ಪಾಕಿಸ್ತಾನ ಕ್ರಿಕೆಟ್‌ನಲ್ಲಿ ಮತ್ತೆ ಬಿರುಗಾಳಿ: ಶಾನ್ ಮಸೂದ್ ಕೈಬಿಟ್ಟು ಬಾಬರ್ ಅಜಮ್‌ಗೆ ಪಟ್ಟ?
ಪಾಕಿಸ್ತಾನ ಕ್ರಿಕೆಟ್‌ನಲ್ಲಿ ಬದಲಾವಣೆಯ ಗಾಳಿ ಬೀಸಿದೆ. ಈ ಮೂಲಕ ಯಾರೂ ಊಹಿಸದ ಒಂದು ಬದಲಾವಣೆ ಮುಂದಿನ ದಿನಗಳಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ವರದಿಗಳ ಪ್ರಕಾರ ಪಾಕ್ ತಂಡದ ಅನುಭವಿ ಬ್ಯಾಟರ್ ಬಾಬರ್ ಅಜಮ್ ಅವರನ್ನು ಮತ್ತೆ ನಾಯಕರನ್ನಾಗಿ ನೇಮಿಸುವ ಚರ್ಚೆಗಳು ವ್ಯಾಪಕವಾಗಿ ಆರಂಭವಾಗಿವೆ. ಈ ನಿಟ್ಟಿನಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮುಖ್ಯಸ್ಥ ಮೊಹ್ಸಿನ್ ನಖ್ವಿ ಪ್ರಸ್ತಾಪನೆಯನ್ನು ಸಹ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.
ಈಗಾಗಲೇ ಪಾಕ್ ತಂಡದ ನಾಯಕರಾಗಿ ಸೇವೆ ಸಲ್ಲಿಸಿದ್ದ ಬಾಬರ್ ಅಜಮ್ ಮತ್ತೆ ಒಂದು ಸ್ವರೂಪದಲ್ಲಿ ತಂಡವನ್ನು ಮುನ್ನಡೆಸುವ ಸಾಧ್ಯತೆ ಇದೆ. ಇವರನ್ನು ಶಾನ್ ಮಸೂದ್ ಅವರ ಬದಲಿಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ನಾಯಕರನ್ನಾಗಿ ನೇಮಿಸುವ ಬಗ್ಗೆ ವರದಿಗಳು ಹೊರ ಬಂದಿವೆ. ಈ ಬಗ್ಗೆ ಪಿಸಿಬಿ ಶೀಘ್ರದಲ್ಲೇ ತನ್ನ ನಿಲುವನ್ನು ಪ್ರಕಟಿಸಲಿದೆ.

ಪಾಕಿಸ್ತಾನ ತಂಡದ ನಾಯಕನಾಗಿ ಶಾನ್ ಮಸೂದ್ 2023ರಲ್ಲಿ ನೇಮಕಗೊಂಡರು. ಇವರು ಬಾಬರ್ ಅಜಮ್ ಅವರಿಂದ ನಾಯಕತ್ವ ಪಡೆದಿದ್ದರು. ಇವರ ನಾಯಕತ್ವದಲ್ಲಿ ಪಾಕ್ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲವಾದ ಕಾರಣ, ಮತ್ತೆ ಅನುಭವಿ ಆಟಗಾರ ಬಾಬರ್‌ಗೆ ಪಟ್ಟ ಕಟ್ಟುವ ಸಾಧ್ಯತೆ ದಟ್ಟವಾಗಿದೆ.
ಹೇಗಿದೆ ಶಾನ್ ಮಸೂದ್ ಸಾಧನೆ
ಶಾನ್ ಮಸೂದ್ ನಾಯಕತ್ವದಲ್ಲಿ ಪಾಕಿಸ್ತಾನ ಕಳಪೆ ದಾಖಲೆಯನ್ನು ಹೊಂದಿದೆ. ಇವರ ನಾಯಕತ್ವದಲ್ಲಿ ಪಾಕ್ ಆಡಿದ 16 ಟೆಸ್ಟ್ ಪಂದ್ಯಗಳಲ್ಲಿ 12 ಪಂದ್ಯಗಳಲ್ಲಿ ಸೋಲು ಕಂಡಿದೆ. ಬಾಂಗ್ಲಾದೇಶದಲ್ಲೂ ಪಾಕ್ ಸರಣಿ ಸೋಲಿನ ಕಹಿಯನ್ನು ಅನುಭವಿಸಿದೆ. ಈ ಸೋಲಿನ ಬಳಿಕ ಪಾಕ್ ತಂಡದಲ್ಲಿ ಬದಲಾವಣೆ ಸಾಧ್ಯತೆ ಇರುವುದಾಗಿ ತಿಳಿದು ಬಂದಿತ್ತು.

ಬಾಬರ್ ಅಜಮ್ ಈಗಾಗಲೇ ಪಾಕ್ ಪರ ಮೂರು ಫಾರ್ಮೆಟ್‌ಗಳಲ್ಲಿ ತಂಡವನ್ನು ಮುನ್ನಡೆಸಿದ ದಾಖಲೆ ಹೊಂದಿದ್ದಾರೆ. ಇವರು ಮೂರು ಸ್ವರೂಪದಲ್ಲಿ ದೀರ್ಘಕಾಲ ತಂಡದ ನಾಯಕರಾಗಿದ್ದರು. 2023ರ ಏಕದಿನ ವಿಶ್ವಕಪ್‌ನಲ್ಲ ಪಾಕ್ ನೀಡಿದ ಕಳಪೆ ಪ್ರದರ್ಶನದ ಫಲವಾಗಿ ಇವರನ್ನು ನಾಯಕತ್ವದಿಂದ ಕೈ ಬಿಡಲಾಗಿತ್ತು. ಆ ಬಳಿಕ ಮತ್ತೆ ಒಂದು ಎರಡು ಬಾರಿ ಅವರಿಗೆ ಅವಕಾಶ ಸಿಕ್ಕಿತ್ತು. ಈಗ ಬಾಬರ್ ಮತ್ತೊಮ್ಮೆ ಪಾಕ್ ತಂಡವನ್ನು ಮೈದಾನದಲ್ಲಿ ಮುನ್ನಡೆಸಲು ಸಜ್ಜಾಗಿದ್ದಾರೆ.
ಬ್ರಾಬರ್‌ಗೆ ಮೂರನೇ ಸ್ಥಾನ
ಬಾಬರ್ ಅಜಮ್ ಅವರು ಪಾಕ್ ಪರ ಮೂರು ಫಾರ್ಮೆಟ್‌ಗಳಲ್ಲಿ 148 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದಾರೆ. ಪಾಕ್ ಪರ ಅತಿ ಹೆಚ್ಚು ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ ನಾಯಕರ ಪಟ್ಟಿಯಲ್ಲಿ ಇವರಿಗೆ ಮೂರನೇ ಸ್ಥಾನ. ಅಗ್ರಸ್ಥಾನದಲ್ಲಿ ಇಮ್ರಾನ್ ಖಾನ್ ಇದ್ದು, ಇವರು 187 ಪಂದ್ಯಗಳಲ್ಲಿ ತಂಡದ ಚುಕ್ಕಾಣಿ ಹಿಡಿದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications