ಇಂಪಾಗಿ ಕೊಳಲು ಬಾರಿಸಿದ ಕ್ರಿಕೆಟರ್ ಶಿಖರ್ ಧವನ್: ವೈರಲ್ ವಿಡಿಯೋ

ನವದೆಹಲಿ, ಸೆಪ್ಟೆಂಬರ್ 4: ಟೀಮ್ ಇಂಡಿಯಾ ಓಪನರ್ ಶಿಖರ್ ಧವನ್ ಇಂಪಾಗಿ ಕೊಳಲು ಬಾರಿಸುವ ಮೂಲಕ ಕ್ರಿಕೆಟ್ ಅಭಿಮಾನಿಗಳನ್ನು ಅಚ್ಚರಿಗೊಳಿಸಿದ್ದಾರೆ. ಎತ್ತರದ ಜಾಗವೊಂದರಲ್ಲಿ ನಿಂತು ಇಂಪಾಗಿ ಕೊಳಲು ನುಡಿಸುತ್ತಿರುವ ವಿಡಿಯೋವನ್ನು ಧವನ್, ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿಕೊಂಡಿದ್ದಾರೆ.
ಇನ್‌ಸ್ಟಾಗ್ರಾಮ್ ವಿಡಿಯೋ ಜೊತೆ ಶಿಖರ್, 'ಹೊಸ ಆರಂಭ.. ಮರಗಳು, ತಂಗಾಳಿ, ಸಮುದ್ರ ಮತ್ತು ಸ್ವಲ್ಪ ಸಂಗೀತ-ಆನಂದ' ಅಂತ ಸಾಲು ಸೇರಿಸಿಕೊಂಡಿದ್ದಾರೆ. ಕೊಳಲು ವಾದನ ಕಲೆಯನ್ನು ಧವನ್ ಸುಮಾರು 4 ವರ್ಷಗಳಿಂದ ಕಲಿಯುತ್ತಿದ್ದಾರೆ. ಗಬ್ಬರ್ ಕೊಳಲು ಬಾರಿಸುವುದನ್ನು ನೋಡಿದರೆ, ಈಗ ಸಾಕಷ್ಟು ಪ್ರವೀಣರೂ ಆಗಿರುವಂತೆ ಕಾಣಿಸುತ್ತಿದೆ.
ಕಳೆದ ವರ್ಷ ಟ್ವಿಟರ್ ವಿಡಿಯೋ ಪೋಸ್ಟ್ ಮಾಡಿದ್ದ ಶಿಖರ್, 'ಹಾಯ್ ಗೆಳೆಯರೆ, ನಿಮ್ಮಲ್ಲಿ ನನಗೆ ತುಂಬಾ ಮೆಚ್ಚಿನವರೊಬ್ಬರನ್ನು ಪರಿಚಯಿಸಿಕೊಳ್ಳಬೇಕಿದೆ. ಏನನ್ನೋ ಹಂಚಿಕೊಳ್ಳಬೇಕಿದೆ. ಕಳೆದ 3 ವರ್ಷಗಳಲ್ಲಿ ನಾನು ಕೊಳಲು ವಾದನ ಕಲಿಯುತ್ತಿದ್ದೇನೆ. ನನ್ನ ಗುರು ವೇಣುಗೋಪಾಲ್ ಅವರಿಂದ ಕೊಳಲಿನ ಪಾಠ ಕಲಿಯುವ ಅವಕಾಶ ದೊರೆತಿದೆ' ಎಂದು ಬರೆದುಕೊಂಡಿದ್ದರು.
ಇತ್ತೀಚೆಗೆ ಮುಕ್ತಾಯಗೊಂಡ ವೆಸ್ಟ್ ಇಂಡೀಸ್ ಪ್ರವಾಸ ಸರಣಿಯಲ್ಲಿ ಧವನ್ ಉತ್ತಮ ಸಾಧನೆ ತೋರಿರಲಿಲ್ಲ. 3 ಟಿ20 ಪಂದ್ಯಗಳಲ್ಲಿ ಕೇವಲ 27, 2 ಏಕದಿನ ಇನ್ನಿಂಗ್ಸ್‌ಗಳಲ್ಲಿ 38 ರನ್ ಗಳಿಸಿದ್ದರು. ಟೆಸ್ಟ್ ಸರಣಿಯಿಂದ ಹೊರಗಿದ್ದ ಧವನ್, ಸೆಪ್ಟೆಂಬರ್ 15ರಿಂದ ಆರಂಭಗೊಳ್ಳಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಭಾರತ ಪರ ಮೈದಾನಕ್ಕಿಳಿಯಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications