ಹಾರ್ದಿಕ್ ಪಾಂಡ್ಯ ವಿಶ್ವದ ಬೆಸ್ಟ್ ಆಲ್‌ರೌಂಡರ್ ಆಗಲಿದ್ದಾರೆ: ಶೋಯೆಬ್ ಅಖ್ತರ್ ಭವಿಷ್ಯ

ಟೀಂ ಇಂಡಿಯಾ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಕುರಿತು ಪಾಕಿಸ್ತಾನ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ಭವಿಷ್ಯ ನುಡಿದಿದ್ದು, ಆತ ವಿಶ್ವದ ಬೆಸ್ಟ್ ಆಲ್‌ರೌಂಡರ್ ಆಗಿ ಹೊರಹೊಮ್ಮಲಿದ್ದಾರೆ ಎಂದು ಹೊಗಳಿಕೆಯ ಮಾತನಾಡಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಟಿ20, ಏಕದಿನ ಸರಣಿಯಲ್ಲಿ ಮಿಂಚಿನ ಆಲ್‌ರೌಂಡರ್ ಆಟವಾಡಿದ ಪಾಂಡ್ಯ ಬ್ಯಾಟ್ ಹಾಗೂ ಬೌಲಿಂಗ್ ಎರಡರಲ್ಲೂ ಮಿಂಚಿದರು. ಏಕದಿನ ಸರಣಿ ಶ್ರೇಷ್ಟ ಪ್ರಶಸ್ತಿಗೆ ಭಾಜನರಾದ ಹಾರ್ದಿಕ್, ಅಂತಿಮ ಏಕದಿನ ಪಂದ್ಯದಲ್ಲಿ ನಾಲ್ಕು ವಿಕೆಟ್ ಸಹಿತ 71ರನ್ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ಮೊದಲ ಟಿ20 ಪಂದ್ಯದಲ್ಲಿ ಮಿಂಚಿನ ಆಟವಾಡಿದ ಹಾರ್ದಿಕ್
ಸೌತಾಂಪ್ಟನ್‌ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಮಿಂಚಿನ ಆಟವಾಡಿದರು. ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮೊದಲ ಅರ್ಧಶತಕ ದಾಖಲಿಸಿದ ಹಾರ್ದಿಕ್ ಪಾಂಡ್ಯ ಭಾರತ 8 ವಿಕೆಟ್ ನಷ್ಟಕ್ಕೆ 198ರನ್ ಕಲೆಹಾಕಲು ತನ್ನದೇ ಆದ ಕೊಡುಗೆ ನೀಡಿದರು. ಜೊತೆಗೆ ಬೌಲಿಂಗ್‌ನಲ್ಲೂ ಮಿಂಚಿದ ಪಾಂಡ್ಯ 33ರನ್ ನೀಡಿ 4 ವಿಕೆಟ್ ಕಬಳಿಸಿದರು.

ಬೌಲರ್ ಆಗಿ ಹಾರ್ದಿಕ್ ಪ್ರದರ್ಶನ ಶ್ಲಾಘನೀಯ ಎಂದ ಶೋಯೆಬ್ ಅಖ್ತರ್
ಬ್ಯಾಟರ್ ಆಗಿ ಫಿನಿಷಿಂಗ್ ಜವಾಬ್ದಾರಿ ನಿಭಾಯಿಸಿದ್ದ ಹಾರ್ದಿಕ್ ಪಾಂಡ್ಯ ಇಂಜ್ಯುರಿ ಬಳಿಕ ಕಂಬ್ಯಾಕ್ ಮಾಡಿ ಐಪಿಎಲ್ 2022ರ ಸೀಸನ್‌ನಲ್ಲಿ ಬೊಂಬಾಟ್ ಪ್ರದರ್ಶನ ನೀಡಿ ಗುಜರಾತ್ ಟೈಟನ್ಸ್ ತಂಡವನ್ನ ಚಾಂಪಿಯನ್ ಪಟ್ಟಕ್ಕೇರಿಸಿದರು. ಇದಲ್ಲದೆ ಇತ್ತೀಚಿನ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಮೂರು ಪಂದ್ಯಗಳಲ್ಲಿ ಆರು ವಿಕೆಟ್ ಕಬಳಿಸಿದ ಪಾಂಡ್ಯ ಅಂತಿಮ ಪಂದ್ಯವೊಂದರಲ್ಲಿ 24ರನ್‌ಗೆ ನಾಲ್ಕು ಪ್ರಮುಖ ವಿಕೆಟ್ ಪಡೆದರು.
ಏಕದಿನ ವೃತ್ತಿಜೀವನದಲ್ಲಿ ಬೆಸ್ಟ್ ಬೌಲಿಂಗ್ ಪ್ರದರ್ಶನ ನೀಡಿದ ಪಾಂಡ್ಯ 7 ಓವರ್‌ಗಳಲ್ಲಿ 3 ಮೇಡನ್ ಓವರ್ ಸಹಿತ 24ರನ್ ನೀಡಿ 4 ಪ್ರಮುಖ ನಾಲ್ಕು ವಿಕೆಟ್ ಕಬಳಿಸಿದರು. ಜೇಸನ್ ರಾಯ್, ಬೆನ್ ಸ್ಟೋಕ್ಸ್, ಲಿಯಾಮ್ ಲಿವಿಂಗ್‌ಸ್ಟೋನ್, ಜೋಸ್ ಬಟ್ಲರ್‌ರಂತಹ ಅಪಾಯಕಾರಿ ಇಂಗ್ಲೆಂಡ್ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡುವಲ್ಲಿ ಸಮರ್ಥರಾದರು. ಜೊತೆಗೆ ಇಂಗ್ಲೆಂಡ್ ಸ್ಕೋರ್‌ಬೋರ್ಡ್ ಅನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾದ್ರು.
ಈ ಏಕದಿನ ಸರಣಿಯಲ್ಲಿ 100 ರನ್ ಹಾಗೂ 6 ವಿಕೆಟ್ ಪಡೆದ ಹಾರ್ದಿಕ್ ಪಾಂಡ್ಯ ಸರಣಿ ಶ್ರೇಷ್ಠರಾದರು
ಶಿಖರ್ ಧವನ್ ರೀಲ್ಸ್ ವೀಡಿಯೋದಲ್ಲಿ ಕಾಣಿಸಿಕೊಂಡ ರಾಹುಲ್ ದ್ರಾವಿಡ್: ಸಾಮಾಜಿಕ ಜಾಲತಾಣದಲ್ಲಿ ವೈರಲ್

ಹಾರ್ದಿಕ್ ಪಾಂಡ್ಯ ಅಪರೂಪದ ಪ್ರತಿಭೆ ಎಂದ ರಾವಲ್ಪಿಂಡಿ ಎಕ್ಸ್‌ಪ್ರೆಸ್
"ಹಾರ್ದಿಕ್ ಪಾಂಡ್ಯ ಬೌಲರ್ ಆಗಿ ತಂಡಕ್ಕೆ ಅದ್ಭುತ ಸಮತೋಲನವನ್ನು ತರುತ್ತಿರುವುದನ್ನು ನೋಡಿ ನನಗೆ ಸಂತೋಷವಾಯಿತು. ಅವರು ತಮ್ಮ ಫಿಟ್ನೆಸ್ ಬಗ್ಗೆ ಗಂಭೀರವಾಗಿರುವುದಕ್ಕೆ ನನಗೆ ಸಂತೋಷವಾಗಿದೆ. ಅವರು 1-2 ವರ್ಷಗಳ ಕಾಲ ತಂಡದಿಂದ ಹೊರಗಿರುವಾಗ ಅವರು ಸ್ವಲ್ಪ ಅನ್‌ಫಿಟ್ ಆಗಿದ್ದರಿಂದ ಆಘಾತಕಾರಿ ಪ್ರದರ್ಶನ ನೀಡಿದರು" ಎಂದು ಅಖ್ತರ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ.
ಕಳೆದ ಟಿ20 ವಿಶ್ವಕಪ್‌ನಲ್ಲಿ ಹೀನಾಯ ಪ್ರದರ್ಶನ ತೋರಿದ ಬಳಿಕ ಬರೋಡಾ ಆಲ್‌ರೌಂಡರ್ ಭರ್ಜರಿ ಕಂಬ್ಯಾಕ್ ಮಾಡಿದ್ದಾರೆ. ಶಸ್ತ್ರಚಿಕಿತ್ಸೆ ಬಳಿಕ ಐಪಿಎಲ್ 2022ರ ಸೀಸನ್‌ನಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟರ್ ಆಗಿ ಹೊರಹೊಮ್ಮಿದರು.
"ಅವರು ಆನ್‌ಫೀಲ್ಡ್‌ನಲ್ಲಿ ತಮ್ಮ ಜೀವನವನ್ನು ಆನಂದಿಸುತ್ತಿದ್ದಾರೆಂದು ತೋರುತ್ತದೆ. ಅವರು ಅಪರೂಪದ ಪ್ರತಿಭೆಯಾದ್ದರಿಂದ ಮೈದಾನದ ಹೊರಗೆ ಹೆಚ್ಚು ಗಮನಹರಿಸಬಾರದು. ಅವರು ಉತ್ತಮ ಫೀಲ್ಡರ್, ಶ್ರೇಷ್ಠ ಬೌಲರ್, ವಾಸ್ತವವಾಗಿ, ಅವರು ವೇಗದ ವಿಭಾಗಕ್ಕೆ ಉತ್ತಮ ಸೇರ್ಪಡೆಯಾಗಿದ್ದಾರೆ. ಅವರು ಇತರ ಬೌಲರ್‌ಗಳನ್ನು ಮೀರಿಸಿದ್ದಾರೆ ಮತ್ತು ಅವರ ಆಟದ ಮೇಲೆ ಕೇಂದ್ರೀಕರಿಸಲು ನಾನು ಅವರಿಗೆ ಸಲಹೆ ನೀಡುತ್ತೇನೆ, "ಎಂದು ಅಖ್ತರ್ ಇದೇ ವೇಳೆಯಲ್ಲಿ ಹೇಳಿದರು.
ವಿಡಿಯೋ: ಕಾಮನ್‌ವೆಲ್ತ್ ಗೇಮ್ಸ್ 2022ರ ಕ್ರೀಡಾಪಟುಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸಂವಾದ

ಹಾರ್ದಿಕ್ ಪಾಂಡ್ಯ ವಿಶ್ವದ ಬೆಸ್ಟ್ ಆಲ್‌ರೌಂಡರ್ ಆಗಿ ಹೊರಹೊಮ್ಮಲಿದ್ದಾರೆ: ಅಖ್ತರ್
ಇಂಗ್ಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಟಾಪ್ ಆರ್ಡರ್ ವಿಫಲಗೊಂಡ ಬಳಿಕ ಪಂತ್ ಜೊತೆಗೂಡಿದ ಹಾರ್ದಿಕ್ ಪಾಂಡ್ಯ ಜವಾಬ್ದಾರಿಯುತ ಆಟವಾಡಿದರು. 55 ಎಸೆತಗಳಲ್ಲಿ 71ರನ್ ಕಲೆಹಾಕಿದ ಪಾಂಡ್ಯ ಇನ್ನಿಂಗ್ಸ್‌ನಲ್ಲಿ 10 ಬೌಂಡರಿಗಳಿದ್ದವು. ಐದನೇ ವಿಕೆಟ್‌ಗೆ 133ರನ್‌ಗಳ ಜೊತೆಯಾಟವಾಡಿದ ಈ ಜೋಡಿ ಭರ್ಜರಿ ಪ್ರದರ್ಶನ ನೀಡಿತು. ರಿಷಭ್ ಪಂತ್ ಅಜೇಯ 125 ರನ್ ಕಲೆಹಾಕಿದರು.
"ಅವರು ಬಹಳ ಉತ್ತಮ ಬ್ಯಾಟರ್ ಆಗಿದ್ದಾರೆ. ಏಕೆಂದರೆ ಅವರು ಬಹಳ ಸಮಯದ ನಂತರ(ವಿಶ್ರಾಂತಿ) ಆಡಿದ್ದಾರೆ ಮತ್ತು ಅವರು ಹೊಂದಿರುವ ಕಾಂಪ್ಯಾಕ್ಟ್ ಶಾಟ್‌ಗಳ ಸಂಖ್ಯೆಯನ್ನ ನೋಡಿದ್ರೆ, ಅವರು ವಿಶ್ವದ ಅತ್ಯುತ್ತಮ ಆಲ್‌ರೌಂಡರ್‌ಗಳಲ್ಲಿ ಒಬ್ಬರಾಗುವುದರಲ್ಲಿ ನನಗೆ ಯಾವುದೇ ಸಂದೇಹವಿಲ್ಲ" ಎಂದು ಅಖ್ತರ್ ಹೇಳಿದರು.
ವೆಸ್ಟ್ ಇಂಡೀಸ್ ವಿರುದ್ಧದ ಮುಂಬರುವ ಏಕದಿನ ಸರಣಿಯಲ್ಲಿ ಹಾರ್ದಿಕ್ ಪಾಂಡ್ಯಗೆ ವಿಶ್ರಾಂತಿ ನೀಡಲಾಗಿದ್ದು, ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ತಂಡಕ್ಕೆ ಕಂಬ್ಯಾಕ್ ಮಾಡಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications