಲಿದೆ. ಆಸ್ಟ್ರೇಲಿಯಾ ವಿರುದ್ಧದ 1928ರಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಬ್ರಿಸ್ಬೇನ್‌ನಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಆಸ್ಟ್ರೇಲಿಯಾಗೆ ಗೆಲ್ಲಲು 742 ರನ್‌ಗಳ ಬೃಹತ್ ಗುರಿಯನ್ನು ನೀಡಿತ್ತು. ಈ ಪಂದ್ಯದಲ್ಲಿ ಭರ್ಜರಿ 675 ರನ್‌ಗಳ ಅಂತರದಿಂದ ಇಂಗ್ಲೆಂಡ್ ಗೆಲುವು ಸಾಧಿಸಿ ಟೆಸ್ಟ್ ಇತಿಹಾಸದ ಅತಿ ದೊಡ್ಡ ಗೆಲುವು ಸಾಧಿಸಿದೆ.

Story first published: Sunday, June 18, 2023, 19:49 [IST]
Other articles published on Jun 18, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+