PAK vs AFG: ಪಾಕ್ ವಿರುದ್ಧ ಗೆದ್ದ ನಂತರ ಅಫ್ಘಾನ್‌ನ ರಶೀದ್ ಖಾನ್ ಜೊತೆ ಡ್ಯಾನ್ಸ್ ಮಾಡಿದ ಇರ್ಫಾನ್ ಪಠಾಣ್; ವಿಡಿಯೋ
ಸೋಮವಾರ, ಅಕ್ಟೋಬರ್ 23ರಂದು ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ 2023ರ ಐಸಿಸಿ ಏಕದಿನ ವಿಶ್ವಕಪ್‌ನ 22ನೇ ಪಂದ್ಯದಲ್ಲಿ ಬಾಬರ್ ಅಜಂ ನಾಯಕತ್ವದ ಪಾಕಿಸ್ತಾನದ ವಿರುದ್ಧ ಅಫ್ಘಾನಿಸ್ತಾನ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದ ನಂತರ, ಭಾರತದ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್‌ಗೆ ತಮ್ಮ ಉತ್ಸಾಹವನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ.
ಇದು ಏಕದಿನ ಕ್ರಿಕೆಟ್‌ನಲ್ಲಿ ಎಂಟು ಪ್ರಯತ್ನಗಳಲ್ಲಿ ಅಫ್ಘಾನಿಸ್ತಾನ ತನ್ನ ನೆರೆಯ ತಂಡದ ವಿರುದ್ಧ ಮೊದಲ ಬಾರಿಗೆ ಗೆಲುವು ದಾಖಲಿಸಿತು ಮತ್ತು ಎಲ್ಲಕ್ಕಿಂತ ಐಸಿಸಿ ವೇದಿಕೆಯಲ್ಲಿ ಸೋಲಿಸಿದ್ದು ಐತಿಹಾಸಿಕವಾಗಿತ್ತು.

ವಿಶ್ವಕಪ್‌ನ ಅಧಿಕೃತ ಪ್ರಸಾರಕರಾದ ಸ್ಟಾರ್ ಸ್ಪೋರ್ಟ್ಸ್‌ಗೆ ಪಂದ್ಯದ ನಂತರದ ವಿಶ್ಲೇಷಣೆಯನ್ನು ನೀಡುತ್ತಿದ್ದ ಇರ್ಫಾನ್ ಪಠಾಣ್, ಅಫ್ಘಾನಿಸ್ತಾನ ಮತ್ತು ಗುಜರಾತ್ ಟೈಟನ್ಸ್ ಆಲ್‌ರೌಂಡರ್ ರಶೀದ್ ಖಾನ್ ಅವರೊಂದಿಗೆ ಡ್ಯಾನ್ಸ್ ಮಾಡಲು ಪ್ರಾರಂಭಿಸಿದರು. ಇರ್ಫಾನ್ ಪಠಾಣ್ ಅವರು ರಶೀದ್ ಖಾನ್ ಜೊತೆ ಡ್ಯಾನ್ಸ್ ಮಾಡಿರುವ ವಿಡಿಯೋ ಶೀಘ್ರದಲ್ಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಭಾರತದ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ಅಫ್ಘಾನಿಸ್ತಾನದ ಐತಿಹಾಸಿಕ ಗೆಲುವನ್ನು ಆಚರಿಸಲು ಸೋಮವಾರ ರಾತ್ರಿ ಮೈದಾನದಲ್ಲೇ ನೃತ್ಯ ಮಾಡಲು ಪ್ರಾರಂಭಿಸಿದಾಗ ರಶೀದ್ ಖಾನ್ ಮತ್ತು ಉಳಿದ ಅಫ್ಘಾನಿಸ್ತಾನ ತಂಡದ ಸದಸ್ಯರು ಚೆಪಾಕ್ ಸ್ಟೇಡಿಯಂನಾದ್ಯಂತ ಧನ್ಯವಾದ ಸಲ್ಲಿಸಿದರು.
ಪಂದ್ಯದ ನಂತರ ಮಾತನಾಡಿದ ಪಾಕಿಸ್ತಾನ ತಂಡದ ನಾಯ ಬಾಬರ್ ಅಜಂ, ಈ ಸೋಲನ್ನು ತಂಡವಾಗಿ ಎದುರಿಸುವುದು ತುಂಬಾ ಕಷ್ಟ ಎಂದು ಹೇಳಿದ್ದಾರೆ. ಬ್ಯಾಟರ್‌ಗಳು ಉತ್ತಮ 280 ಪ್ಲಸ್ ಮೊತ್ತವನ್ನು ಹಾಕಿದ ನಂತರ, ತಂಡದ ಸೋಲಿಗೆ ಪಾಕಿಸ್ತಾನದ ಬೌಲರ್‌ಗಳು ಮತ್ತು ಫೀಲ್ಡರ್‌ಗಳನ್ನು ದೂಷಿಸಿದರು.
"ಈ ಸೋಲು ತಂಡವಾಗಿ ತುಂಬಾ ನೋವು ನೀಡಿದೆ ಮತ್ತು ಬ್ಯಾಟಿಂಗ್‌ನಲ್ಲಿ ನಮ್ಮ ಯೋಜನೆಯು ಒಟ್ಟು 280-290 ರನ್ ಗಳಿಸುವುದಾಗಿತ್ತು. ನಾವು ಅದನ್ನು ಸಾಧಿಸಿದಾಗ, ಬೌಲಿಂಗ್ ಮತ್ತು ಫೀಲ್ಡಿಂಗ್‌ನಲ್ಲಿ ನಾವು ಉತ್ತಮ ಪ್ರದರ್ಶನ ನೀಡಲಿಲ್ಲ ಎಂದು ನಾನು ಭಾವಿಸುತ್ತೇನೆ".
"ಪಂದ್ಯ ಗೆಲ್ಲಲು ಚೆನ್ನಾಗಿ ಬೌಲಿಂಗ್ ಮತ್ತು ಫೀಲ್ಡಿಂಗ್ ಮಾಡಬೇಕು. ಮಧ್ಯಮ ಓವರ್‌ಗಳಲ್ಲಿ ಸ್ಪಿನ್ನರ್‌ಗಳು ತಮಗೆ ಬೇಕಾದಂತೆ ಬೌಲಿಂಗ್ ಮಾಡಲಿಲ್ಲ. ಅವರ ಮೇಲೆ ಒತ್ತಡ ಹೇರಲಿಲ್ಲ. ಉತ್ತಮವಾಗಿ ಬೌಲ್ ಮಾಡಿದಾಗ ಎದುರಾಳಿ ತಂಡದ ಮೇಲೆ ಒತ್ತಡ ಬರುತ್ತದೆ. ಅಫ್ಘಾನಿಸ್ತಾನ ಆಡಿದ ರೀತಿಗೆ ನಾನು ಅವರ ತಂಡವನ್ನು ಅಭಿನಂದಿಸುತ್ತೇನೆ. ಅವರು ಅತ್ಯುತ್ತಮವಾಗಿ ಆಡಿದರು," ಎಂದು ಬಾಬರ್ ಅಜಂ ಪಂದ್ಯದ ನಂತರದ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಇದೇ ವೇಳೆ, 2023ರ ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ನಮ್ಮ ತಂಡಕ್ಕೆ ಐತಿಹಾಸಿಕ ಪಂದ್ಯಾವಳಿಯಾಗಲಿದೆ ಎಂದು ಅಫ್ಘಾನಿಸ್ತಾನ ತಂಡದ ನಾಯಕ ಹಶ್ಮತುಲ್ಲಾ ಶಾಹಿದಿ ಹೇಳಿದ್ದಾರೆ.
"ಈ ಗೆಲುವಿನ ರುಚಿ ಚೆನ್ನಾಗಿದೆ. ನಾವು ಬೆನ್ನಟ್ಟಿದ ರೀತಿ ತುಂಬಾ ವೃತ್ತಿಪರವಾಗಿತ್ತು. ಇತರ ಪಂದ್ಯಗಳಿಗಾಗಿ ಎದುರು ನೋಡುತ್ತಿದ್ದೇವೆ. ಇಂದು ನಾವು ಬೆನ್ನಟ್ಟಿದ ರೀತಿಯಲ್ಲಿ, ನಾವು ಅದನ್ನು ಮತ್ತೆ ಮಾಡುತ್ತೇವೆ. ಕಳೆದೆರಡು ವರ್ಷಗಳಿಂದ ನಾವು ಆಡುತ್ತಿರುವ ಗುಣಮಟ್ಟದ ಕ್ರಿಕೆಟ್, ನಂಬಿಕೆ ಏಷ್ಯಾ ಕಪ್ ಆಡುವಾಗಲೂ ಇತ್ತು".
"ಪಂದ್ಯಾವಳಿಯ ಪ್ರಾರಂಭದಲ್ಲಿ, ನಮ್ಮ ದೇಶದ ಜನರಿಗೆ ಈ ಪಂದ್ಯಾವಳಿಯನ್ನು ಐತಿಹಾಸಿಕವಾಗಿಸಲು ನಾವು ಬಯಸುತ್ತೇವೆ ಎಂದು ನಾನು ಹೇಳಿದ್ದೆ. ಮೊದಲು ಇಂಗ್ಲೆಂಡ್, ಇಂದು ಪಾಕಿಸ್ತಾನ, ಮುಂದಿನ ಇತರ ಪಂದ್ಯಗಳಿಗಾಗಿ ಎದುರು ನೋಡುತ್ತಿದೆ," ಎಂದು ಪಂದ್ಯದ ನಂತರದ ಪ್ರಸ್ತುತಿಯಲ್ಲಿ ಹಶ್ಮತುಲ್ಲಾ ಶಾಹಿದಿ ತಿಳಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications